ಗೆಳೆಯರೇ, ಹೈನುಗಾರಿಕೆಯಲ್ಲಿ (ಹಾಲಿಗೆ ನಂಟಾದ ಬಿಸಿನೆಸ್) ಕರ್ನಾಟಕದ ಎರಡನೆಯ ಸ್ಥಾನದಲ್ಲಿದೆ, ಹಾಗೆ ಹೀಗೆ ಅಂತ ಸುದ್ಧಿಗಳು ಬರುತ್ತಿರುತ್ತವೆ. ಹಾಲು ಎಂದಾಕ್ಷಣ ಒಂದು ಜೆರ್ಸಿ ಹಸುವಿನ ಚಿತ್ರ ನಮ್ಮ ಕಣ್ಣ ಮುಂದೆ ಬರುವಷ್ಟು ನಮ್ಮ ಮನಸ್ಸನ್ನು ಹಸು ಆವರಿಸಿಕೊಂಡುಬಿಟ್ಟಿದೆ. ಆದರೆ ನಾವು ಚಿಕ್ಕವರಿದ್ದಾಗ ನಮ್ಮ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿರುತ್ತಿದ್ದ ಎಮ್ಮೆಗಳು ಎಲ್ಲಿಗೆ ಹೋದುವು ?
ಈಗ ನೋಡಿ, ಯಾರನ್ನಾದರೂ ಬಯ್ಯಬೇಕಿದ್ರೆ, "ಎಮ್ಮೇದೇ" ಅಂತ ಬಯ್ತಾರೆ..ಯಾಕೆ ? ಎಮ್ಮೆ ಏನು ತಪ್ಪು ಮಾಡಿತ್ತು.
ಎಮ್ಮೆ ಹಾಲು ಕುಡಿದ್ರೆ ಮಂದ ಆಗ್ತಾರಂತ...ನಿಜವೇ ? ಇದಕ್ಕೇನಾದ್ರೂ ವೈಜ್ಞಾನಿಕ ಕಾರಣಗಳಿವೆಯೇ ? ಹಾಗ್ನೋಡುದ್ರೆ, ಎಮ್ಮೆ ಹಾಲು ತುಂಬಾ ಗಟ್ಟಿಯಾಗಿರುತ್ತಂತೆ.
ಎಮ್ಮೆಗೆ ತುಂಬಾ ಸ್ಟಾಮಿನಾ ಇದ್ಯಂತೆ..ಆದ್ರೂ ಎಮ್ಮೆ ಹಾಲು ಹಸುವಿನ ಹಾಲಿಗೆ ಹೋಲಿಸಿದರೆ ಎರಡನೆಯ ದರ್ಜೆ ಆಗಿದೆ. ಯಾಕೆ ?
ಒಟ್ನಲ್ಲಿ, ಎಮ್ಮೆಗೆ ತುಂಬಾ ಅನ್ಯಾಯ ಆಗ್ತಿದೆ ಮಹಾಸ್ವಾಮಿ. ಎಮ್ಮೆ V/S ಹಸು ಹೋಲಿಕೆಗಳು ನಿಮಗೆ ಗೊತ್ತಿದ್ದರೆ ತಿಳಿಸಿಕೊಡಿ.









ಉ: ಎಮ್ಮೆಗೇಕೆ ತಾತ್ಸಾರ ?
ಎಮ್ಮೆ ಯಾವಾಗಲು ತುಂಬಾ ಮಂದ ಬುದ್ದಿಯ ಪ್ರಾಣಿ , ಅ) ಯಾಕೆಂದರೆ ಅದಕ್ಕೆ ಎಷ್ಟು ಹೊಡೆದರು ಅದು ಸುಮ್ಮನೆ ಇರುತ್ತೆ . ಬ) ಅದರ ಮೇಲೆ ಕುಳಿತರು ಅದು ಏನು ಮಾಡುವುದಿಲ್ಲ. ಕ) ಅದು ಅದರ ಕರುವಿಗೆ ಹಾಲು ಕೊಡದೆ ಹಾಗೆಯೇ ಹಾಲು ಹಿಂಡಿಕೊಳ್ಳಲು ಬಿಡುತದೆ . ದ) ಅದಕ್ಕೆ ಎಷ್ಟೇ ಹಾರ್ನ್ ಮಾಡಿದರು ಅದು ದಾರಿ ಬಿಡುವಿದಿಲ್ಲ.. ಅದಕ್ಕೆ ಬ್ರೇಕ್ ಇನ್ಸ್ಪೆಕ್ಟರ್ ಅಂತೀವಿ :)
ಆದರೆ ದೇಶೀ ಹಸುವು ಈ ಮೇಲಿನ ಉದಾಹರಾಣೆಗೆ ತದ್ವಿರುದ್ದ ಅಲ್ಲವೇ ?
ಉ: ಎಮ್ಮೆಗೇಕೆ ತಾತ್ಸಾರ ?
ಯಾರೇ ಕೂಗಾಡಲಿ, ಊರೇ ಹೋರಾಡಲಿ
ಎಮ್ಮೇ ನಿನಗೆ ಸಾಟಿಯಿಲ್ಲ, ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೇ ಸಾಗುವೆ!!!!
ಎಷ್ಟು ಸರಿಯಾಗಿ ಹೇಳಿದ್ದಾರಲ್ವಾ?
ಉ: ಎಮ್ಮೆಗೇಕೆ ತಾತ್ಸಾರ ?
ಆತ್ಮೀಯ
ಎಮ್ಮೆ ಹಾಲಿನಿ೦ದ ಮಾಡಿದ ತುಪ್ಪವನ್ನ ಹೋಮಕ್ಕೆ ಹಾಕಲ್ಲ ಹಸುದೇ ಯಾಕೆ ಶ್ರೇಷ್ಟನೋ ಗೊತ್ತಿಲ್ಲ
ಎಮ್ಮೆ ಹಾಲು ಮ೦ದ, ಗಟ್ಟಿ ಬುದ್ದಿನ ಮ೦ದ ಮಾಡುತ್ತೆ ಅ೦ತಾರೆ ಸರ್ಯಾಗಿ ಗೊತ್ತಿಲ್ಲಪ್ಪ.
ಹಸು ನೋಡಕ್ಕೆ ಮುದ್ದಾಗಿರುತ್ತೆ.ಒಳ್ಳೆ ಕಲರ್ರು
ಎಮೇದು ಯಾವಾಗ್ಲೂ ಒ೦ದೇ ಕಲರ್ರು ಅದಕ್ಕೆ
ಹರಿ
ಉ: ಎಮ್ಮೆಗೇಕೆ ತಾತ್ಸಾರ ?
ಮಹಿಷಾಸುರನ ನೆನಪಾಯ್ತು... ಹಾಗಾಗಿ ಎಮ್ಮೆಗಳೂ ಕೂಡ ಅಸುರರ ಜಾತಿ....ಅಂತ ಇರಬಹುದೇ?
:)
ಉ: ಎಮ್ಮೆಗೇಕೆ ತಾತ್ಸಾರ ?
ಹೌದು ಎಮ್ಮೆಗೆ ತುಂಬಾ ಸ್ಟಾಮಿನಾ ಇರಬಹುದು.
ನಾನೊಮ್ಮೆ ಶಾಲೆಗೆ ಸೈಕಲ್ಲಿನಲ್ಲಿ ಹೋಗೋವಾಗ ಎಡಬದಿಯಿಂದ ಎಮ್ಮೆಯೊಂದು ಓಡಿಬಂದು ಗುದ್ದಿ ನನ್ನನ್ನು ಬೀಳಿಸಿತ್ತು. ನಾನ್ ಕೆಳಗೆ ಬಿದ್ದೆ, ನನ್ನ ಸೈಕಲ್ಲಿನ handle ಎಲ್ಲ ಸೊಟ್ಟಗಾಗಿತ್ತು. ಆದರೆ ಎಮ್ಮೆ ಮಾತ್ರ ಏನೂ ಆಗದವರಂತೆ ಸುಮ್ಮನೆ ನಿಂತಿತ್ತು. ನಾನ್ ಎದ್ದು ಅದಕ್ಕೆ ಬೈದರೂ ಸುಮ್ಮನೆ ನಿಂತಿತ್ತು. ಎಮ್ಮೆ ಮೇಲೆ ಮಳೆ ಹೊಯ್ದಂತೆ !
ಉ: ಎಮ್ಮೆಗೇಕೆ ತಾತ್ಸಾರ ?
"ಎಮ್ಮೆಗೇಕೆ ತಾತ್ಸಾರ?" ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದ್ದರೆ ಎಮ್ಮೆಯನ್ನೇ ಕೇಳಬೇಕು!
"ಎಮ್ಮೆ ಎಂದರೇಕೆ ತಾತ್ಸಾರ?" ಅಥವಾ "ಎಮ್ಮೆಯ ಬಗ್ಗೆಯೇಕೆ ತಾತ್ಸಾರ?" ಎಂದಾಗಬೇಕಿತ್ತು ಪ್ರಶ್ನೆ ಅಲ್ಲವೇ?
ಕೊಳಕು ಎಮ್ಮೆಗಳು ??
ಎಮ್ಮೆಗೇಕೆ ತಾತ್ಸಾರ ?
ಸಂಪದಿಗರೇಕೋ ಈಚೀಚೆಗೆ, ’ಚರ್ಚೆಯ
ದಿವಾಕರ ಅವರೆ,
ಗಣೇಶರೆ >>>
ಗಣೇಶರೆ
ಪಾರ್ಥರ ಐಡಿಯಾ ಸೂsಪರ್ !
ಗಣೇಶ ಮತ್ತು ಪಾರ್ಥಸಾರಥಿ ಯವರಿಗೆ
ಪಾರ್ಥರೆ,