ಅಯ್ಯೋ, "ಕನ್ನಡಕಂದ" ಈ "ಉದು, ಉವನು, ಉವಳು, ಉಲ್ಲಿ" ಬಗ್ಗೆ ಯಾಕೆ ಹೇಳ್ತೀರಾ. ನಾನು ಹಿಂದೆ ಒಮ್ಮೆ, ಕವಿರಾಜಮಾರ್ಗವನ್ನು ಓದುವಾಗ ಇದು ತಿಳಿದು ಬರಲಾಗಿ, ಎಲ್ಲರೊಡನೆ, ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ ಅನ್ನೋ ಎಳೆಯಲ್ಲಿ ಕನ್ನಡದ ಉ, ಊ ಬಗ್ಗೆ ಹಂಚಿಕೊಂಡ್ನಪ್ಪಾ. ಶುರು ಮಾಡಿದ್ರು ನೋಡಿ ಒಬ್ಬೊಬ್ರು, "ನೀನು ಸಂಸ್ಕೃತ-ದ್ವೇಷಿ" ಹಾಗೆ ಹೀಗೆ ಅಂತೆಲ್ಲಾ ನನ್ನನ್ನ ಜರಿಯಕ್ಕೆ ಶುರುಮಾಡಿ ಚರ್ಚೆಯ ವಿಷಯವನ್ನು ಎಲ್ಲೆಲ್ಲಿಗೋ ಹೋಗಿಸಿಬಿಟ್ಟರು. ಆ ಲೇಖನ ಬರೆದಾಗಿನಿಂದ ಕೆಲವರು ನನ್ನನ್ನು "ಊ ಸುನಿಲ" ಅಂತ ಕರೆಯೋಕ್ಕೆ ಶುರುಮಾಡಿಬಿಟ್ರು.
ಕನ್ನಡದಲ್ಲಿ "ಉದು" ಅಷ್ಟೇ ಅಲ್ಲ, "ಎದು" ಕೂಡ ಇದೆ.
’ಉದು’ ಇವೆರಡರ ನಡುವೆ ಇರುವ ವಸ್ತುವನ್ನು ಸೂಚಿಸುತ್ತದೆ. ’ಅದು’ ಮತ್ತು ’ಇದು’ ಇವುಗಳ ನಡುವಿನ ದೂರ ’ಅದು’ ಮತ್ತು ’ಇದು’ ಗಳ ನಡುವಿನ ದೂರಕ್ಕಿಂತ ಕಡಿಮೆಯಾಗಿರಬೇಕು.
ಹಾಗಲ್ಲ,
ಉದು - "ಅದು" ಅಲ್ಲದ, "ಇದು" ಅಲ್ಲದ ಒಂದು ವಸ್ತು. ಅದು ಯಾವುದು (ಗಮನಿಸಿ ಯಾವುದು=ಯಾವ+ಉದು) ಅಂತ ಬೊಟ್ಟು ಮಾಡಿ ತೋರಿಸಲು ಸಾಧ್ಯವಿಲ್ಲ ಆದರೆ ಒಂದು ವಸ್ತು ಇದ್ದೇ ಇದೆ.
ಉಲ್ಲಿ - ಅಲ್ಲಿಯೂ ಅಲ್ಲದ ಇಲ್ಲಿಯೂ ಅಲ್ಲದ ಒಂದು ಜಾಗ. ಇದೇ ಜಾಗ ಅಂತ ತೋರಿಸಲು ಸಾಧ್ಯವಿಲ್ಲದಿದ್ದರೂ, ಆ ಜಾಗ ಎಲ್ಲೋ ಒಂದು ಕಡೆ ಇದೆ ಅನ್ನೋದು ಕಟ್ನಿಟ್ (ಗ್ಯಾರೆಂಟಿ).
ಉವನು - ಅವನು ಅಲ್ಲದ, ಇವನು ಅಲ್ಲದ ಒಬ್ಬ ಮನುಷ್ಯ.
ಇನ್ನೊಂದು ವಿಚಾರ, ಈ ಉದು, ಉಲ್ಲಿ, ಉವನು, ಉವಳು ಪದಗಳಿಗೆ "ಊ" ಪದವು ಸರ್ವನಾಮವಾಗಿ ಬರತ್ತೆ.
