ಉ: ಅನನ್ಯ ಅಲ್ಲಮ (೬)
- ಉ: ಅನನ್ಯ ಅಲ್ಲಮ (೬) By: csomsekraiah (Apr 15 2008 - 6:28pm)
- ಉ: ಅನನ್ಯ ಅಲ್ಲಮ (೬) By: rameshbalaganchi (Apr 15 2008 - 7:26pm)
- ಉ: ಅನನ್ಯ ಅಲ್ಲಮ (೬) By: csomsekraiah (Apr 14 2008 - 4:06pm)
- ಉ: ಅನನ್ಯ ಅಲ್ಲಮ (೬) By: ಸಂಗನಗೌಡ (Apr 14 2008 - 5:23pm)
- ಉ: ಅನನ್ಯ ಅಲ್ಲಮ (೬) By: rameshbalaganchi (Apr 13 2008 - 7:50pm)

RSS:
ಉ: ಅನನ್ಯ ಅಲ್ಲಮ (೬)
ನಿಮ್ಮ ಮಾತು ಅಪ್ಪಟ ನಿಜ ಸೋಮಶೇಖರಯ್ಯನವರೆ,
ನಿಮ್ಮ ಲೇಖನ ಮತ್ತು ಈ ಪ್ರತಿಕ್ರಿಯೆಯ ಮಹಿಮೆ ನೋಡಿ!! ನಾನು ಎಸ್. ಎಸ್.ಎಲ್. ಸಿ ಓದುತ್ತಿದ್ದ ಕಾಲದಲ್ಲಿ ಸಂಸ್ಕೃತ ಮೇಷ್ಟ್ರು ರಜೆ ಹಾಕಿದ್ದರೆ ಕನ್ನಡ ತರಗತಿಯಲ್ಲ್ಯಿ ಕೂತು ಹೆಚ್ಚು ಅರ್ಥವಾಗದಿದ್ದರೂ ಸ್ವಾರಸ್ಯವಿರುವಂತೆ ಕೇಳಿಸಿಕೊಳ್ಳುತ್ತಿದ್ದೆ. ಆಗಿನ ಪ್ರಭುಲಿಂಗ ಲೀಲೆಯಲ್ಲಿನ ಪದ್ಯಗಳು ಅವು ನನಗೆ ಪಠ್ಯವಲ್ಲದಿದ್ದರೂ- ಬಹುಶ: ಅದರ ನಾದಮಾಧುರ್ಯಕ್ಕಿರಬೇಕು- ತಟ್ಟನೆ ನೆನಪಿಗೆ ಬಂತು
ಆರು ನಮ್ಮನು ಜರೆದವರು ಜಂಭಾರಿಯೋ ದನುಜಾರಿಯೋ ಕಾಮಾರಿಯೋ
ತೋರವನ ಹೆಡೆತಲೆಗುಗಿವೆ ನಾಲಿಗೆಯ ಬೇರುಸಹಿತವೆ ಕೀಳುವೆನು
ಕೈವಾರವೇಕೆನುತೆದ್ದು ಬಂದನು ಧೀರತನದಲಿ ಸಿದ್ಧರಾಮನು ಗಜರಿ ಗರ್ಜಿಸುತ.
ಲೇಸು ಲೇಸೈ ಸಿದ್ಧರಾಮನೆ ವಾಸಿ . . . . . . . . .( ನೆನಪಿಲ್ಲ ಕ್ಷಮಿಸಿ)
ಸಾಸಿರಕೆ ವೆಗ್ಗಳಿಸಿತಲ್ಲಾ ಸುಡು ಯತಿತ್ವವನು
ಈಸು ಕೋಪಾಟೋಪ ರೋಷಾವೇಶವೇತಕೆ ಯೋಗಿಯಾದ
ನಿರಾಸೆವಂತಂಗೆನುತಲಿದ್ದನು ನಗುತ ಪ್ರಭುರಾಯ.