ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಸೆಕ್ಯುಲರ್ ರಾಜಕಾರಣದ ಅವಾಂತರಗಳು...

April 1, 2008 - 1:33am — anivaasi

ಉ: ಸೆಕ್ಯುಲರ್ ರಾಜಕಾರಣದ ಅವಾಂತರಗಳು...

anivaasi's picture

ನಾಗಭೂಷಣರೆ, ಯುವಕರ ಜತೆಗಿನ ನಿಮ್ಮ ಅನುಭವದ ದಾಖಲೆ ಕುತೂಹಲಕಾರಿಯಾಗಿದೆ. ಇದರಲ್ಲಿ ನೀವು ಎತ್ತಿರುವ ಒಂದೆರಡು ಮಾತುಗಳ ಬಗ್ಗೆ. ಇವನ್ನು ನೀವೇ ಹೇಳಿಲ್ಲ ಮತ್ತು ಬೇರೆಯವರ ಮಾತುಗಳು ಎಂದು ಗಮನಿಸಿದ್ದೇನೆ.

ನಮ್ಮ ಪೂರ್ವಿಕರು ರಾಮಾಯಣ/ಮಹಾಭಾರತ "ನಿಜವೋ ಸುಳ್ಳೋ ಎಂಬ ಪರಿವೆಯೇ ಇಲ್ಲದೆ" ಇದ್ದರು ಎಂಬುದು ತುಂಬಾ ಹಾರಿಕೆಯ ವಿಚಾರವಾಗಿ ಕಾಣುತ್ತದೆ. ಮೂಲಭೂತವಾಗಿ ಮನುಷ್ಯನಿಗಿರುವ ಪ್ರಶ್ನಿಸುವ ಗುಣ ನಮ್ಮ ಪೂರ್ವಿಕರಲ್ಲಿ ಇರಲಿಲ್ಲ ಎಂಬುದು ಮೇಲಿನ ಮಾತಿನ ಇಂಗಿತವೆ? ಹಲವಾರು ರಾಮಾಯಣ, ಮಹಾಭಾರತವನ್ನು ಹುಟ್ಟು ಹಾಕಿರುವುದಕ್ಕೆ ಹಲವು ಕಾರಣಗಳು ಒತ್ತಡಗಳು ಇದ್ದೀತಲ್ಲವೆ? "ನಿಜವೋ ಸುಳ್ಳೋ" ಎಂದು ಪ್ರಶ್ನಿಸುವುದು ಅದರಲ್ಲಿ ಒಂದಲ್ಲ ಅನ್ನುವುದು ಎಷ್ಟು ಸರಿ? ನಮ್ಮ ಪೂರ್ವಿಕರು ರಾಮಾಯಣ/ಮಹಾಭಾರತವನ್ನು "ಆಧಾರಪೂರಿತ ನಿಜ" ಎಂದು ನಂಬದಿದ್ದರೂ ಭಾವನಾತ್ಮಕ ಸತ್ಯ, "ಪೌರಾಣಿಕ" ಸತ್ಯ ಎಂದು ನಂಬಿದ್ದರು ಅನಿಸುತ್ತದೆ. ತಾರ್ಕಿಕ ಪ್ರಶ್ನೆಗಳನ್ನು ಅದುಮಲು, ಅಳಿಸಿ ಹಾಕಲು ನಮ್ಮ ಧರ್ಮಗಳು ಸಕ್ರಿಯವಾಗಿ ಕೆಲಸಮಾಡುತ್ತಲೇ ಬಂದಿವೆ ಅಲ್ಲವೆ? ಇವನ್ನೆಲ್ಲಾ ವಿಶ್ಲೇಷಿಸದೆ "ಪರಿವೆ ಇರಲಿಲ್ಲ" ಎಂದುಕೊಂಡು ಹೊರಟರೆ ಆ ನಂಬಿಕೆಯ ಸಂಕೀರ್ಣತೆಯನ್ನು ಅರ್ಥೈಸಲು ಸಾಧ್ಯವೆ?

Quote:
ಇಂತಹ ಪ್ರಶ್ನೆಗಳೆದ್ದಿರುವುದು ಪಾಶ್ಚಾತ್ಯ ಇತಿಹಾಸ ಕಲ್ಪನೆಯನ್ನೇ ಇತಿಹಾಸ ಕಲ್ಪನೆಯ ಏಕೈಕ ಹಾಗೂ ನಿಜವಾದ ಮಾದರಿ ಎಂದು ನಂಬಿರುವವರಿಂದ

