ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ...
- ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ... By: anivaasi (Apr 11 2008 - 4:25pm)
- ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ... By: hamsanandi (Apr 11 2008 - 11:10pm)
- ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ... By: sritri (Apr 11 2008 - 11:28pm)
- ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ... By: hamsanandi (Apr 11 2008 - 11:10pm)
- ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ... By: Sunil Jayaprakash (Apr 11 2008 - 10:33am)
- ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ... By: varunbhatbm (Apr 11 2008 - 10:12am)


RSS:
ಉ: ನನ್ನ ಐಟಿ ಸಹಬಾಂಧವರಿಗೊಂದು ಪತ್ರ...
ರವಿಕೆರೆಡ್ಡಿ, ನಿಮ್ಮ ವೆಬ್ಸೈಟ್ ನೋಡಿದ ಮೇಲೆ ನನಗೆ ಎಷ್ಟು ಬೇಸರ ಆಯ್ತು ಅಂದ್ರೆ, ತಪ್ಪು ತಿಳೀಬೇಡಿ, ನನಗೆ ಮೈಯೆಲ್ಲ ಉರಿತಾ ಇದೆ (ನಿಜ, ಬೇಕಿದ್ದರೆ ಮತ್ತೊಮ್ಮೆ ಓದಿಕೊಳ್ಳಿ). ಅಲ್ಲಿ ರೀ, ನೀವು ಎಲೆಕ್ಷನ್ನಿಗೆ ನಿಲ್ತಾ ಇದ್ದೀರಾ. ನಿಲ್ಲಿ ಯಾರು ಬೇಡ ಅಂದಿದ್ದಾರೆ, ಆದರೆ ಕನ್ನಡಕ್ಕೆ ಕನಿಷ್ಠ ಸೌಜನ್ಯ ಬೇಡವೇ.
ಎಷ್ಟು ಸುಲಭವಾಗಿ ಹೇಳಿಬಿಟ್ರೀ, ಈ ಮಾತನ್ನ. ನಿಮ್ಮ ಲೇಖನಗಳನ್ನು ಇಷ್ಟು ದಿನ ಓದಿ ಪ್ರೋತ್ಸಾಹಿಸಿದವರು ಇಂಗ್ಲೀಷಿನವರೋ, ಕನ್ನಡದವರೋ ? ಅಲ್ಲ ಕರ್ನಾಟಕದ ರಾಜಧಾನಿ ಬೆಂಗಳೂರಿನ ಅದರಲ್ಲೂ ಜಯನಗರವೋ, ಬಿಟಿಎಂ ನಿಂದಲೋ ನಿಲ್ತೀನಿ ಅಂದ್ರಲ್ಲ, ನಿಮ್ಮ ಪತ್ರವನ್ನು ಕನ್ನಡದಲ್ಲಿ ಮೊದಲು ಮಾಡಬೇಕಿದ್ದು, ನಿಮ್ಮ ನೈತಿಕೆ ಹೊಣೆಯಾಗಿತ್ತು. ಕರ್ನಾಟಕದಿಂದ ಎಲೆಕ್ಷನ್ನಿಗೆ ನಿಲ್ತಾ ಇಂಗ್ಲೀಷಿನಲ್ಲಿ ಪ್ರಚಾರ ಮಾಡುತ್ತಿದ್ದೀರಲ್ಲ, ಇದು ಯಾವ ರೀತಿಯ ಮೌಲ್ಯಾಗ್ರಹ ನನಗೆ ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ.