ಮೆಚ್ಚುಗೆಗೆ ಅರ್ಹ
- ಮಜವಾಗಿದೆ By: karthik (Mar 3 2006 - 7:16pm)
- ಮೆಚ್ಚುಗೆಗೆ ಅರ್ಹ By: ismail (Mar 3 2006 - 6:32pm)
- > ಇದೂ ಕೂಡಾ By: (Mar 3 2006 - 7:30pm)
- ಧನ್ಯವಾದಗಳು By: pqrshanth (Mar 7 2006 - 3:04pm)
- ಒಂದು ಸಣ್ಣ ತಿದ್ದುಪಡಿ By: ismail (Mar 3 2006 - 10:32pm)
- > ಇದೂ ಕೂಡಾ By: (Mar 3 2006 - 7:30pm)

RSS:
ಮೆಚ್ಚುಗೆಗೆ ಅರ್ಹ
ನಿಮ್ಮ ಪ್ರಯತ್ನ ಮೆಚ್ಚುಗೆಗೆ ಅರ್ಹ. ಆದರೆ ಹಾಬ್ಸ್ ನಾಣಿ ಆದದ್ದು ಮಾತ್ರ ಅಷ್ಟೇನೂ ಇಷ್ಟವಾಗಲಿಲ್ಲ. ನಾರಾಯಣ ಎಂಬ ಹೆಸರು ಹಾಬ್ಸ್‌ನ ವ್ಯಕ್ತಿತ್ವಕ್ಕೆ ಒಪ್ಪುವುದಿಲ್ಲ ಎಂಬುದು ನನ್ನ ಭಾವನೆ.
ಕನ್ನಡದಲ್ಲಿ ಕಾರ್ಟೂನ್‌ಗಳನ್ನು ಅನುವಾದಿಸುವುದಕ್ಕೆ ಒಂದು ಪರಂಪರೆಯೇ ಇದೆ. ಮಾಂಡ್ರೇಕ್, ಫ್ಯಾಂಟಮ್, ಮ್ಯಾಡಸ್ಟಿಬ್ಲೇಸ್, ಹೆನ್ರಿ ಮೊದಲಾದವರೆಲ್ಲಾ ಕನ್ನಡಕ್ಕೆ ಬಂದಿದ್ದಾರೆ. ಬಹಳ ಹಿಂದೆ ಫ್ಯಾಂಟಮ್ ಪಾತ್ರಕ್ಕೆ ಯಾರೋ ಒಬ್ಬರು ಭೂತಪ್ಪ ಎಂಬ ಹೆಸರು ಕೊಟ್ಟಿದ್ದರು. ಯಾವುದೋ ಒಂದು ಹಂತದಲ್ಲಿ ಭೂತಪ್ಪ ಮತ್ತೆ ಫ್ಯಾಂಟಮ್ ಆದ. ಈಗಲೂ ಫ್ಯಾಂಟಮ್ ಆಗಿಯೇ ಉಳಿದುಬಿಟ್ಟಿದ್ದಾನೆ.
ಪ್ರಜಾವಾಣಿಯಲ್ಲಿ `ಮೊದ್ದು ಮಣಿ' ಎಂಬ ಸ್ಟ್ರಿಪ್ ಬರುತ್ತಿತ್ತು. ಇದೂ ಕೂಡಾ ಮೂಲತಃ ಕನ್ನಡದ್ದಲ್ಲ. ಆ `ಮೊದ್ದುಮಣಿ' ಹೆಸರು ಮಾತ್ರ ಅವನಿಗೆ ಸರಿಯಾಗಿ ಒಪ್ಪುತ್ತಿತ್ತು. ಇದರಲ್ಲಿ ಸಂಭಾಷಣೆಗಳು ಇರುತ್ತಿರಲಿಲ್ಲ. ಆದರೆ ಒಂದು ಅಥವಾ ಎರಡು ಶಬ್ದದ ಶೀರ್ಷಿಕೆ ಇರುತ್ತಿತ್ತು. ಆ ಶೀರ್ಷಿಕೆಯನ್ನು ಬರೆಯುತ್ತಿದ್ದವರು ಖಂಡಿತವಾಗಿಯೂ ಜೀನಿಯಸ್.
ಮತ್ತೊಂದು ವಿಷಯವನ್ನೂ ಇಲ್ಲಿಯೇ ಹೇಳುವುದು ಸೂಕ್ತ ಅಂದು ಕೊಂಡಿದ್ದೇನೆ. ನಿಮ್ಮ ವೈಯಕ್ತಿಕ ಬ್ಲಾಗ್ ನಲ್ಲಿ ಇರುವ ವಿಷಯದ ಕುರಿತು ಸಂಪದದಲ್ಲಿ ಬರೆಯುವಾದ ಸ್ವಲ್ಪ ಹೆಚ್ಚು ವಿವರಗಳನ್ನು ಕೊಡುವುದು ಉತ್ತುಮ ಎನಿಸುತ್ತದೆ. ನೀವು ಕಾರ್ಟೂನುಗಳನ್ನು ಕನ್ನಡಕ್ಕೆ ಅನುವಾದಿಸಲು ಹೊರಟದ್ದೇಕೆ. ಈ ಪ್ರಕ್ರಿಯೆಯಲ್ಲಿ ನೀವು ಎದುರಿಸಿದ ಸವಾಲುಗಳು ಹೀಗೆ... ಒಂದು ಸಾಲು ಬರೆದು ಲಿಂಕ್ ಕೊಡುವುದು spaming ತರಹ ಕಾಣಿಸುತ್ತದೆ. ನನ್ನ ಅಭಿಪ್ರಾಯ ಕಟುವಾಗಿದೆ ಎನಿಸಿದರೆ ಕ್ಷಮಿಸಿ.
ಇಸ್ಮಾಯಿಲ್