ಉ: ಮಾತು, ಸಮಯ, ಸಂದರ್ಭ..
- ಉ: ಮಾತು, ಸಮಯ, ಸಂದರ್ಭ.. By: venkatesh (Mar 25 2008 - 7:17am)
- ಉ: ಮಾತು, ಸಮಯ, ಸಂದರ್ಭ.. By: venkatesh (Mar 25 2008 - 7:08am)
- ಉ: ಮಾತು, ಸಮಯ, ಸಂದರ್ಭ.. By: rameshbalaganchi (Mar 21 2008 - 5:34pm)
- ಉ: ಮಾತು, ಸಮಯ, ಸಂದರ್ಭ.. By: agilenag (Mar 21 2008 - 4:47pm)
- ಉ: ಮಾತು, ಸಮಯ, ಸಂದರ್ಭ.. By: ವೈಭವ (Mar 20 2008 - 8:26am)
- ಉ: ಮಾತು, ಸಮಯ, ಸಂದರ್ಭ.. By: Aravinda (Mar 20 2008 - 8:22am)
- ಉ: ಮಾತು, ಸಮಯ, ಸಂದರ್ಭ.. By: Sunil Jayaprakash (Mar 19 2008 - 8:06pm)

RSS:
ಉ: ಮಾತು, ಸಮಯ, ಸಂದರ್ಭ..
ತುಂಬಾ ಚೆನ್ನಾಗಿದೆ.
ನಾಕಂಡ ಎರಡು ಸಂದರ್ಭಗಳನ್ನು ತಿಳಿಸ ಬಯಸುತ್ತೇನೆ:
ಅದು ಡಾ|| ರಾಜ್ ಕುಮಾರ್ ಅಭಿನಯಿಸಿದ ಭಕ್ತ ಕುಂಬಾರ ಚಿತ್ರ ಪ್ರದರ್ಶನ ನಡೆಯುತ್ತಿದ್ದ ಕಾಲ. ಯಥಾಪ್ರಕಾರ ಮಧ್ಯಂತರದಲ್ಲಿ ಮೂತ್ರಾಲಯಕ್ಕೆ ಹೋಗಿ ದೇಹಬಾದೆ ತೀರಿಸಿಕೊಳ್ಳುತ್ತಿದ್ದಾಗ, ಹಿಂದಿನಿಂದ ಬಂದಿತು ಒಂದು ಮಾತು "ಏನ್ರೀ ನಾಗರಾಜ್, ಇಲ್ಲಿ ಏನ್ಮಾಡ್ತಿದ್ದೀರಿ, ನೀವು . . ." ಏನೆಂದು ಉತ್ತರಿಸಲಿ.
ಇನ್ನೊಂದುಬಾರಿ ನಾನು ನಮ್ಮ ಬ್ಯಾಂಕಿನ ಹಳ್ಳಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಅಲ್ಲಿನ ಮಹನೀಯರೊಬ್ಬರ ಮನೆಯಲ್ಲಿ ಮಗಳ ಮದುವೆಯ ಸಂಬಂದದಲ್ಲಿ ಆರತಕ್ಷತೆ ಏರ್ಪಡಿಸಿದ್ದರು. ಈಗಿನಂತಲ್ಲಾ, ಆಗ ಮನೆಯಲ್ಲಿಯೆ ಹಜಾರದಲ್ಲಿ ಜಮಖಾನಗಳನ್ನು ಹಾಸಿ, ಬಂದವರನ್ನು ಕೂರಿಸಿ, ಹಾಡು, ಹಸೆ ಇತ್ಯಾದಿಗಳ ನಂತರ ನೆಲದ ಮೇಲೆ ಬಾಳೆ ಎಲೆ ಹಾಕಿ, ಊಟ ಹಾಕಿ ಕಳುಹಿಸುತ್ತಿದ್ದರು. ಈ ಸಂದರ್ಭದಲ್ಲಿ ಆರತಕ್ಷತೆಗೆ ಮುಂಚೆ ಬಂದ ಅತಿಥಿ ಅಭ್ಯಾಗತರಿಂದ ಹಾಡು ಹೇಳಿಸುವ ಕಾರ್ಯಮವೂ ಇತ್ತು. ಕೆಲವರು ಕೆಲವು ದೇವರ ಹಾಡುಗಳನ್ನು ಹೇಳಿದರು. ಒಬ್ಬ ಹುಡುಗನನ್ನು ಹಾಡು ಹೇಳಲು ಬಲವಂತ ಮಾಡಿದರು. ಆ ಹಳ್ಳಿಗೆ ಅವನೇ ಗಾನ ಭಯಂಕರ. ಸರಿ, ಅವನು ಹಾಡಲು ಪ್ರಾರಂಭಿಸಿಯೇ ಬಿಟ್ಟ "ಈ ದೇಹದಿಂದ ದೂರನಾದೆ ಏಕೆ ಆತ್ಮನೇ . . . ಈ ಸಾವು ನ್ಯಾಯವೇ . . " ಎಂದು. ಅವನ ಹಿಂದೆ ಕುಳಿತಿದ್ದ ಅವನ ಶಾಲಾ ಮಾಸ್ತರು ಅವನ ತಲೆಯ ಮೇಲೆ ಒಂದು ಟೊಕ್ಕಿಸಿ, ಹಾಡು ನಿಲ್ಲಿಸುವಂತೆ ಹೇಳಿದರು. ಬಂದವರೆಲ್ಲರೂ ನಕ್ಕಿದ್ದೇ ನಕ್ಕಿದ್ದು.
ಧನ್ಯವಾದಗಳು.
ಎ.ವಿ. ನಾಗರಾಜು