"ನಾಳೆಯಿಂದ ಬೆಳಗ್ಗೆ ಎದ್ದಾಗ ಬ್ಲಾಕ್ ಟೀ, ನಂತರ ನಾಸ್ಟಾಕ್ಕೆ ಇಡ್ಲಿ, ಮಧ್ಯಾಹ್ನ ೩ ಚಪಾತಿ ಪಲ್ಯ, ಸಾಯಂಕಾಲ ಫ್ರುಟ್ ಜ್ಯೂಸ್, ರಾತ್ರಿ ಮುದ್ದೆ ಸಾರು, ಸ್ವಲ್ಪ ವಾಕ್ ಮಾಡಿ ಮಲಗಿ, ಬೆಳಗ್ಗೆ ಬೇಗ ಎದ್ದು ಜಾಗಿಂಗ್ ಮಾಡೋಣ ಅಂತ ಇದೀನಿ" ಅಂದಳು ನನ್ನಾಕೆ.
"ಯಾಕೆ? ಏನಾಯ್ತೆ?"
"ಏನಿಲ್ಲಾ, ಸ್ವಲ್ಪ ಡಯಟ್ ಮಾಡೋಣ ಅಂತ.."
"ನಿನ್ನ ತೂಕ ಜಾಸ್ತಿಯಾಗಿದೆ ಅಂತ ಯಾರಾದರೂ ಹೇಳಿದರಾ?"
"ನನ್ನದಲ್ಲರೀ..ನಿಮ್ಮದೇ..!ನಿಮಗೆ ಬೇಸರವಾಗದಿರಲಿ ಅಂತ ನಿಮ್ಮ ಜತೆ ನಾನೂ ಡಯಟ್ ಮಾಡುವೆ"
"ಅದಕ್ಕೇನಂತೆ ಮಾಡೋಣ" ಅಂದೆ. ನನ್ನ ಒಳಿತಿಗೇ ಹೇಳುತ್ತಿರುವಾಗ ಯಾಕೆ ವಿರೋಧಿಸಲಿ.. ಹೇಗೂ ಉಪವಾಸ ಮಾಡಿಸುವುದಿಲ್ಲವಲ್ಲಾ. :)
ನನಗೆ ಕೆಲವು ದಿನಗಳಿಂದಲೇ ಇದರ ಅನುಮಾನವಿತ್ತು. ಸಿಕ್ಸ್ತ್ ಸೆನ್ಸ್ ಅಂತಾರಲ್ಲ ಹಾಗೆ. ಕಳೆದ ಗಣೇಶ ಹಬ್ಬದಲ್ಲಿ ಎಷ್ಟು ವೆರೈಟಿ ಕಡುಬು ಇತ್ಯಾದಿ ಸಿಹಿತಿನಿಸುಗಳನ್ನು ತಿಂದಿದ್ದೇನೋ ಲೆಕ್ಕವೇ ಇಲ್ಲ. ನಾನಿರುವ ಫ್ಲಾಟ್‌ನಲ್ಲಿ ಬಂಗಾಳ, ಬಿಹಾರ,ಗುಜರಾತ್.. ನಿಂದ ಕೇರಳದವರೆಗೆ ಭಾರತದ ಉದ್ದಗಲದ ರಾಜ್ಯದವರೆಲ್ಲಾ ಇರುವರು. ಹೊಸದಾಗಿ ಗೆಳೆತನವಾಗಿರುವುದು. ಮೊದಲ ಹಬ್ಬ ಬೇರೆ. ಒಬ್ಬೊಬ್ಬರೇ ಪ್ಲೇಟ್ ತುಂಬಾ ತಂದು ಕೊಟ್ಟದ್ದು ಡೈನಿಂಗ್ ಟೇಬಲ್ ತುಂಬಾ ತುಂಬಿತ್ತು. ಅದನ್ನು ತಿಂದು ಅವರೆಲ್ಲರ ಅಡುಗೆಯನ್ನು ಹೊಗಳಿದ್ದೇ...ನೆಕ್ಸ್ಟ್ ದಸರಾ ಹಬ್ಬ ಇನ್ನೂ ಭರ್ಜರಿಯಾಗಿತ್ತು. ಅದರ ಬೆನ್ನಿಗೇ ದೀಪಾವಳಿ...
ದೀಪಾವಳಿಯ ಸ್ವೀಟ್‌ಗಳೆಲ್ಲಾ ಮುಗಿಯುತ್ತಾ ಬಂದ ಹಾಗೆ, ನನ್ನ ಶರ್ಟ್ ಬಟನ್‌ಗಳೆಲ್ಲಾ ಒಂದೊಂದಾಗಿ ಕಿತ್ತು ಹೋಗಿ, ಪ್ಯಾಂಟ್ ಹಾಕಲು ಕಷ್ಟವಾಗುತ್ತಿತ್ತು. ಹೊಸ ಪ್ಯಾಂಟ್ ಶರ್ಟ್ ಹೊಲಿಸಬೇಕೆಂದು ನಾನು ಯೋಚಿಸುತ್ತಿದ್ದರೆ, ನನ್ನಾಕೆ ಡಯಟ್ ಮಾಡಿಸಿ ಅದೇ ಹಳೇ ಶರ್ಟ್ ಪ್ಯಾಂಟಲ್ಲೇ ಸುಧಾರಿಸಬೇಕೆಂದಿದ್ದಾಳೆ.
