ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಕ್ಲಿಷ್ಟ ಪ್ರಶ್ನೆಗಳು ...

April 29, 2008 - 10:03pm — omshivaprakash

ಉ: ಕ್ಲಿಷ್ಟ ಪ್ರಶ್ನೆಗಳು ...

omshivaprakash's picture

ಅನಿವಾಸಿ ಸರ್, ಸಕತ್ತಾಗಿ ಹೇಳಿದ್ರಿ. Smiling

ಸ್ವಲ್ಲ್ಪ ಸಿಂಪಲ್ಲಾಗಿ ಸ್ಕೂಲ್ ನಲ್ಲಿ ಹೇಳಂಗೆ ಹೇಳ್ತೀನ್ ಕೇಳಿ ಕನ್ಸೋಲ್/ಶೆಲ್ಲಿನ ವಿಷಯ :

ಕಂಪ್ಯೂಟರ್ ಏನ್ ಕೆಲಸ ಮಾಡ್ಬೇಕು ಅಂತ ಅದಕ್ಕೆ ನೀವು ಹೇಳಬೇಕ್ ತಾನೆ. ಹೆಂಗ್ ಹೇಳ್ಲಿಕಾಗ್ತದೆ? ಒಂದು ಮೌಸ್ (Eye-wink ಆಗ್ಲೆ ಇಲಿ ಅಂದ್ರಲ್ಲ ಅದು ನಮ್ಮ ಗಣಪತಿಯ ಮೂಷಕ ವಾಹನ ಅಲ್ಲ) ಉಪಯೋಗಿಸಿ ಕಣ್ಣಿಗೆ ಸಿಕ್ಕಿದ್ದನ್ನ ಕುಟುಕಿ ಕ್ಲಿಕ್ಕಿಸೋದು. ಮಕ್ಳಿಗೆ ಇದು ಬಾಳ ಇಷ್ಟ ಬಿಡಿ.

ಆದ್ರೆ ಕೆಲವು ಸಲ ಮೌಸ್ ಇಲ್ಲದಿದ್ದರೆ, ಜಿ.ಯು.ಐ (ಗ್ರಾಫಿಕಲ್ ಯೂಸರ್ ಇಂಟರ್ ಫೇಸ್ / GUI ) ಅಂದರೆ ದೃಶ್ಯಾವಳಿಯ ಮೂಲಕ ಮಾನೀಟರ್ ಮೂಲಕ ಇದನ್ನೋತ್ತಿದರೆ ಇಂತದೇ ಕೆಲಸ ಆಗತ್ತೆ ಅಂತ ಬಟನ್, ಮೆನು ಮತ್ತಿತರೆಗಳನ್ನ ಉಪಯೋಗಿಸಿ ನಿಮ್ಮ ಕಂಪ್ಯೂಟರ್ ನಲ್ಲಿ ಏನನ್ನ ಮಾಡಬಹುದು ಅಂತ ತಿಳಿಸೋ ಆಪರೇಟಿಂಗ್ ಸಿಸ್ಟಂ ಇಲ್ಲದಿದ್ದರೆ ಕಂಪ್ಯೂಟರಿನ ಮೆದುಳಿಗೆ ಕೈ ಹಾಕ ಬೇಕಾಗ್ತದೆ. ಉದಾಹರಣೆಗೆ, ನಿಮ್ಮಲ್ಲಿ ಮೇಲೆ ಹೇಳಿದ ಹಾಗೆ ಜಿ.ಯು.ಐ ತಂತ್ರಾಂಶ (ಲಿನಕ್ಸ್ / ವಿಂಡೋಸ್) ಇಲ್ಲ ಅಂದು ಕೊಳ್ಳಿ, ಅಥವಾ ನಿಮ್ಮಲ್ಲಿರುವ ಲಿನಕ್ಸ್ ನಲ್ಲಿ ಜಿ.ಯು.ಐ ಇಲ್ಲ ಅಂದಾಗ ನಿಮ್ಮ ಕಂಪ್ಯೂಟರ್ ನಲ್ಲಿ ಕ್ಯಾಲ್ಕುಲೇಟರ್ ಹ್ಯಾಗೆ ಉಪಯೋಗಿಸ್ತೀರಾ? ಕಡತಗಳನ್ನ (files) ಹೇಗೆ ಬರೀತೀರಾ? ಅವನ್ನ ಡಿಲೀಟ್ ಹ್ಯಾಗೆ ಮಾಡ್ತೀರಾ? ಅದಕ್ಕೆ ಪರ್ಯಾಯ ವ್ಯವಸ್ಥೆ ಅಂದ್ರೆ ಕನ್ಸೋಲ್ / ಶೆಲ್.

