November 14, 2012 - 8:06pm
ಹಣದ ಸಿರಿಯ ಮಾಯೆಯಲಿ
ಹಣದ ಸಿರಿಯ ಮಾಯೆಯಲಿ ಜನ ಜಗವೇ ಮುಳುಗಿದೆಯಲ್ಲಾ
ಗುಣವೆಂಬುದು ಹಣದ ಸಿರಿಯೆದುರು ಸೋತು ನಿಂದಿದೆಯಲ್ಲಾ
ಸಿರಿಯೇ ಮೋಸಗಾತಿಯು ನೀನು ಬಲು ಆಸೆಕಾರರೂ ನಾವೆಲ್ಲಾ
ಸಿರಿಯೇ ಮೋಹಿನಿಯು ನೀನು ಮನದಿ ಮರುಳಾದವರು ನಾವೆಲ್ಲಾ
ಏರಿಓಡುವ ಕುದುರೆಯಲಿ ಕಡಿವಾಣವಿಲ್ಲದ ಸವಾರರು ನಾವೇಲ್ಲಾ
ಪರಿತಾಪಿಸುವ ಹಣವೇ ನೀನು ಮನದ ಚಂಚಲೆಯಲಿಯೇ ನಾವೆಲ್ಲಾ
ಸಿರಿಬಂದ ಕಾಲಕ್ಕೆನಗೆ ಸೋದರಿ ಸೋದರರೇಲ್ಲಾ ಮಾಯವೆಲ್ಲಾ
ಸಿರಿತನವ ಕಂಡು ಕರುಬಿ ಬಂಧು ಬಾಂಧವರಿಲ್ಲಿ ಮಾಯವೆಲ್ಲಾ
ಪರಿವಾರ ಬಲದಿಂದಿದ್ದ ಸ್ನೇಹ ಸ್ನೇಹಿತಕ್ಕೂ ಕುತ್ತು ತಂದಿತೆಲ್ಲಾ
ಸಿರಿಯಿಂದ ಯಾವ ಸದ್ಗುಣವನು ನಾ ಕೊಂಡು ಕೊಳ್ಳಲಾಗದಲ್ಲಾ
ಸಿರಿವಂತ ಧನವಂತರಾದರೇ ನಮಗೆಂದೂ ಬೆಲೆಯಿಲ್ಲವೇಯಿಲ್ಲಾ
ಪರಿಭವ ಕಂಡಂದಿನಿಂದ ಕುಟುಂಭದಲಿ ನೆಮ್ಮದಿಯು ಕಾಣೆನಲ್ಲಾ
ಪರಂಜ್ಯೋತಿ ಶಿವನೆಂಬ ಜ್ಯೋತಿಯಾರಿದರೇ ಜಗವು ಮಿಥ್ಯೆಯೇ..ಲ್ಲಾ
ಧರೆಯಲಿ ನಿಲ್ಲುವುದು ನಮ್ಮ ಸದ್ಗುಣವೇ ಕೊನೆಗೆ ನೆಲೆಯಾಗಿಯೆಲ್ಲಾ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಬಹಳ ಬಹಳ ಚೆನ್ನಾಗಿದೆ.
saraswathichandrasmo ರವರಿಗೆ,