ಊ ಮನುಷ್ಯ - ಯಾರೋ ಒಬ್ಬ ಮನುಷ್ಯ
ಊ ಜಾಗ - ಯಾವುದೋ ಒಂದು ಜಾಗ
ಊ ಪುಟ - random page. ಈ ಸೂತ್ರವನ್ನು ಆಧರಿಸಿ ನಾನು ಕನ್ನಡದಲ್ಲಿ random page = "ಯಾದೃಚ್ಛಿಕ ಪುಟ" ಅನ್ನುವುದಕ್ಕಿಂತ (ಗಮನಿಸಿ, ಅನ್ನುವುದು=ಅನ್ನುವ+ಉದು) "ಊ ಪುಟ" ಅಂತ ಸರಳವಾಗಿ ಹೇಳಬಹುದು ಅಂತ ತೋರಿಸಿಕೊಟ್ಟಿದ್ದಕ್ಕೆ, ನನ್ನನ್ನು "ಸಂಸ್ಕೃತ-ದ್ವೇಷಿ" ಅಂತ ಕರೆದುಬಿಟ್ಟರು ಕೆಲವರು
ಉ: ಅವನಿವನುವನ್
ಅಯ್ಯೋ, "ಕನ್ನಡಕಂದ" ಈ "ಉದು, ಉವನು, ಉವಳು, ಉಲ್ಲಿ" ಬಗ್ಗೆ ಯಾಕೆ ಹೇಳ್ತೀರಾ. ನಾನು ಹಿಂದೆ ಒಮ್ಮೆ, ಕವಿರಾಜಮಾರ್ಗವನ್ನು ಓದುವಾಗ ಇದು ತಿಳಿದು ಬರಲಾಗಿ, ಎಲ್ಲರೊಡನೆ, ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ ಅನ್ನೋ ಎಳೆಯಲ್ಲಿ ಕನ್ನಡದ ಉ, ಊ ಬಗ್ಗೆ ಹಂಚಿಕೊಂಡ್ನಪ್ಪಾ. ಶುರು ಮಾಡಿದ್ರು ನೋಡಿ ಒಬ್ಬೊಬ್ರು, "ನೀನು ಸಂಸ್ಕೃತ-ದ್ವೇಷಿ" ಹಾಗೆ ಹೀಗೆ ಅಂತೆಲ್ಲಾ ನನ್ನನ್ನ ಜರಿಯಕ್ಕೆ ಶುರುಮಾಡಿ ಚರ್ಚೆಯ ವಿಷಯವನ್ನು ಎಲ್ಲೆಲ್ಲಿಗೋ ಹೋಗಿಸಿಬಿಟ್ಟರು. ಆ ಲೇಖನ ಬರೆದಾಗಿನಿಂದ ಕೆಲವರು ನನ್ನನ್ನು "ಊ ಸುನಿಲ" ಅಂತ ಕರೆಯೋಕ್ಕೆ ಶುರುಮಾಡಿಬಿಟ್ರು.
ಕನ್ನಡದಲ್ಲಿ "ಉದು" ಅಷ್ಟೇ ಅಲ್ಲ, "ಎದು" ಕೂಡ ಇದೆ.
ಹಾಗಲ್ಲ,
ಉದು - "ಅದು" ಅಲ್ಲದ, "ಇದು" ಅಲ್ಲದ ಒಂದು ವಸ್ತು. ಅದು ಯಾವುದು (ಗಮನಿಸಿ ಯಾವುದು=ಯಾವ+ಉದು) ಅಂತ ಬೊಟ್ಟು ಮಾಡಿ ತೋರಿಸಲು ಸಾಧ್ಯವಿಲ್ಲ ಆದರೆ ಒಂದು ವಸ್ತು ಇದ್ದೇ ಇದೆ.
ಉಲ್ಲಿ - ಅಲ್ಲಿಯೂ ಅಲ್ಲದ ಇಲ್ಲಿಯೂ ಅಲ್ಲದ ಒಂದು ಜಾಗ. ಇದೇ ಜಾಗ ಅಂತ ತೋರಿಸಲು ಸಾಧ್ಯವಿಲ್ಲದಿದ್ದರೂ, ಆ ಜಾಗ ಎಲ್ಲೋ ಒಂದು ಕಡೆ ಇದೆ ಅನ್ನೋದು ಕಟ್ನಿಟ್ (ಗ್ಯಾರೆಂಟಿ).
ಉವನು - ಅವನು ಅಲ್ಲದ, ಇವನು ಅಲ್ಲದ ಒಬ್ಬ ಮನುಷ್ಯ.
ಇನ್ನೊಂದು ವಿಚಾರ, ಈ ಉದು, ಉಲ್ಲಿ, ಉವನು, ಉವಳು ಪದಗಳಿಗೆ "ಊ" ಪದವು ಸರ್ವನಾಮವಾಗಿ ಬರತ್ತೆ.
ಊ ಮನುಷ್ಯ - ಯಾರೋ ಒಬ್ಬ ಮನುಷ್ಯ
ಊ ಜಾಗ - ಯಾವುದೋ ಒಂದು ಜಾಗ
ಊ ಪುಟ - random page. ಈ ಸೂತ್ರವನ್ನು ಆಧರಿಸಿ ನಾನು ಕನ್ನಡದಲ್ಲಿ random page = "ಯಾದೃಚ್ಛಿಕ ಪುಟ" ಅನ್ನುವುದಕ್ಕಿಂತ (ಗಮನಿಸಿ, ಅನ್ನುವುದು=ಅನ್ನುವ+ಉದು) "ಊ ಪುಟ" ಅಂತ ಸರಳವಾಗಿ ಹೇಳಬಹುದು ಅಂತ ತೋರಿಸಿಕೊಟ್ಟಿದ್ದಕ್ಕೆ, ನನ್ನನ್ನು "ಸಂಸ್ಕೃತ-ದ್ವೇಷಿ" ಅಂತ ಕರೆದುಬಿಟ್ಟರು ಕೆಲವರು
ಈ ಉ, ಊ ಬಗ್ಗೆ ಮಾತನಾಡಲು ಇನ್ನೂ ತುಂಬಾ ವಿಚಾರಗಳಿವೆ.