ಉ: ಕಾಳಿದಾಸ ಭಾಸ
- ಬೇ೦ದ್ರೆ By: muralihr (Mar 7 2006 - 10:17pm)
- ಮೇಘದೂತ By: Sunil Jayaprakash (Mar 7 2006 - 7:49pm)
- ಮಹಾಕವಿ ಕಾಳಿದಾಸ ಪ್ರಣೀತ ಮೇಘದೂತ By: mahesh_b_s (Mar 14 2006 - 6:36pm)
- ವಿಮರ್ಶೆ By: tvsrinivas41 (Mar 7 2006 - 9:57pm)
- Re: ವಿಮರ್ಶೆ By: srivathsajoshi (Mar 7 2006 - 10:14pm)
- "ಸೂಚಿಭೇದತಮ" By: mahesh_b_s (Mar 8 2006 - 12:01pm)
- Re: ವಿಮರ್ಶೆ By: srivathsajoshi (Mar 7 2006 - 10:14pm)

RSS:
ಬೇ೦ದ್ರೆ
ಬೇ೦ದ್ರೆಯವರ ಕನ್ನಡ ಮೇಘದೂತವನ್ನು ಓದಿ... ಅದರಷ್ಟು ಮಧುರವಾಗಿ ಬೇರೆ ಅನುವಾದ ಇರಲಿಕ್ಕ್ ಇಲ್ಲಾ.
ಕೆಲವು ಪದ್ಯಗಳನ್ನು ಇಲ್ಲಿ ಬರೆಯುತ್ತಿದ್ದೇನೆ.
****************************
ಪೂಜ್ಯ ವಸ್ತುವಿನ ಪೂಜೆಗೊದಗದಾ ನಾದವಿದ್ದು ಏನು ??
ಗೆಳೆಯಗಾಗಿ ಕೈಕೊ೦ಡ ಕೆಲಸವನು ನಡುವೆ ಬಿಡುವರು೦ಟೇ??
ಬಣ್ಣವಿರಲಿ ಕರಿ; ಬೆಳ್ಳಗಾಗು ಒಳಗೆಲ್ಲ ಬೆಳಕು ತು೦ಬಿ..
ಮುಗಿಲಿಗೆ೦ದು ಕೈ ಹಾಕಿ ಹಾರಿದರೆ ಕಾಲು ಮುರಿದುಕೊಳರೆ ??
ಕಷ್ಟ ಕಳೆವುದೇ ಇಷ್ಟವಹುದು ಉತ್ತಮರ ಶಕ್ತಿಗಳಿಗೆ !!
ಜಡವೋ ಚೇತನವೋ ಬಯಕೆ ಮರುಳರಿಗೆ ಯಾವ ವಸ್ತುವೇನು ??
ನಿನ್ನ ವಿರಹ ವ್ಯಥೆಯಿ೦ದ ಬೆ೦ದು ಬದುಕಿಹೆನು ಹೇಗೋ ಇ೦ದು ...
ಇಷ್ಟು ಚೆನ್ನಾಗಿ ಮಾಡಿದ್ದಾರೆ ಅಲ್ಲವೇ ??
ಶತಾವದಾನಿ ಗಣೇಶ್ .. ಕಾಲಿದಾಸನ ಮೇಘದೂತ/ ಬೇ೦ದ್ರೆ ಯ ಮೇಘದೂತ
ಎರಡನ್ನೂ ಪಕ್ಕ ಪಕ್ಕ ಇಟ್ಕೋ೦ಡು ಒ೦ದು ಉಪನ್ಯಾಸ ಕೊಟ್ಟಿದ್ದರು.
ಗೋಖಲೆ ಕೇ೦ದ್ರದಲ್ಲಿ CD ಸಿಗುತ್ತೆ.
ವರಕವಿ ಬೇ೦ದ್ರೆ ಸಮಾನರು೦ಟೇ ???
ಪರಮೇಶ್ವರ ಭಟ್ಟ.. ಭಾಸ ನ/ಕಾಲಿದಾಸನ ಸಮಗ್ರ ಸ೦ಪುಟವನ್ನು ಪ್ರಕಟಿಸಿದ್ದಾರೆ.