ಈ ಪರಿ ಹೂಗಳ ರಾಶಿ ಹಾಕಿದರೆ ಸಿಲೆಕ್ಟ್ ಮಾಡುವುದು ಬಹಳ ಕಷ್ಟ.
ಗುಲಾಬಿ,ಸಂಪಿಗೆ,ದಾಸವಾಳ,ಹೂಗಳ ರಾಣಿ ಮಲ್ಲಿಗೆ.., ಇದನ್ನೆಲ್ಲಾ ಬಿಟ್ಟು ತುಂಬೆ ಹೂವನ್ನು ಮೆಚ್ಚಿದ್ದೀರಲ್ಲಾ!ಅದಕ್ಕೆ ಕಾರಣವನ್ನೂ ಕೊಟ್ಟಿದ್ದೀರಿ ಬಿಡಿ. ಶಿವಭಕ್ತಿ ಎಂದರೆ ಇದು.
ತುಂಬೆ ಗೆ ದ್ರೋಣಪುಷ್ಪೀ(ಸಂ)ಎನ್ನುತ್ತಾರೆ. ದೋಣಿಯ ಆಕಾರದಲ್ಲಿ ಹೂ ಇರುವುದರಿಂದ ಈ ಹೆಸರು.
ಹೂವಿಗೂ ಹೆಣ್ಣಿಗೂ ಬಿಡದ ನಂಟು.. ...ಇತ್ತು..ಒಂದು ಕಾಲದಲ್ಲಿ...
ತಲೆ, ಕೊರಳು, ಕಿವಿ,ಭುಜ, ಕೈಗೆಲ್ಲಾ ಒಂದೊಂದು ತರಹದ ಹೂ ಮುಡಿದುಕೊಂಡು ಸುವಾಸನಾಯುಕ್ತರಾಗಿ ಬಳುಕುತ್ತಾ ಬರುವ ಹೆಣ್ಣನ್ನು (ಈ ಕಾಲದಲ್ಲಿ ಹಾಗೆ ಬಂದರೆ ಹುಚ್ಚಿ ಎನ್ನುವರು) ಒಮ್ಮೆ ಕಣ್ಣು ಮುಚ್ಚಿ ಯೋಚಿಸಿ.
ಕಣ್ಣು ತೆರೆದು ಈಗಿನ ಹೆಣ್ಣುಗಳನ್ನು ಒಮ್ಮೆ ನೋಡಿ-
ತುಂಡು ಕೂದಲು,ರೇಖೆ ಹುಬ್ಬು,
ಬೋಳು ಹಣೆ, ತುಟಿಗೆ ಕೆಂಪು,
ಕಿವಿಗೆ ಮುತ್ತಿಡುವ ಮೊಬೈಲು,
ಬಾಯಲ್ಲಿ ಟಸ್ ಪುಸ್ ಇಂಗ್ಲೀಷ್,
ಮೀನಕಣ್ಣ ಮೇಲೆ ಸೋಡಾಗ್ಲಾಸು,
ಪರಿಮಳಕ್ಕೆ ಗಬ್ಬು ಸೆಂಟು,
allergic to ಹೂ,ಬೊಟ್ಟು,
ಹೀಗಿದ್ದರೂ..ಹಿಂದಿನವರಿಗಿಂತ
ಚಲುವೆಯರು ಈಗಿನ ಹೆಣ್ಣುಗಳು.
ಹೂ ಒಂದೋ ಗಿಡದಲ್ಲಿ,ಇಲ್ಲಾ ಹೆಣ್ಣಿನ ಜತೆ ಇರಬೇಕು. ಹೆಚ್ಚೆಂದರೆ ದೇವರ ಅಲಂಕಾರಕ್ಕೆ ಉಪಯೋಗಿಸಲಿ. ಆದರೆ ಈ ಬೊಕೆ ನೀಡುವ ಕ್ರಮ ಸರಿಯಿಲ್ಲ. ಕ್ಯಾಮರ ಫೋಸಿಗೆ ಮಾತ್ರ ಇದನ್ನು ಉಪಯೋಗಿಸುವರು,ನಂತರ ಪಕ್ಕಕೆ ಎಸೆಯುವರು. ಹೂವಿನ ಚಲುವಿಗೆ ಅವಮಾನ ಮಾಡುತ್ತಾರೆ.
ಹೂವಿನ ಜತೆಗೆ ಪಕ್ಷಿಯ ವಿಷಯ ಎತ್ತಿದ್ದೀರಿ. ಗುಬ್ಬಿ,ಗಿಳಿ,ಕಾಗೆ.. ಯಾವುದೇ ಪಕ್ಷಿಯಿರಲಿ..ಕನ್ನಡಿ,ಬಾಚಣಿಗೆಯ ಹಂಗಿಲ್ಲದೇ, ಬಣ್ಣ ಬಣ್ಣದ ಗರಿಗಳು ಹೇಗೆ ನೀಟಾಗಿ ಜೋಡಿಸಲ್ಪಟ್ಟಿದೆ.
ದೇವರಿಲ್ಲ ಎಂದವರು ಯಾರು?
ನಮಸ್ತೆ,
ಗಣೇಶ.
ಉ: ಪುಷ್ಪಬನದಲ್ಲೊಂದು ಸುತ್ತಾಟ