ಇಂಡಿಯಾದ ಓದಿದವರ ಎಡಬಿಡಂಗಿತನದ ಇನ್ನೊಂದು ಮುಖ ಇದು ಎಂದು ನನಗೆ ಅನಿಸುತ್ತದೆ. ಅಂದರೆ ಇಂಡಿಯಾದವರಿಗೆ ಇತಿಹಾಸದ ಬಗ್ಗೆ ಬೇರೆಯದೇ ರೀತಿಯ ಕಲ್ಪನೆ ಇದೆ ಅಂದ ಹಾಗಾಯಿತು. ಅದು ಏನು? ಅದನ್ನು ಗಂಭೀರವಾಗಿ ಆಧರಿಸಿಕೊಂಡವರು ಯಾರಾದರೂ ಇದ್ದಾರೆಯೆ? ಇದ್ದರೆ ಓದಲು, ಕಲಿಯಲು ನಾನು ಆಶಿಸುತ್ತೇನೆ. ಗಾಂಧೀಜಿಯವರು ಪಾಶ್ಚಿಮಾತ್ಯರ ಇತಿಹಾಸದ ಪರಿಕಲ್ಪನೆಯನ್ನು ಟೀಕಿಸುತ್ತಾ - ಅವರ ಇತಿಹಾಸದ ಪರಿಕಲ್ಪನೆ ಕಾಲಘಟ್ಟಗಳಲ್ಲೇಳುವ ಒಡಕು, ತೊಡಕುಗಳಿಂದಲೇ ವಿವರಿಸುವ ರೀತಿಯದು ಎಂಬ ಅರ್ಥಬರುವ ಮಾತು ಹೇಳಿರುವುದನ್ನು ಓದಿದ್ದೇನೆ. ಆದರೆ ಪಾಶ್ಚಿಮಾತ್ಯರ ಪರಿಕಲ್ಪನೆಗೆ ಪರ್ಯಾಯವಾದ ಇಂತಹ ಇತಿಹಾಸದ ಕಲ್ಪನೆ ಮತ್ತು ಒಳನೋಟ ರೂಪಗೊಂಡಿರುವುದನ್ನು ನಾನು ಕೇಳಿಲ್ಲ. ಇದ್ದರೆ ಕೇಳಲು ಇಷ್ಟಪಡುತ್ತೇನೆ. ನಾನು ಇತಿಹಾಸದ ವಿದ್ಯಾರ್ಥಿ ಅಲ್ಲದಿದ್ದರೂ ಕೂಡ ಅಲ್ಲಲ್ಲಿ ಆಗಾಗ ಓದಿಕೊಂಡ ಆಧಾರದ ಮೇಲೇ ಹೇಳುವುದಾದರೆ- ಇಂಡಿಯಾದ ಹಲವಾರು ಇತಿಹಾಸಕಾರರು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಪಾಶ್ಚಾತ್ಯರಿಗೆ ಸುಲಭವಾಗಿ ದಕ್ಕದ ಸಾಂಸ್ಕೃತಿಕ ಹಾಗು ಇನ್ನಿತಿರ ಪದರಗಳ ಒಳನೋಟಗಳನ್ನು ಬಳಸಿಕೊಂಡಿದ್ದಾರೆ. ಆದರೆ ಇತಿಹಾಸದ ಭಿನ್ನ ಪರಿಕಲ್ಪನೆ ಅಲ್ಲಿ ಇದೆಯೆ? ನನ್ನ ಗುಮಾನಿ ಇಷ್ಟು: ಅಂತಹ ಗಟ್ಟಿಯಾದ ಪರಿಕಲ್ಪನೆಯ ಅಭಾವದಿಂದಾಗಿಯೋ, ಅಥವಾ ಇರಬಹುದಾದ ಅಂತಹ ಪರಿಕಲ್ಪನೆಯ ಜನಪ್ರಚಾರದ ಅಭಾವದಿಂದಾಗಿಯೋ ಇಂದು - ಪುರಾಣ, ನಂಬಿಕೆ, ಧರ್ಮ - ಇವುಗಳು ಇತಿಹಾಸದ ಪಾಟವನ್ನು ಆವರಿಸಿಕೊಂಡುವೆ. ಈಗ ಎದ್ದಿರುವ ಈ ಅವಾಂತರಕ್ಕೆ ಯಾರು ಕಾರಣ? "ಭಾರತೀಯ ಇತಿಹಾಸ ಪರಿಕಲ್ಪನೆ" ಎಂದು ಸಾಧಿಸ ಹೊರಡುವುದಕ್ಕೆ ಇರುವ ಮೂಲ ಪರಿಕರಗಳು ಏನು? ಅವು ಎಷ್ಟು ನಿಜ ಮತ್ತು ಇದು ಎಷ್ಟು ಲಾಭದಾಯಕ?

"ವಿಷ ಬೀಜ" ಬಿತ್ತಲಾಗಿರುವುದು ಹೊಸ ವಿಚಾರವೇನಲ್ಲ. ಅದು ಹಳೆಯ ಸುದ್ದಿಯಲ್ಲವೆ? ಅದು ಎದೆ ನಡುಗಿಸುವಂತಹುದು ಎಂಬುದಂತೂ ನಿಜವೆ. ಆದರೆ, ಸಂಶೋಧನೆ ವಿಚಾರವಂತಿಕೆಗಳಲ್ಲಿ "ಭಾರತೀಯ/ಪಾಶ್ಚಿಮಾತ್ಯ", "ನಮ್ಮದು/ಅವರದು" ಎಂಬಂತಹ ಎಡಬಿಡಂಗಿತನವನ್ನು ಹುಟ್ಟುಹಾಕುವ, ಪ್ರಚಾರ ಮಾಡುವ ಕೆಲಸದಲ್ಲಿ ಎಡ/ಬಲ ಪಂಥವೆನ್ನದೆ ನಾವೆಲ್ಲರೂ ಸಮಾನಹೊಣೆಗಾರರು ಎಂದು ಅನಿಸುತ್ತದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಸೆಕ್ಯುಲರ್ ರಾಜಕಾರಣದ ಅವಾಂತರಗಳು... By: D.S.NAGABHUSHANA (2 replies) March 30, 2008 - 6:21pm
  • ಉ: ಸೆಕ್ಯುಲರ್ ರಾಜಕಾರಣದ ಅವಾಂತರಗಳು... By: anivaasi (Apr 1 2008 - 1:33am)
  • ಉ: ಸೆಕ್ಯುಲರ್ ರಾಜಕಾರಣದ ಅವಾಂತರಗಳು... By: Narayana (Mar 31 2008 - 8:32pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
ಇನ್ನಷ್ಟು


ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator