ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
- ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayaka (May 2 2008 - 11:27am)
- ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayaka (May 2 2008 - 11:27am)
- ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: Srimatha (May 1 2008 - 11:58pm)
- ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: uniquesupri (May 1 2008 - 12:30pm)
- ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayaka (May 1 2008 - 11:10am)
- ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: kalpana (Apr 28 2008 - 10:24pm)
- ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayaka (Apr 30 2008 - 11:39am)
- ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: Srimatha (Apr 30 2008 - 1:09pm)
- ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayaka (Apr 30 2008 - 11:39am)
- ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: Srimatha (Apr 28 2008 - 6:14pm)
- ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: roopablrao (Apr 28 2008 - 2:32pm)
- ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: madhava_hs (Apr 28 2008 - 11:21am)
- ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?! By: vinayudupa (Apr 28 2008 - 11:05am)

RSS:
ಉ: ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
ವಿನಾಯಕರೇ,
ಸುಮ್ಮನೆ ಯಾವುದೋ ಲಹರಿಯಲ್ಲಿ ಈ ವಾದವನ್ನು ನೀವು ಅರೆಬೆಂದ ವೈಚಾರಿಕತೆಯಲ್ಲಿ ಮಂಡಿಸಿದ ಹಾಗಿದೆ.
ಮೀಸಲಾತಿ ಅಂದರೆ ಏನು ಎಂಬುದನ್ನು ಮೊದಲು ಸ್ಪಷ್ಟವಾಗಿಸಿಕೊಳ್ಳಿ. ‘ಸಮಾನ ಅವಕಾಶಗಳು’ ಎಂಬ ಆದರ್ಶವನ್ನು ಸಾಧಿಸುವುದಕ್ಕಾಗಿ ಈ ಮೀಸಲಾತಿ ಎಂಬುದು ಒಂದು ದಾರಿ. ಮೀಸಲಾತಿ ಅನುಕಂಪವಲ್ಲ, ಅವಕಾಶ ವಂಚಿತರ ಸಾಂವಿಧಾನಿಕ ಹಕ್ಕು. ಅದು ಯಾರೋ ಕೂತು ತಮ್ಮ ಮೆಹರುಬಾನಿಯಿಂದ ಮಂಜೂರು ಮಾಡುವ ಸವಲತ್ತು ಅಲ್ಲ.
ಇನ್ನು ಈ ಕಲಿಯುಗದಲ್ಲಿ ಮೀಸಲಾತಿ ಬೇಕೆ ಎಂದಿರುವುದು ನಿಮ್ಮ ಇಡೀ ಲೇಖನದ ಹಿಂದಿನ ಮನಸ್ಥಿತಿಯನ್ನು ತೋರುತ್ತದೆ. ನಿಮಗೆ ‘ಕಲಿಯುಗ’ವಾಗಿ ಬ್ರಿಗೇಡ್ ರೋಡ್, ಎಂ.ಜಿ ರೋಡ್, ಪಬ್‌ಗಳಲ್ಲಿನ ಲಲನೆಯರು ಇರುವ ಕಾಲವಾಗಿ ಕಾಣುತ್ತಿದ್ದರೆ ಅದು ನಿಮ್ಮ ದೃಷ್ಟಿಯಲ್ಲಿರುವ ದೋಷ. ಕೊಂಚ ಆ ಗ್ಲಾಮರ್‌ನಿಂದ ಹೊರಬನ್ನಿ, ಹೆಣ್ಣನ್ನು ಸೆಕೆಂಡ್ ಸೆಕ್ಸ್ ಎಂತಲೇ ಕಾಣುವ ಮನಸ್ಥಿತಿ ಎಲ್ಲಾ ಸಮಾಜಗಳಲ್ಲೂ ಇದೆ. ಇದಕ್ಕೆ ಮುಂದುವರಿದ ಪಾಶ್ಚಿಮಾತ್ಯ ಸಮಾಜವೇ ನಿದರ್ಶನ. ಹೇಳಿ, ರಾಜಕೀಯದಲ್ಲಿ ಎಷ್ಟು ಮಂದಿ ಮಹಿಳೆಯರಿಗೆ ಸ್ಥಾನ ಸಿಕ್ಕುತ್ತದೆ ಮೀಸಲಾತಿ ಇರದಿದ್ದರೆ? ಇನ್ನು ಶಕ್ತಿಯಿದ್ದವರು ಬಡಿದಾಡಿ ಪಡೆಯಬೇಕು ಎನ್ನುವುದು ಪ್ರಾಣಿ ಜಗತ್ತಿನ ನಿಯಮವಾಗುತ್ತದೆ... ಅಲ್ಲವೇ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com