ಉ: 365 ದಿನಗಳು
- ಉ: 365 ದಿನಗಳು By: ಗಣೇಶ (Mar 1 2008 - 11:54pm)
- ಉ: 365 ದಿನಗಳು By: savithru (Mar 1 2008 - 7:13pm)
- ಉ: 365 ದಿನಗಳು By: Sunil Jayaprakash (Feb 29 2008 - 10:58pm)
- ಉ: 365 ದಿನಗಳು By: ವೈಭವ (Mar 1 2008 - 9:06pm)
- ಉ: 365 ದಿನಗಳು By: kalpana (Feb 29 2008 - 11:14pm)
- ಉ: 365 ದಿನಗಳು By: hpn (Feb 29 2008 - 10:11pm)
- ಉ: 365 ದಿನಗಳು By: muralihr (Feb 29 2008 - 9:44am)
- ಉ: 365 ದಿನಗಳು By: kalpana (Feb 29 2008 - 4:10am)

RSS:
ಉ: 365 ದಿನಗಳು
ಸಂಪದಕ್ಕೆ ಸಂಗೀತದ edge ತಂದುಕೊಟ್ಟವರು ನೀವು.
ಸಂಗೀತದ ಕುರಿತ ಲೇಖನಗಳಿಂದ ಓದುಗರಲ್ಲಿ ಸಂಗೀತಪ್ರಿಯರಲ್ಲಿ ಒಂದು ರೀತಿ ಸೆಲೆಬ್ರಿಟಿಯಾಗಿಬಿಟ್ಟಿದ್ದೀರಿ. ನಿಮ್ಮ ಲೇಖನಗಳ ಜನಪ್ರಿಯತೆ ಇದಕ್ಕೆ ಎವಿಡೆನ್ಸು!
ನೀವು ನಿಮ್ಮ ಮೊದಲ ಬ್ಲಾಗಿನ ಲಿಂಕು ಕೊಟ್ರಿ. ನಾನು ನೀವು ಬರೆದ ಲೇಖನಗಳಲ್ಲಿ ಅತಿ ಹೆಚ್ಚು ಜನಪ್ರಿಯವಾದುವನ್ನು ಕೆಳಗೆ ಪಟ್ಟಿ ಮಾಡಿರುವೆ:
ನವರಾತ್ರಿಯ ದಿನಗಳು (ಸಿರೀಸ್)
ರಾಗ ಮೋಹನ (ಸಿರೀಸ್)
"ಇಂದಿನ ಯೋಗ ಸುಯೋಗ ಇಂದಿನ ಕರಣ ಸುಬಕರಣ"
ಕೆಲವು ಸುಭಾಷಿತಗಳು
ಕೋಗಿಲೆ ಹಾಡಿದೆ ಕೇಳಿದೆಯಾ?
(ಮತ್ತು ಇನ್ನೂ ಹಲವು!)
ನನಗೆ ಬಹಳ ಹಿಡಿಸಿದ ಲೇಖನಗಳ ಸರಣಿ - ನವರಾತ್ರಿಯ ದಿನಗಳು. ವಿಕಿಪೀಡಿಯದಲ್ಲೊಮ್ಮೆ ತಮಿಳರು ವಿಜಯ ದಸಮಿ ಮಾಡಿದ್ದನ್ನು ದಶಮಿಗೆ ಬದಲಾಯಿಸಿದ್ದೆ, ಎಷ್ಟೋ ಮಾಹಿತಿ ಸೇರಿಸಿದ್ದೆ. ಆಗಿನಿಂದ ನವರಾತ್ರಿಯ ಬಗ್ಗೆ ಸಾಕಷ್ಟು ಇಂಟರ್ನೆಟ್ಟಿನಲ್ಲಿ ಹುಡುಕಿ ಹುಡುಕಿ ಓದಿರುವೆ. ಎಲ್ಲೂ ಹುಡುಕದೆಯೇ ಇಲ್ಲೇ ಸಂಪದದಲ್ಲೇ ನವರಾತ್ರಿಯ ಬಗ್ಗೆ ಇಷ್ಟೊಂದು ಒಳ್ಳೆಯ ಓದು ಸಿಗುವುದೆಂದು ಯಾವತ್ತೂ ಎಣಿಸಿರಲಿಲ್ಲ.
ನನ್ನ ನೆನಪಿನಲ್ಲಿ ಅಚ್ಚುಳಿದ ಲೇಖನ - ಅವನಿಲ್ಲ; ಇದು ನೀವು ಬರೆದ ಲೇಖನಗಳಷ್ಟೇ ಅಲ್ಲದೆ ಸಂಪದದಲ್ಲೂ ಇದುವರೆಗೂ ಹೆಚ್ಚು ಓದಲ್ಪಟ್ಟ ಲೇಖನಗಳಲ್ಲೊಂದು.
ಪ್ರತಿಕ್ರಿಯೆ ಮುಗಿಸೋದಕ್ಕೆ ಮುನ್ನ ಇನ್ನೊಂದು ವಿಷಯ ಹೇಳಿಬಿಡಬೇಕೆಂದಿದ್ದೆ - ೩೬೫ ದಿನಗಳಾದುವು, ನನ್ನ ಕೆಲಸ ಮುಗಿಯಿತು ಎಂದು ಬರೆಯುವುದು ನಿಲ್ಲಿಸಬೇಡಿ. ನಿಮ್ಮದು ನೂರು ನಮನಗಳಾದರೆ ನಮಗೆಲ್ಲ ಓದಲು ಇಷ್ಟೊಂದು ಒಳ್ಳೆಯ ಲೇಖನಗಳನ್ನು ಕೊಟ್ಟ ನಿಮಗೆ ತಿಳುವಳಿಕೆ ಹೆಚ್ಚಿಸಿಕೊಂಡ ನಾವುಗಳು ಸಾವಿರ ನಮನಗಳನ್ನು ಸಲ್ಲಿಸಬೇಕಾದೀತು
--
ನನ್ನ ಬ್ಲಾಗ್:
ಪರಿವೇಶಣ | PariveshaNa