ಉ: ಕತ್ತೆ=ಕುದುರೆ=ಸಮಾನತೆ
- ಉ: ಕತ್ತೆ=ಕುದುರೆ=ಸಮಾನತೆ By: gururajkodkani (Apr 28 2008 - 5:46pm)
- ಉ: ಕತ್ತೆ=ಕುದುರೆ=ಸಮಾನತೆ By: rameshbalaganchi (Apr 20 2008 - 5:57pm)
- ಉ: ಕತ್ತೆ=ಕುದುರೆ=ಸಮಾನತೆ By: savithru (Apr 20 2008 - 4:05pm)
- ಉ: ಕತ್ತೆ=ಕುದುರೆ=ಸಮಾನತೆ By: mahesha (Apr 20 2008 - 10:57am)
- ಉ: ಕತ್ತೆ=ಕುದುರೆ=ಸಮಾನತೆ By: rameshbalaganchi (Apr 20 2008 - 10:06am)
- ಉ: ಕತ್ತೆ=ಕುದುರೆ=ಸಮಾನತೆ By: savithru (Apr 20 2008 - 4:54pm)

RSS:
ಉ: ಕತ್ತೆ=ಕುದುರೆ=ಸಮಾನತೆ
ಚಿಕ್ಕಂದಿನಲ್ಲಿ ಕಲಿತ ಒಂದು ಪದ್ಯ ಈ ಮೇಲಿನ ಲೇಖನ ಓದಿದಾಗ ನೆನಪಿಗೆ ಬಂತು. ಕವಿ ಯಾರೆನ್ನುವುದು ಮರೆತುಹೋಗಿದೆ. ತಿಳಿದವರು ಯಾರಾದರೂ ಹೇಳಿ.
"ಸಂತೆಗೆ ಹೋದನು ಭೀಮಣ್ಣ
ಹಿಂಡಿಯ ಕೊಂಡನು ಹತ್ತು ಮಣ
ಕತ್ತೆಯ ಬೆನ್ನಿಗೆ ಹೇರಿಸಿದ
ಕುದುರೆಯ ಜೊತೆಯಲಿ ಸಾಗಿಸಿದ.
ಕತ್ತೆಯು ಅರಚಿತು ಓ ಗೆಳೆಯ
ಅರ್ಧವ ನೀ ಹೊರು, ದಮ್ಮಯ್ಯ!!
ಕುದುರೆಗೆ ಕೂಗಿದು ಕೇಳಿಸಿತು
ಕತ್ತೆಯ ಕಿರಿಚನು ಚಾಳಿಸಿತು.
ನಿನ್ನಯ ಬೆನ್ನಿಗೆ ಹಾಕಿದನು
ಅದಕೇ ನಿನ್ನನು ಸಾಕಿದನು
ನೀನೇ ಹೊತ್ತುಕೊ ಬೇಗ ನಡಿ
ದಣಿಯದೊ ಬರುವನು ಹಾದಿ ಹಿಡಿ
ಬಂದನು ಆಗಲೆ ಭೀಮಣ್ಣ ಕುದುರೆಗೆ ಹೊರಿಸಿದ ಹತ್ತು ಮಣ
ಹೊತ್ತಿತು ಕುದುರೆಯು ಹೊರೆಯನ್ನು
ಅತ್ತಿತು ಬಗ್ಗಿಸಿತದು ಬೆನ್ನು
ಕುದುರೆಯು ಹೇಳಿತು ಕತ್ತೆಯನು
"ಮರೆಯೆನು ನಿನ್ನುಪಕಾರವನು
ಒಂದಿಷ್ಟಾದರೂ ಹೊತ್ತುಬಿಡು
ನನ್ನಯ ಪ್ರಾಣವ ಉಳಿಸಿಕೊಡು".
ಕತ್ತೆಯು ಹೇಳಿತು ಹಿಗ್ಗಿನಲಿ
"ಆಗೇನಂದಿಹೆ ಸೊಕ್ಕಿನಲಿ?
ನನ್ನಯ ಕಷ್ಟದಿ ಹಿಗ್ಗಿದ್ದಿ.
ಬಂತೇ ಈಗಾದರೂ ಬುದ್ಧಿ?
ನೀ ನನಗಿದ್ದರೆ ನಾ ನಿನಗೆ
ನೆನಪಿರಲೀ ನುಡು ನಮ್ಮೊಳಗೆ"
"ಏರಿದವನು ಚಿಕ್ಕವನಿರಬೇಕು"