ಅಂದು - ಇಂದು

ಅಂದು - ಇಂದು

ಅಂದು

ನನ್ನ ಪಾಟಿ ಕರಿಯದು| ಅದರ ಕಟ್ಟು ಬಿಳಿಯದು ||
ಬಹಳ ಚಂದ ಇರುವುದು | ಬರಿಯಲಿಕ್ಕೆ ಬರುವುದು ||

ಅಪ್ಪ ದುಡ್ಡು ಕೊಟ್ಟರು | ಬಳಪವೊಂದು ತಂದೆನು ||
ಅ ಆ ಇ ಈ ಬರೆದೆನು| ಅಮ್ಮನ ಮುಂದೆ ಹಿಡಿದೆನು ||

ಅಮ್ಮ ಹಿಗ್ಗಿ ಹೋದಳು | ಉಂಡೆಯೊಂದ ಕೊಟ್ಟಳು ||
ಗಪಾ ಗಪಾ ತಿಂದೆನು | ಥಕಾ ಥಕಾ ಕುಣಿದೆನು||

ಇಂದು
ನನ್ನ ಟ್ಯಾಬ್  pc ಕರಿಯದು | ಅದರ ಫ್ರೇಮ್ ಬಿಳಿಯದು ||
ಬಹಳ ಚಂದ ಇರುವುದು | ಬರಿಯಲಿಕ್ಕೂ (ಸಹ) ಬರುವುದು ||

ಅಪ್ಪ (ಕ್ರೆಡಿಟ್) ಕಾರ್ಡ್ ಕೊಟ್ಟರು | ಮೆಮೊರಿ ಸ್ಟಿಕ್ ತಂದೆನು ||
a b  c d ಕ್ಲಿಕ್ಕಿಸಿದೆನು |  ಅಮ್ಮನ ಮುಂದೆ ಹಿಡಿದೆನು ||

ಅಮ್ಮ (ವಾರೆ) ನೋಟ ಬೀರಿದಳು | pizza ಆರ್ಡರ್ ಮಾಡಿದಳು ||
(ಪಿಜ್ಜಾ) ತೆಗೆದುಕೊಂಡು ಹೋದೆನು | TV ಯ ಮುಂದೆ ಕುಳಿತೆನು||

Comments

Submitted by kaulgudns Mon, 11/19/2012 - 10:33

'ಅಂದು' ಭಾಗ‌ ನಾವು ಶಾಲೆಯಲ್ಲಿದ್ದಾಗ‌ ಓದಿದ್ದು (ಮೂಲ‌ ಕವಿಯ‌ ಹೆಸರು ನೆನಪಿಲ್ಲ‌). 'ಇಂದು' ಭಾಗ‌ ನಾನು ಗಮನಿಸಿದನ್ತೆ.