ಜಿ.ಯು.ಐ ಇರುವ ಮತ್ತು ಇಲ್ಲದಿರುವ ಎಲ್ಲ ಆಪರೇಟಿಂಗ್ ಸಿಸ್ಟಂಗಳಲ್ಲೂ ಕನ್ಸೋಲ್ ಕಂಡು ಬರುತ್ತದೆ. ಇದನ್ನೇ ವಿಂಡೋಸ್ ನಲ್ಲಿ ಕಮ್ಯಾಂಡ್ ಪ್ರಾಂಪ್ಟ್ ಅನ್ನೋದು.Run ನಲ್ಲಿ cmd ಅಂತ ಕೀಲಿಸಿದಾಗ ಬರತ್ತೆ ನೋಡಿ ಅದೇ ವಿಂಡೋಸ್ ನಲ್ಲಿನ ಕನ್ಸೋಲು. ಲಿನಕ್ಸ್ ನಲ್ಲಿ ಮೊದಲೆಲ್ಲಾ ಇದ್ದದ್ದು ಕನ್ಸೋಲೆ. ಇದನ್ನ ಉಪಯೋಗಿಸಿ ನಿಮ್ಮ ಕೀಬೋರ್ಡ್ ಮೂಲಕ ಸಂಖೇತಗಳನ್ನ ನಿಮ್ಮ ಕಂಪ್ಯೂಟರ್ ಗೆ ಅರ್ಥವಾಗೋ ಭಾಷೆಯಲ್ಲಿ ತಿಳಿಸಿದರೆ ನಿಮ್ಮ ಕೆಲಸಗಳು ಸುಲಭವಾಗಿ ಮುಗಿಸ್ಕೋ ಬಹುದು.

ಇದನ್ನ ಉಪಯೋಗಿಸ್ಲಿಕ್ಕೆ ಸ್ವಲ್ಪ ಜ್ನಾಪಕ ಶಕ್ತಿ ಬೇಕು Smiling ಕಮ್ಯಾಂಡ್ಗಳನ್ನ (ಸಂಕೇತಗಳು) ನೆನಪಿಟ್ಟುಕೊಳ್ಳ ಬೇಕಲ್ಲ ಅದಕ್ಕೆ. ಉಪಯೋಗಿಸ್ತಾ ಉಪಯೋಗಿಸ್ತಾ ಅಭ್ಯಾಸ ಆಗತ್ತೆ ಅನ್ನಿ.

ದಿನನಿತ್ಯ ನಿಮ್ಮ ಮನೆಯಲ್ಲಿನ ಅಥವಾ ಕಚೇರಿಯಲ್ಲಿನ ಕಂಪ್ಯೂಟರ್ ನಲ್ಲಿ ನಿಮಗೆ ಮೌಸ್ ಇಟ್ಟು ಕೊಂಡು ಕೆಲಸ ಮಾಡಿ ನಿಮಗೆ ಅಭ್ಯಾಸ ತಾನೆ. ಲಿನಕ್ಸ ಹಾಕಿಕೊಂಡು ಸ್ವಲ್ಪ ಅದೇ ಕೆಲಸಗಳನ್ನ ಕನ್ಸೋಲಿನ ಮೂಲಕ ಮಾಡ್ಲಿಕ್ಕೆ ಪ್ರಯತ್ನ ಪಟ್ಟು ನೋಡಿ. ನಿಮ್ಮ ಕೆಲಸ ಎಷ್ಟೋ ಬೇಗ ಮಾಡಿ ಕೊಳ್ಳ ಬಹುದು.

ಇಂದಿಗೆ ಇಷ್ಟು ಸಾಕು ಮುಂದೆ, ಹೇಗೆ ನಮ್ಮ ಕೆಲಸಗಳೆಲ್ಲ ಕನ್ಸೋಲ್ ಅಥವಾ ಮೌಸ್ ಮೂಲಕ ಕಂಪ್ಯೂಟರನ್ನ ಕುಟುಕಿ, ಕುಟಿಕಿ ಮುಗಿಸ್ಲಿಕ್ಕೆ ಸಾಧ್ಯವಾಗಿದೆ ಅನ್ನೋದನ್ನ ತಿಳಿಯುವ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕ್ಲಿಷ್ಟ ಪ್ರಶ್ನೆಗಳು ... By: raghava (5 replies) April 28, 2008 - 3:30pm
  • ಉ: ಕ್ಲಿಷ್ಟ ಪ್ರಶ್ನೆಗಳು ... By: omshivaprakash (Apr 29 2008 - 10:03pm)
    • ಉ: ಕ್ಲಿಷ್ಟ ಪ್ರಶ್ನೆಗಳು ... By: anivaasi (Apr 30 2008 - 2:12am)
      • ಉ: ಕ್ಲಿಷ್ಟ ಪ್ರಶ್ನೆಗಳು ... By: omshivaprakash (Apr 30 2008 - 6:39am)
  • ಉ: ಕ್ಲಿಷ್ಟ ಪ್ರಶ್ನೆಗಳು ... By: anivaasi (Apr 28 2008 - 5:22pm)
    • ಉ: ಕ್ಲಿಷ್ಟ ಪ್ರಶ್ನೆಗಳು ... By: mahesha (Apr 30 2008 - 7:29am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
  • mahesha
    ಉ: ಅಬ್ಬಿ, ಅರ್ಬಿ
    July 25, 2008 - 1:06pm
  • mahesha
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:32pm
  • vikashegde
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 12:31pm
  • kannadakanda
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:30pm
  • kpbolumbu
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:27pm
ಇನ್ನಷ್ಟು


ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator