ಹಬ್ಬದ after effect

ಹಬ್ಬದ after effect

"ನಾಳೆಯಿಂದ ಬೆಳಗ್ಗೆ ಎದ್ದಾಗ ಬ್ಲಾಕ್ ಟೀ, ನಂತರ ನಾಸ್ಟಾಕ್ಕೆ ಇಡ್ಲಿ, ಮಧ್ಯಾಹ್ನ ೩ ಚಪಾತಿ ಪಲ್ಯ, ಸಾಯಂಕಾಲ ಫ್ರುಟ್ ಜ್ಯೂಸ್, ರಾತ್ರಿ ಮುದ್ದೆ ಸಾರು, ಸ್ವಲ್ಪ ವಾಕ್ ಮಾಡಿ ಮಲಗಿ, ಬೆಳಗ್ಗೆ ಬೇಗ ಎದ್ದು ಜಾಗಿಂಗ್ ಮಾಡೋಣ ಅಂತ ಇದೀನಿ" ಅಂದಳು ನನ್ನಾಕೆ.


"ಯಾಕೆ? ಏನಾಯ್ತೆ?"


"ಏನಿಲ್ಲಾ, ಸ್ವಲ್ಪ ಡಯಟ್ ಮಾಡೋಣ ಅಂತ.."


"ನಿನ್ನ ತೂಕ ಜಾಸ್ತಿಯಾಗಿದೆ ಅಂತ ಯಾರಾದರೂ ಹೇಳಿದರಾ?"


"ನನ್ನದಲ್ಲರೀ..ನಿಮ್ಮದೇ..!ನಿಮಗೆ ಬೇಸರವಾಗದಿರಲಿ ಅಂತ ನಿಮ್ಮ ಜತೆ ನಾನೂ ಡಯಟ್ ಮಾಡುವೆ"


"ಅದಕ್ಕೇನಂತೆ ಮಾಡೋಣ" ಅಂದೆ. ನನ್ನ ಒಳಿತಿಗೇ ಹೇಳುತ್ತಿರುವಾಗ ಯಾಕೆ ವಿರೋಧಿಸಲಿ.. ಹೇಗೂ ಉಪವಾಸ ಮಾಡಿಸುವುದಿಲ್ಲವಲ್ಲಾ. :)


ನನಗೆ ಕೆಲವು ದಿನಗಳಿಂದಲೇ ಇದರ ಅನುಮಾನವಿತ್ತು. ಸಿಕ್ಸ್ತ್ ಸೆನ್ಸ್ ಅಂತಾರಲ್ಲ ಹಾಗೆ. ಕಳೆದ ಗಣೇಶ ಹಬ್ಬದಲ್ಲಿ ಎಷ್ಟು ವೆರೈಟಿ ಕಡುಬು ಇತ್ಯಾದಿ ಸಿಹಿತಿನಿಸುಗಳನ್ನು ತಿಂದಿದ್ದೇನೋ ಲೆಕ್ಕವೇ ಇಲ್ಲ. ನಾನಿರುವ ಫ್ಲಾಟ್‌ನಲ್ಲಿ ಬಂಗಾಳ, ಬಿಹಾರ,ಗುಜರಾತ್.. ನಿಂದ ಕೇರಳದವರೆಗೆ ಭಾರತದ ಉದ್ದಗಲದ ರಾಜ್ಯದವರೆಲ್ಲಾ ಇರುವರು. ಹೊಸದಾಗಿ ಗೆಳೆತನವಾಗಿರುವುದು. ಮೊದಲ ಹಬ್ಬ ಬೇರೆ. ಒಬ್ಬೊಬ್ಬರೇ ಪ್ಲೇಟ್ ತುಂಬಾ ತಂದು ಕೊಟ್ಟದ್ದು ಡೈನಿಂಗ್ ಟೇಬಲ್ ತುಂಬಾ ತುಂಬಿತ್ತು. ಅದನ್ನು ತಿಂದು ಅವರೆಲ್ಲರ ಅಡುಗೆಯನ್ನು ಹೊಗಳಿದ್ದೇ...ನೆಕ್ಸ್ಟ್ ದಸರಾ ಹಬ್ಬ ಇನ್ನೂ ಭರ್ಜರಿಯಾಗಿತ್ತು. ಅದರ ಬೆನ್ನಿಗೇ ದೀಪಾವಳಿ...


ದೀಪಾವಳಿಯ ಸ್ವೀಟ್‌ಗಳೆಲ್ಲಾ ಮುಗಿಯುತ್ತಾ ಬಂದ ಹಾಗೆ, ನನ್ನ ಶರ್ಟ್ ಬಟನ್‌ಗಳೆಲ್ಲಾ ಒಂದೊಂದಾಗಿ ಕಿತ್ತು ಹೋಗಿ, ಪ್ಯಾಂಟ್ ಹಾಕಲು ಕಷ್ಟವಾಗುತ್ತಿತ್ತು. ಹೊಸ ಪ್ಯಾಂಟ್ ಶರ್ಟ್ ಹೊಲಿಸಬೇಕೆಂದು ನಾನು ಯೋಚಿಸುತ್ತಿದ್ದರೆ, ನನ್ನಾಕೆ ಡಯಟ್ ಮಾಡಿಸಿ ಅದೇ ಹಳೇ ಶರ್ಟ್ ಪ್ಯಾಂಟಲ್ಲೇ ಸುಧಾರಿಸಬೇಕೆಂದಿದ್ದಾಳೆ.


ಅಂತೂ ನಮ್ಮ ಡಯಟ್ ದಿನಚರಿ ಪ್ರಾರಂಭವಾಯಿತು.ಫ್ರುಟ್ ಜ್ಯೂಸ್ ಬದಲಿಗೆ ಈ ದಿನ ಫ್ರುಟ್ ಸಲಡ್ ಅಥವಾ ಐಸ್‌ಕ್ರೀಂ ತಿನ್ನೋಣವಾ ಅಂದು ಪ್ರೀತಿಯಿಂದ ಕೇಳಿದೆ..ಮನಸ್ಸಲ್ಲೇ..ಬಾಯಿಗೆ ಬರಲೇ ಇಲ್ಲಾ.. ಅಷ್ಟೆಲ್ಲಾ ತಿಂಡಿ ತಿನಿಸುಗಳಿಗೆ ಹೊಂದಿಕೊಂಡ ನನ್ನ ಹೊಟ್ಟೆ ಈ ಡಯಟ್‌ಗೆ ಹೇಗೆ ಹೊಂದಿಕೊಂಡಿತು ಎಂದು ಯೋಚಿಸುತ್ತಿದ್ದೆ. ಹೊಟ್ಟೆಗೆ ಅರ್ಥವಾಯಿತು ಕಾಣುತ್ತದೆ. ಮೂರನೇ ದಿನಕ್ಕೆ ಸ್ಟ್ರೈಕ್ ಪ್ರಾರಂಭಿಸಿತು. ೧..೨..ಹೀಗೆ ಪ್ರಾರಂಭವಾಗಿ, ಮಧ್ಯಾಹ್ನ ಹೊತ್ತಿಗೆ ಲೆಕ್ಕತಪ್ಪುವಷ್ಟು ವಾಂತಿ! ಡಾಕ್ಟ್ರ ಬಳಿ ಹೋಗಲೂ ತ್ರಾಣವಿಲ್ಲ...


"ಬಹುಷಃ ನಿಮಗೆ ಈ ಚಪಾತಿ, ಮುದ್ದೆ ಆಗಲಿಲ್ಲ ಕಾಣುತ್ತದೆ. ನಾಳೆಯಿಂದ ಮಾಮೂಲಿನಂತೆ ಊಟ ಮಾಡೋಣ" ಎಂದು ಹೇಳಿ ಲಿಂಬೆ ಜ್ಯೂಸ್ ಕೊಟ್ಟ ಕೂಡಲೇ ಹೊಟ್ಟೆ ಸ್ಟ್ರೈಕ್ ಹಿಂತೆಗೆದುಕೊಂಡಿತು! ಸ್ವೀಟ್ ಸಹಿತ ತಿಂಡಿ ತಿನಿಸುಗಳು ಮತ್ತೆ ಟೇಬಲ್ ಮೇಲೆ ಬಂತು:)


 

Rating
No votes yet

Comments

Submitted by sathishnasa Fri, 11/23/2012 - 11:43

ಸಂಕ್ರಾತಿ ಹಬ್ಬ ಆದ ಮೇಲೆ ಮತ್ತೊಮ್ಮೆ " ಡಯಟ್ " ಮಾಡಲು ಪ್ರಯತ್ನಿಸಿ ಹೊಟ್ಟೆ ನಿಮ್ಮ ಮಾತು ಕೇಳ ಬಹದು ಯಾಕೆಂದರೆ ಬಿಟ್ಟು ಬಿಟ್ಟು " ಡಯಟ್ " ಮಾಡಿದರೆ ಅದು ಅಭ್ಯಾಸ ಮಾಡಿ ಕೊಳ್ಳುತ್ತೆ ....ಸತೀಶ್

Submitted by ಗಣೇಶ Fri, 11/23/2012 - 23:53

In reply to by sathishnasa

ಡಯಟ್ ಬಿಟ್ಟ ಖುಷಿಯಲ್ಲಿದ್ದರೆ, ಬಿಟ್ಟು ಬಿಟ್ಟು ಡಯಟ್ ಮಾಡಿ ಎಂಬ ಸಲಹೆ ಕೊಡುತ್ತೀರಲ್ಲಾ ಸತೀಶರೆ:)
(ಸಂಕ್ರಾಂತಿಗೂ ಮೊದಲು..) ಕ್ರಿಸ್‌ಮಸ್ ಹಾಗೂ ಹೊಸವರ್ಷ ಆಚರಿಸೋಣ ಅಂತ ಎಲ್ಲರೂ ಮಾತನಾಡುತ್ತಿದ್ದರು. :)

Submitted by partha1059 Fri, 11/23/2012 - 22:12

"ನಾಳೆಯಿಂದ ಬೆಳಗ್ಗೆ ಎದ್ದಾಗ ಬ್ಲಾಕ್ ಟೀ, ನಂತರ ನಾಸ್ಟಾಕ್ಕೆ ಇಡ್ಲಿ, ಮಧ್ಯಾಹ್ನ ೩ ಚಪಾತಿ ಪಲ್ಯ, ಸಾಯಂಕಾಲ ಫ್ರುಟ್ ಜ್ಯೂಸ್, ರಾತ್ರಿ ಮುದ್ದೆ ಸಾರು, ಸ್ವಲ್ಪ ವಾಕ್ ಮಾಡಿ ಮಲಗಿ, ಬೆಳಗ್ಗೆ ಬೇಗ ಎದ್ದು ಜಾಗಿಂಗ್ ಮಾಡೋಣ ಅಂತ ಇದೀನಿ" ಅಂದಳು ನನ್ನಾಕೆ. >>

ಮತ್ತೇನು ಕಷ್ಟ. ಅವರು ಬ್ಲಾಕ್ ಟಿ ಎಷ್ಟು ಅಂತ ಹೇಳಿಲ್ಲ, ಅದನ್ನು ಒಂದುದೊಡ್ಡ ಮಗ್ (ಬಕೆಟ್ ನಂತದು) , ಸ್ವಲ್ಪ್ ಸಕ್ಕರೆ ಹಾಲು ಹಾಕಿಕೊಡು ಕುಡಿದು, ನಂತರ ವಾಕ್ಮಾಡಿ, ನಾಷ್ಟಾಕ್ಕೆ ಅಂತ ಒಂದಿಪ್ಪತ್ತು ಇಡ್ಲಿ (ಅದು ಅವರೆನು ಇಷ್ಟೆ ಅಂತ ಹೇಳಿಲ್ಲ) , ಮದ್ಯಾನ ಹೇಗು ಮೂರು ಚಪಾತಿ ಇದೆ, ಪಲ್ಯ ಸ್ವಲ್ಪ ಜಾಸ್ತಿ (ಡಬರಿ) ತಿಂದರೆ ಆಗುತ್ತಿತ್ತು, ಸಂಜೆ ಪ್ರೂಟ್ ಸಲಾಡ್ ಇತ್ತು, (ವಾಹ್ ನಾನು ಜೊತೆಗಿದ್ದರೆ ಚೆನ್ನಿತ್ತು). ರಾತ್ರಿ ಮುದ್ದೆ (ಸ್ವಲ್ಪ ದೊಡ್ಡ ಸೈಜು ‍‍‍> ಫುಟ್ ಬಾಲ್ ಆದೀತ ?) ಮಾಡಿಸಿದ್ದರೆ ಆಗಿತ್ತು, ರಾತ್ರಿ ನಿದ್ದೆಯಲ್ಲಿ ಎದ್ದಾಗ ಒಂದೆರಡು ಲೋಟ ಹಾಲು ಇದ್ದೆ ಇರುತ್ತೆ. ನೀವು ಸುಮ್ಮನೆ ಚಾನ್ಸ್ ಕಳೆದುಕೊಂಡ್ರಿ, ಏನೊ ನಾಟಕ ಮಾಡಿ :‍)))

Submitted by ಗಣೇಶ Sat, 11/24/2012 - 00:07

In reply to by partha1059

:) ಹೀಗೆ ಡಯಟ್ ಆದರೆ ಪರವಾಗಿಲ್ಲ.
>>ರಾತ್ರಿ ಮುದ್ದೆ (ಸ್ವಲ್ಪ ದೊಡ್ಡ ಸೈಜು ‍‍‍> ಫುಟ್ ಬಾಲ್ ಆದೀತ? :) ಈ ಮುದ್ದೆನೇ ಗಂಟಲಲ್ಲಿ ಇಳಿಯುವುದಿಲ್ಲಾ.. :(
ಧನ್ಯವಾದ ಪಾರ್ಥರೆ.

Submitted by kavinagaraj Sat, 11/24/2012 - 09:14

ನಮೋ ಗಣೇಶಾಯ ನಮಃ! ನನ್ನ ರೆಗ್ಯುಲರ್ ಫುಡ್ ನಿಮ್ಮ ಡಯಟ್ ಫುಡ್ ಮುಂದೆ ಏನೇನೂ ಅಲ್ಲ!!

Submitted by Prakash Narasimhaiya Sat, 11/24/2012 - 10:26

In reply to by kavinagaraj

ಆತ್ಮೀಯ‌ ಗಣೇಶರೇ,
ಪರವಾಗಿಲ್ಲ...ನಿಮ್ಮ ಹೊಟ್ಟೆಗೂ ಒಳ್ಳೇ ತರಪೆತು ಕೊಟ್ತೀದ್ದೀರಿ ಮಾರಾಯರೇ......ನಿಮ್ಮ ಮನಸನ್ನು ಚೆನ್ನಾಗಿ ಅರ್ಥ‌ ಮಾಡಿಕೊ0ಡಿದೆ. ನಿಮ್ಮ ಡಯಟ್ ಮು0ದುವರೆಸಿ......

Submitted by Shreekar Sat, 11/24/2012 - 20:15

In reply to by Prakash Narasimhaiya

ಕರಾವಳಿಯ ಗಣೇಶಣ್ಣರ ಡಯಟ್ ನಲ್ಲಿ ಮೀನೂ ಇಲ್ಲದಿರುವುದು ಆಶ್ಚರ್ಯ !

ಐವತ್ತು ಮೀರಿದ ಮೇಲೆ ಹ್ರದಯಕಾಯಿಲೆಗಳನ್ನು ದೂರವಿರಿಸಲು omega-3 ಫ್ಯಾಟ್ಟಿ ಆಸಿಡ್ ಗಳಿರುವ ಮೀನು ತಿನ್ನುವುದರಿಂದ ಆರೋಗ್ಯ ವ್ರದ್ಧಿ. :-)

Submitted by partha1059 Sat, 11/24/2012 - 22:05

In reply to by Shreekar

ಗಣೇಶ‌ ಶುದ್ದ ಸಸ್ಯಾಹಾರಿ ಅಲ್ವೆ ! ಅವರು ಮೀನೆಲ್ಲ ತಿನ್ನಲಾರರು !
ಏನಿದ್ದರು ಕಡುಬನ್ನು ಮೀನಿನ‌ ಆಕಾರಕ್ಕೆ ಮಾಡಿ ಕೊಟ್ಟರೆ ತಿ0ದಾರು ! ಒ0ದಾರು ! ಮೇಲೆ ಇನ್ನಾರು !

Submitted by ಗಣೇಶ Sun, 11/25/2012 - 00:12

In reply to by Shreekar

ಶ್ರೀಕರ್ ಅವರೆ,
ಈಗಾಗಲೇ ಆ ಮೆಗಾ- "ಫ್ಯಾಟ್" ೩ ಪಟ್ಟು ತುಂಬಿಸಿಕೊಂಡಿರುವೆ..(ಅಂದ ಮೇಲೆ ಹೃದಯ ಸೇಫ್.) ಇನ್ನು ನನ್ನ ಡಯಟ್‌ನಲ್ಲಿ ಮೀನೂ ಸೇರಿದರೆ ಕರಾವಳಿ ಜನ ತಿನ್ನಲು ಮೀನು ಆಮದು ಮಾಡಬೇಕಾಗುತ್ತದೆ. :)

Submitted by ಗಣೇಶ Sun, 11/25/2012 - 00:27

In reply to by Prakash Narasimhaiya

>ನಿಮ್ಮ ಹೊಟ್ಟೆಗೂ ಒಳ್ಳೇ ತರಪೆತು ಕೊಟ್ತೀದ್ದೀರಿ ಮಾರಾಯರೇ.. ಪ್ರಕಾಶ್ ಅವರೆ, ಬಹಳ ಸುಲಭ. ನೀವೂ ಮಾಡಬಹುದು-
ಹಿಂದೆಯೂ ಒಮ್ಮೆ ಹೇಳಿದ್ದೆ. ಹಿಂದಿನವರು ಆಚರಿಸಿಕೊಂಡು ಬಂದದ್ದನ್ನೆಲ್ಲಾ ಮೂಢನಂಬಿಕೆ ಎಂದು ತಳ್ಳಿಹಾಕುವುದು ಸರಿಯಲ್ಲ. ಎಲ್ಲವನ್ನು ನೆಮ್ಮದಿಯಿಂದ ಹೊಟ್ಟೆತುಂಬ+++ ತಿಂದು "ಕೃಷ್ಣಾರ್ಪಣ" ಎಂದರಾಯಿತು. ಜೀರ್ಣಮಾಡುವುದು+ಆರೋಗ್ಯದಿಂದಿಟ್ಟಿರುವುದು ಆತನ ಕರ್ತವ್ಯವಾಗುವುದು. ಹೊಟ್ಟೆಯೂ ಖುಶ್, ಹಮ್ ಭೀ ಖುಶ್.

Submitted by ಗಣೇಶ Sun, 11/25/2012 - 00:31

In reply to by kavinagaraj

>>ನನ್ನ ರೆಗ್ಯುಲರ್ ಫುಡ್ ನಿಮ್ಮ ಡಯಟ್ ಫುಡ್ ಮುಂದೆ ಏನೇನೂ ಅಲ್ಲ! :)
-ಛೇ..೩ ಚಪಾತಿಗಿಂತಲೂ ಕಮ್ಮಿ ತಿಂದರೆ, ಕೈ,ಕಾಲು,ಬಾಯಿ,ಮೂಗು,ಕಣ್ಣು..ಇತ್ಯಾದಿ ಅಂಗಗಳಿಗೆ ಪೋಷಣೆಗೆ ಎಲ್ಲಿ ಸಾಕಾಗುತ್ತದೆ. ಅವನ್ನೆಲ್ಲಾ ಅರೆಹೊಟ್ಟೆಯಲ್ಲಿರಿಸುವುದು ಒಂದು ರೀತಿಯಲ್ಲಿ "ಪ್ರಾಣಿಹಿಂಸೆ" ಸರ್. :)

Submitted by venkatb83 Sun, 12/02/2012 - 17:37

In reply to by ಗಣೇಶ

ಗಣೇಶ್ ಅಣ್ಣ -ಅವತ್ತೇ ನೋಡಿದ್ದರೂ ಈ ಬರಹ ಓದಿ ಪ್ರತಿಕ್ರಿಯಿಸಲು ಇಂದೇ ಸಮಯ ಸಿಕ್ಕದ್ದು..!

ಒಟ್ನಲ್ಲಿ ನೀವು -ಹೊಟ್ಟೆ ಮಾತಾಡಿಕೊಂಡು ಡಯಟ್ ತಪಿಸಿಕೊಂಡಿರಿ...
ನಿಮ್ಮ ಹಳೆಯ ಬರಹ (ಸಿಕ್ಸ್ ಪ್ಯಾಕ್ ಹಂದಿ ಪದ ಪ್ರಯೋಗ ನೆನಪಿಸಿಕೊಳ್ಳಿ )ದಲ್ಲೇ ನಿಮಗೆ ಜಾಗಿಂಗ್ -ವ್ಯಾಯಾಮ ಜಿಮ್ಮು ಗಿಮ್ಮು ಅಲರ್ಜಿ ಅಂತ ಗೊತ್ತಾಗಿತ್ತು..ಈಗ ಈ ಡಯೆಟ್ ಪಯೆಟ್ ನೀವ್ ಮಾಡೀರ?

ಶುಭವಾಗಲಿ..

\|

Submitted by ಗಣೇಶ Mon, 12/17/2012 - 01:20

In reply to by venkatb83

ಹೌದು ಸಪ್ತಗಿರಿವಾಸಿಯವರೆ, ಡಯಟ್..ಜಿಮ್.....ಎಲ್ಲಾ "ಅಲರ್ಜಿ" ಅಂತ ನಿಮಗೆಲ್ಲಾ ಗೊತ್ತಾದರೂ ನನ್ನಾಕೆಗೆ ಮಾತ್ರ ಗೊತ್ತಾಗುವುದಿಲ್ಲ:(
-ಗಣೇಶ.

Submitted by makara Mon, 12/03/2012 - 07:42

ಗಣೇಶ್ ಜಿ, ಅವರ ಊಟಕ್ಕೆ ಹಲವು ವೇಳೆ ಡಯೆಟ್ ಅನ್ವಯಿಸಬಹುದೇನೋ? ಆದರೆ ಖಂಡಿತವಾಗಿ ಅವರ ಬರಹಕ್ಕೆ ಬರುವ ಪ್ರತಿಕ್ರಿಯೆಗಳಿಗೆ ಡಯಟ್ ಅನ್ವಯವಾಗುವುದು ಅದು ಯಾವಾಗಲೂ ಭರಪೂರ! :))

Submitted by RAMAMOHANA Mon, 12/17/2012 - 14:19

ಗಣೇಶ್ ಜಿ ನೀವು ಯಾಮಾರಿದ್ದೀರ‌.... ಸರಿಯಾಗಿ ಕೇಳಬೇಕಿತ್ತು. ಈ ಡಯಟ್ ತಿನಿಸುಗಳೆಲ್ಲಾ ಮಾಮೂಲಿ ಊಟ‌ ತಿಮ್ಡಿಯ‌ ಮು0ಚೆಯೋ ಇಲ್ಲ ನ0ತರವೋ...? ವಿಚಾರಿಸ್ಬೇಕಿತ್ತು.
ರಾಮೋ.