ಉ: ಈಶ್ವರ್ ಅಲ್ಲಾ ತೇರೋ ನಾಮ್......
- ಉ: ಈಶ್ವರ್ ಅಲ್ಲಾ ತೇರೋ ನಾಮ್...... By: sudhesh (Mar 11 2008 - 9:31am)
- ಉ: ಈಶ್ವರ್ ಅಲ್ಲಾ ತೇರೋ ನಾಮ್...... By: csomsekraiah (Mar 10 2008 - 6:58pm)
- ಉ: ಈಶ್ವರ್ ಅಲ್ಲಾ ತೇರೋ ನಾಮ್...... By: agilenag (Mar 9 2008 - 11:25am)
- ಉ: ಈಶ್ವರ್ ಅಲ್ಲಾ ತೇರೋ ನಾಮ್...... By: sudhesh (Mar 9 2008 - 1:35pm)

RSS:
ಉ: ಈಶ್ವರ್ ಅಲ್ಲಾ ತೇರೋ ನಾಮ್......
ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಇಂತಹದೇ ಅನುಭವ ನನಗೂ ಆಗಿದೆ. ನಾನು ನನ್ನ ಬ್ಯಾಂಕಿನ ಕಾರ್ಯ ನಿಮಿತ್ತ ಗುಜರಾತಿನ ಪಾಲನಪುರದಲ್ಲಿದ್ದೆ. ಅಲ್ಲಿನ ಜನ ಸಂಖ್ಯೆಯಲ್ಲಿ ಅರ್ಧದಷ್ಟು ಹಿಂದೂಗಳಾದರೆ, ಇನ್ನರ್ಧ ಮುಸ್ಲಿಮರಾಗಿತ್ತು. ವರ್ಷಪೂರ ಸ್ನೇಹಿತರಂತೆಯೇ ಇರುತ್ತಿದ್ದ ಈ ಎರಡೂ ಕೋಮಿನವರು, ಅದೇಕೋ ಏನೋ ಮಹರ್ನವಮಿ ಸಮಯ ಬಂತೆಂದರೆ ಬದ್ಧ ದ್ವೇಶಿಗಳಂತೆ ಹೊಡೆದಾಡುತ್ತಿದ್ದರು. ಕೆಲವು ಸಾವುಗಳೂ ಆಗುತ್ತಿದ್ದವು.
ನನಗೆ ಎರಡು ಚಿಕ್ಕ ಚಿಕ್ಕ ಮಕ್ಕಳಿದ್ದವು. ಅವರಿಬ್ಬರನ್ನೂ ಪಾಲನಪುರದಿಂದ ೩೦ ಕಿ.ಮಿ. ದೂರದಲ್ಲಿದ್ದ ದಾಂತೀವಾಡ ಎಂಬಲ್ಲಿನ ಕೇಂದ್ರೀಯ ವಿದ್ಯಾಲಯಕ್ಕೆ ಓದಲು ಕಳುಹಿಸುತ್ತಿದ್ದೆ. ಏಕೆಂದರೆ ಪಾಲನಪುರದಲ್ಲಾಗಲೀ, ಹತ್ತಿರದಲ್ಲೆಲ್ಲಾದರೂ ಆಗಲಿ ಗುಜರಾತಿ ಭಾಷೆಯ ಶಾಲೆಗಳನ್ನು ಬಿಟ್ಟರೆ ಬೇರೊಂದಿರಲಿಲ್ಲ. ದಾಂತೀವಾಡದಲ್ಲಿದ್ದ ಕೃಷಿ ವಿಶ್ವವಿದ್ಯಾಲಯದ ಬಸ್ಸು ಪಾಲನಪುರದಿಂದ ವಿದ್ಯಾರ್ಥಿಗಳನ್ನೂ ಉಪನ್ಯಾಸಕರನ್ನೂ ಕರೆದೊಯ್ಯುತ್ತಿತ್ತು. ಜೊತೆಯಲ್ಲಿ ಪಾಲನಪುರದಿಂದ ಕೇ.ವಿ. ಶಾಲೆಗೆ ಹೋಗುವ ಮಕ್ಕಳನ್ನೂ ಕರೆದೊಯ್ಯುತ್ತಿತ್ತು.
ಹಿಂದೂ ಮುಸ್ಲಿಮ್ ಜಗಳವಾದಾಗ, ಬಸ್ಸು ಏಕಾಏಕಿ ನಿಂತುಹೋಗುತ್ತಿತ್ತು. ಆಗ, ಹಲವಾರು ಬಾರಿ ಮಕ್ಕಳನ್ನು ಮುಸ್ಲಿಂ ಬಾಂಧವರೇ ಜೀಪಿನಲ್ಲಿ ಕರೆತಂದು ಮನೆಗೆ ಬಿಟ್ಟು ಹೋಗುತ್ತಿದ್ದರು. ಹೊಡೆದಾಟ ಬಡಿದಾಟ ಜೋರಾಗಿದೆ, ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿ ಎಂದು ಎಚ್ಚರಿಕೆಯನ್ನೂ ಕೊಡುತ್ತಿದ್ದರು.
ಇಂದು ನಾವು ನೋಡುತ್ತಿರುವ, ಅನುಭವಿಸುತ್ತಿರುವ ಕೋಮು ಗಲಬೆ, ಭಿನ್ನಾಭಿಪ್ರಾಯಗಳೆಲ್ಲಾ ನಮ್ಮ ರಾಜಕಾರಣಿಗಳ ಕೊಡುಗೆಯೇ ಸರಿ.
ಎ.ವಿ. ನಾಗರಾಜು