ಉ: ಯುಗ ಯುಗಾದಿ ಕಳೆದರೂ
- ಉ: ಯುಗ ಯುಗಾದಿ ಕಳೆದರೂ By: kalpana (Apr 8 2008 - 9:31pm)
- ಉ: ಯುಗ ಯುಗಾದಿ ಕಳೆದರೂ By: roopablrao (Apr 8 2008 - 9:07am)
- ಉ: ಯುಗ ಯುಗಾದಿ ಕಳೆದರೂ By: kalpana (Apr 8 2008 - 10:24am)
- ಉ: ಯುಗ ಯುಗಾದಿ ಕಳೆದರೂ By: roopablrao (Apr 8 2008 - 10:36am)
- ಉ: ಯುಗ ಯುಗಾದಿ ಕಳೆದರೂ By: mahesha (Apr 8 2008 - 10:43am)
- ಉ: ಯುಗ ಯುಗಾದಿ ಕಳೆದರೂ By: kalpana (Apr 8 2008 - 9:37pm)
- ಉ: ಯುಗ ಯುಗಾದಿ ಕಳೆದರೂ By: mahesha (Apr 8 2008 - 10:59pm)
- ಉ: ಯುಗ ಯುಗಾದಿ ಕಳೆದರೂ By: kalpana (Apr 8 2008 - 9:37pm)
- ಉ: ಯುಗ ಯುಗಾದಿ ಕಳೆದರೂ By: mahesha (Apr 8 2008 - 10:43am)
- ಉ: ಯುಗ ಯುಗಾದಿ ಕಳೆದರೂ By: roopablrao (Apr 8 2008 - 10:36am)
- ಉ: ಯುಗ ಯುಗಾದಿ ಕಳೆದರೂ By: mahesha (Apr 8 2008 - 10:10am)
- ಉ: ಯುಗ ಯುಗಾದಿ ಕಳೆದರೂ By: kalpana (Apr 8 2008 - 10:24am)

RSS:
ಉ: ಯುಗ ಯುಗಾದಿ ಕಳೆದರೂ
ರೂಪಾರವರೇ, ನಿಮ್ಮ ಮಾತಿನಿಂದ ನನ್ನ ಮನಸ್ಸಿಗೆ ಖಂಡಿತ ನೋವಾಗಲಿಲ್ಲ. ಆದರೆ, ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುವಂತಾಯಿತು. ವರುಷಕ್ಕೊಮ್ಮೆ ನಮ್ಮ ನಾಡಿಗೆ ಭೇಟಿಯಿತ್ತು, ನಮಸ್ಕಾರ-ಚೆನ್ನಾಗಿದ್ದೀರ-ಸರಿಯಿನ್ನು-ಹೋಗಿಬರ್ತೀವಿ, ಅಂತ ಪುರ್ರನೆ ಹಾರಿಬರುವವರು ನಾವು. ಅಲ್ಲಿ, ಕನ್ನಡ, ಶಾಲೆಗಳಿಂದ, ಅಂಗಡಿಗಳಿಂದ, ಆಟೋಗಳಿಂದ, ಮನೆಗಳಿಂದ, ಹೀಗೆ ಒಂದೊಂದೇ ಕಡೆಯಿಂದ ಕಣ್ಮರೆಯಾಗುತ್ತಿರುವುದನ್ನು ದಿನನಿತ್ಯ ನೋಡುತ್ತಿರುವವರು ನೀವು. ನಿಮ್ಮ ಮನಸ್ಸು ಈ ಪರಿಸ್ಥಿತಿಯಿಂದ ನನಗಿಂತ ಹೆಚ್ಚು ಉದ್ವಿಗ್ನಗೊಂಡರೆ ಅದು ಹೆಚ್ಚೇನೆಲ್ಲ.
ಮತ್ತು, ನನಗೆ ನನ್ನ ಅಭಿಪ್ರಾಯ ತಿಳಿಸುವ ಹಕ್ಕಿದೆ ನಿಜ. ಆದರೆ, ನಾನಿಲ್ಲಿ ದೂರದಲ್ಲಿ ಕೂತು ಕೇಳುವ ಸುದ್ದಿಯನ್ನು ಆಧರಿಸಿ ನೀಡುವ ಅಭಿಪ್ರಾಯಕ್ಕೆ ಬೆಲೆಯೇನು ಅಂತ ಅನ್ನಿಸಿತು? ಅಲ್ಲಿನ ನೈಜಸ್ಥಿತಿಗೆ ಅನ್ವಯವಾಗದೇ ಇರುವಂತಹ ನನ್ನ ಮಾತುಗಳು ಉರಿವ ಬೆಂಕಿಗೆ ತುಪ್ಪ ಸುರಿದ ಹಾಗಾಗಬಾರದು ನೋಡಿ! ಆದ್ದರಿಂದ, ಸುಮ್ಮನಿರುವುದೇ ಒಳ್ಳೆಯದು ಅಂದದ್ದು. ಇದು ನನ್ನ ಸ್ವಂತ "frustration"ನಿಂದ ಬಂದ ಮಾತು, ನಿಮ್ಮ ತಪ್ಪಿಲ್ಲ
ಕಡೆಯಲ್ಲಿ, ನಾನು ತಮಿಳರನ್ನು ಸಮರ್ಥಿಸುತ್ತಿಲ್ಲ. ಆದರೆ, ಪರಸ್ಪರ ದ್ವೇಷವಿಲ್ಲದ ಸಮರಸ ಜೀವನವನ್ನು ಸಮರ್ಥಿಸುತ್ತೇನೆ. ಇದು ಬರಿಯ ನನ್ನ ಕಲ್ಪನೆಯಾಗಿರಬಹುದು. ಆದರೆ, ಕಲ್ಪನ ನನ್ನ ಹೆಸರಲ್ಲವೇ?