ಹೊಸ ಪುಸ್ತಕಗಳಿಗೆ ಸಹಜವಾಗಿಯೇ ಹೆಚ್ಚು ಸಮಯ ಬೇಕಾಗುತ್ತದೆ. ಹಳೆ ಪುಸ್ತಕಗಳನ್ನು ಯಾವಾಗಲೂ ಇಡಿಯಾಗಿ ಓದಬೇಕಿಲ್ಲ. ಆಗಾಗ್ಗೆ ಅದರ ರಸಸ್ಥಾನಗಳನ್ನು ತಿರುವಿಹಾಕಿದರೆ ಸಾಕು. ಇಡಿಯ ಪುಸ್ತಕದ ರಸಾಸ್ವಾದನೆ ಸಿಕ್ಕುತ್ತದೆ. ನಾನಾದರೆ ಹೊಸ ಪುಸ್ತಕಗಳಿಗೆ ಹೆಚ್ಚು ಸಮಯ ನೀಡುತ್ತೇನೆ.
ಏನೆಂದರೂ ಪುಸ್ತಕಗಳು ಪ್ರಕಟವಾಗುತ್ತಿರುವ ಭರಾಟೆ ನೋಡಿದರೆ ಅವುಗಳನ್ನೆಲ್ಲ ಕೊಂಡು, ಓದಿ, ಆಸ್ವಾದಿಸುವುದು ಆಗದ ಮಾತೇ ಸೈ. ನಮ್ಮ ಆಯಸ್ಸಿಗೆ, ವೇಳೆಗೆ, ಆರೋಗ್ಯಕ್ಕೆ ತಕ್ಕಂತೆ ಸಾಧ್ಯವಾದಷ್ಟು ಓದು. ಉಳಿದಂತೆ ಮೆಲುಕು.
ಎಲ್ಲಕ್ಕೂ ಮಾಡುವಂತೆ ಓದೆಗೂ ಒಂದು ಚೌಕಟ್ಟು, ಶಿಸ್ತು ಹಾಕಿಕೊಂಡು ಉಳಿಸಿಕೊಂಡು ಬಂದರೆ ಯಾವುದೇ ಓದು ಇಕ್ಕಟ್ಟೂ ಆಗಬೇಕಿಲ್ಲ, ಬಿಕ್ಕಟ್ಟೂ ಆಗಬೇಕಿಲ್ಲ. ಅಲ್ಲವೆ?
ಉ: ಪುಸ್ತಕ ಓದುವುದರ ಇಕ್ಕಟ್ಟುಗಳು