ಆತ್ಮೀಯ ರವಿ,
ನನ್ನದೇ ಪುಸ್ತಕದ ಬಗ್ಗೆ ನೀವು ಉಲ್ಲೇಖಿಸಿ ಬರೆದಿದ್ದು ಓದಿ ಖುಶಿಯಾಯಿತು. ಇವತ್ತಿನ ಸೂಪರ್ ಫಾಸ್ಟ್ ದಿನಗಳಲ್ಲಿ ಕಾದಂಬರಿಗಳ ಸತ್ವವನ್ನು ಕತೆಗಳು ಹೊತ್ತು ಬರಬೇಕು ಅಂತ ನನಗನಿಸುತ್ತಿತ್ತು. ಆದರೆ ನನಗೇ ಈ ಕತೆಗಳಿಗಿಂತ ಕಾದಂಬರಿಗಳನ್ನು ಓದುವುದು ಇಷ್ಟ. ಸಣ್ಣಕತೆಗಳು ಕೆಲವೊಮ್ಮೆ ಏನನ್ನೂ ಕೊಡುವುದಿಲ್ಲ ಎನ್ನುವುದು ನನ್ನ ಅನುಭವ.
ಇನ್ನು ನಾನಿನ್ನೂ ವಿದ್ಯಾರ್ಥಿ ಎಂಬ ಭಾವ ನನ್ನಲ್ಲಿ ಇರುವುದು ಆರೋಗ್ಯಕರ ಲಕ್ಷಣ ಎಂದುಕೊಂಡಿದ್ದೇನೆ. ಇದನ್ನು ಹಿಂಜರಿಕೆ ಎಂದಾಗಲೀ, ಇದರಿಂದಾಗಿ ನಾನು ಕಡಿಮೆ ಬರೆದೆ ಎಂದಾಗಲೀ ತಿಳಿಯಬೇಕಿಲ್ಲ ಅನಿಸುತ್ತದೆ. ನಿಜಕ್ಕಾದರೆ ನನ್ನ ಸಹವರ್ತಿಗಳನ್ನು ಮೆಚ್ಚುವಲ್ಲಿ ನಾನೂ ಕಂಜೂಸೇ! ಆದರೆ ಸುದೈವದಿಂದ ಸಾಕಷ್ಟು ಉತ್ತಮ ಬರಹಗಾರರು ನಮ್ಮ ಸುತ್ತ ಇದ್ದಾರೆ. ಸಂದೀಪ ನಾಯಕ, ಪ್ರಹ್ಲಾದ ಅಗಸನಕಟ್ಟೆ, ಸುನಂದಾ, ಸುಮಂಗಲಾ, ವಸುಧೇಂದ್ರ, ಸುರೇಂದ್ರನಾಥ್, ವಿವೇಕ, ಜಯಂತ, ರಾಘವೇಂದ್ರ ಪಾಟೀಲ್, ಲಂಕೇಶ, ಅನಂತಮೂರ್ತಿ, ಖಾಸನೀಸ, ಎಸ್.ದಿವಾಕರ, ಸತ್ಯನಾರಾಯಣ, ಶ್ರೀನಿವಾಸ ವೈದ್ಯ, ವೈದೇಹಿ, ಅಮರೇಶ ನುಗಡೋಣಿ, ಅಬ್ದುಲ್ ರಶೀದ್, ಎಚ್.ನಾಗವೇಣಿ, ಕಾಗಿನೆಲೆ, ಎಂ.ಎಸ್.ಶ್ರೀರಾಮ್, ಕೇಶವ ಮಳಗಿ, ರಘುನಾಥ ಚ.ಹ.,ಅಶೋಕ ಹೆಗಡೆ, ಟಿ.ಜಿ.ರಾಘವ, ಬಾಳಾಸಾಹೇಬ ಲೋಕಾಪುರ, ಚಂದ್ರಕಾಂತ ಕುಸನೂರು, ಬಿ.ಎಂ.ಬಶೀರ್, ಎಂ.ವ್ಯಾಸ, ಶ್ರೀಧರ ಬಳಗಾರ, ಅಲಕಾ ತೀರ್ಥಹಳ್ಳಿ....ವಾಹ್! ಇವರನ್ನೆಲ್ಲ ಮೆಚ್ಚದೇ ಇರಲು ಸಾಧ್ಯವೇ ? ಇದು ಬರೇ ಸಣ್ಣಕತೆಗಳ ಲೋಕವಾಯಿತು. ಕಾವ್ಯಕ್ಕೆ, ನಾಟಕಕ್ಕೆ, ಕಾದಂಬರಿಲೋಕಕ್ಕೆ ಬಂದರೆ! ಖ್ಯಾತನಾಮರನ್ನು ಬಿಡಿ. ಕಾರಂತ, ಮಾಸ್ತಿ, ಕುವೆಂಪು, ಬೇಂದ್ರೆ, ಅಡಿಗ ಎಂದೆಲ್ಲ ಪಟ್ಟಿ ದೊಡ್ದದಿದೆ. ಇವರೆಲ್ಲ ಬರೆದಿದ್ದನ್ನು ಬರೇ ಓದಿದರೂ ಸಾಕು, ಬದುಕು ಸಂಪನ್ನವಾಗಿ ಬಿಡುತ್ತದೆ ಅನಿಸುತ್ತಿರುವಾಗ ನಾನು ಬರೆಯದಿದ್ದರೂ ಪರವಾಗಿಲ್ಲ ಎಂದು ನನಗೆ ಸಹಜವಾಗಿಯೇ ಅನಿಸುತ್ತದೆ. ನನಗೆ ನಾನೊಬ್ಬ ಕತೆಗಾರನೋ ವಿಮರ್ಶಕನೋ ಅನಿಸಿಕೊಳ್ಳುವುದಕ್ಕಿಂತ ಒಳ್ಳೆಯ ಮನುಷ್ಯನಾಗುವುದು, ಆಂತರಿಕವಾಗಿ ನಾನು ಬೆಳೆಯುವುದು ಹೆಚ್ಚು ಮುಖ್ಯವಾದದ್ದು (ಸಹಜವಾಗಿಯೇ ಎಲ್ಲರಿಗೂ ಇದು ಸತ್ಯವಾದದ್ದು, ನನ್ನದೇನೂ ವಿಶೇಷವಲ್ಲ). ಅದನ್ನು ಸಾಧ್ಯವಾಗಿಸುವುದು ಬರಹ ಮತ್ತು ಈ ಎಲ್ಲ ಓದು. ಓದಿನಿಂದ ಅದು ಸುಲಭವಾಗಿ ಸಿಗುವಾಗ ಕೊಂಚ ಸ್ವಾರ್ಥಿ ಮತ್ತು ಆಲಸಿಯಾದ ನನಗೆ ಬರೆಯುವುದು ಕಡಿಮೆ ಆಕರ್ಷಕ. ಹಾಂ, ನನ್ನ ಹೆಚ್ಚುಗಾರಿಕೆ ಎಂದರೆ ನಾನು ಓದಿದ ಒಳ್ಳೆಯ ಪುಸ್ತಕಗಳ ಬಗ್ಗೆ ನಿಮಗೆಲ್ಲ ಹೇಳುತ್ತಿರುತ್ತೇನೆ. ಇನ್ನು ಮುಂದೆ "ಕಡಿಮೆ ವಿಮರ್ಶೆ, ಹೆಚ್ಚು ಸರಳ" ಪಾಲಿಸಿ ಇಟ್ಟುಕೊಂಡು ಬರೆಯುತ್ತೇನೆ. ನಮ್ಮನ್ನೆಲ್ಲ ಇದು, ಈ ಓದು ಪೊರೆಯಲಿ, ಬೆಳೆಸಲಿ. ಅಂಥ ಕಸುವುಳ್ಳದ್ದು ಸಿಕ್ಕಿದರೆ ನಾನೂ ಬರೆದೇ ಬರೆಯುತ್ತೇನೆ ಮತ್ತೆ. ನೀವು ಸಮಯ, ಶ್ರಮ ಎಲ್ಲ ವ್ಯಯಿಸಿ ನನ್ನ ಪುಸ್ತಕದ ಬಗ್ಗೆ ಬರೆದಿದ್ದಕ್ಕೆ ತುಂಬ ಕೃತಜ್ಞ. ಸಾಹಿತ್ಯ ಪ್ರೀತಿಯನ್ನು ಹರಡುತ್ತ ಹೋಗಬೇಕು, ಅದು ಅದರ ಉದ್ದೇಶ. ಆದರೆ ಏನಾಗುತ್ತಿದೆ ಎನ್ನುವುದು ನಿಮಗೂ ಗೊತ್ತಲ್ಲ!
ಉ: ಮದುವೆಯಾಗದವರ ತೊಳಲಾಟ, ಸಮಜಾಯಿಷಿ, ಜವಾಬ್ದಾರಿ, ಮತ್ತು ಸ್ವಾತಂತ್ರ್ಯಗಳ ಸ್ವಗತ...