ಅಂತೂ ನಮ್ಮ ಡಯಟ್ ದಿನಚರಿ ಪ್ರಾರಂಭವಾಯಿತು.ಫ್ರುಟ್ ಜ್ಯೂಸ್ ಬದಲಿಗೆ ಈ ದಿನ ಫ್ರುಟ್ ಸಲಡ್ ಅಥವಾ ಐಸ್‌ಕ್ರೀಂ ತಿನ್ನೋಣವಾ ಅಂದು ಪ್ರೀತಿಯಿಂದ ಕೇಳಿದೆ..ಮನಸ್ಸಲ್ಲೇ..ಬಾಯಿಗೆ ಬರಲೇ ಇಲ್ಲಾ.. ಅಷ್ಟೆಲ್ಲಾ ತಿಂಡಿ ತಿನಿಸುಗಳಿಗೆ ಹೊಂದಿಕೊಂಡ ನನ್ನ ಹೊಟ್ಟೆ ಈ ಡಯಟ್‌ಗೆ ಹೇಗೆ ಹೊಂದಿಕೊಂಡಿತು ಎಂದು ಯೋಚಿಸುತ್ತಿದ್ದೆ. ಹೊಟ್ಟೆಗೆ ಅರ್ಥವಾಯಿತು ಕಾಣುತ್ತದೆ. ಮೂರನೇ ದಿನಕ್ಕೆ ಸ್ಟ್ರೈಕ್ ಪ್ರಾರಂಭಿಸಿತು. ೧..೨..ಹೀಗೆ ಪ್ರಾರಂಭವಾಗಿ, ಮಧ್ಯಾಹ್ನ ಹೊತ್ತಿಗೆ ಲೆಕ್ಕತಪ್ಪುವಷ್ಟು ವಾಂತಿ! ಡಾಕ್ಟ್ರ ಬಳಿ ಹೋಗಲೂ ತ್ರಾಣವಿಲ್ಲ...
"ಬಹುಷಃ ನಿಮಗೆ ಈ ಚಪಾತಿ, ಮುದ್ದೆ ಆಗಲಿಲ್ಲ ಕಾಣುತ್ತದೆ. ನಾಳೆಯಿಂದ ಮಾಮೂಲಿನಂತೆ ಊಟ ಮಾಡೋಣ" ಎಂದು ಹೇಳಿ ಲಿಂಬೆ ಜ್ಯೂಸ್ ಕೊಟ್ಟ ಕೂಡಲೇ ಹೊಟ್ಟೆ ಸ್ಟ್ರೈಕ್ ಹಿಂತೆಗೆದುಕೊಂಡಿತು! ಸ್ವೀಟ್ ಸಹಿತ ತಿಂಡಿ ತಿನಿಸುಗಳು ಮತ್ತೆ ಟೇಬಲ್ ಮೇಲೆ ಬಂತು:)





ಪ್ರತಿಕ್ರಿಯೆಗಳು
ಸಂಕ್ರಾತಿ ಹಬ್ಬ ಆದ ಮೇಲೆ
ಡಯಟ್ ಬಿಟ್ಟ ಖುಷಿಯಲ್ಲಿದ್ದರೆ,
"ನಾಳೆಯಿಂದ ಬೆಳಗ್ಗೆ ಎದ್ದಾಗ
:) ಹೀಗೆ ಡಯಟ್ ಆದರೆ ಪರವಾಗಿಲ್ಲ.
ನಮೋ ಗಣೇಶಾಯ ನಮಃ! ನನ್ನ
ಆತ್ಮೀಯ ಗಣೇಶರೇ,
ಕರಾವಳಿಯ ಗಣೇಶಣ್ಣರ ಡಯಟ್ ನಲ್ಲಿ
ಗಣೇಶ ಶುದ್ದ ಸಸ್ಯಾಹಾರಿ ಅಲ್ವೆ !
ಒ0ದಾರು ! ಮೇಲೆ ಇನ್ನಾರು ! +1 :)
ಶ್ರೀಕರ್ ಅವರೆ,
>ನಿಮ್ಮ ಹೊಟ್ಟೆಗೂ ಒಳ್ಳೇ ತರಪೆತು
>>ನನ್ನ ರೆಗ್ಯುಲರ್ ಫುಡ್ ನಿಮ್ಮ
ಗಣೇಶ್ ಅಣ್ಣ -ಅವತ್ತೇ ನೋಡಿದ್ದರೂ
ಹೌದು ಸಪ್ತಗಿರಿವಾಸಿಯವರೆ, ಡಯಟ್.
ಗಣೇಶ್ ಜಿ, ಅವರ ಊಟಕ್ಕೆ ಹಲವು
ಶ್ರೀಧರ್‌ಜಿ,
ಗಣೇಶ್ ಜಿ ನೀವು ಯಾಮಾರಿದ್ದೀರ...
:) ರಾಮೋಜಿ,