ದಿನವೂ ಬೆಳಿಗ್ಗೆ ಹಾಲಿಗೆ, ಪೇಪರಿಗೆ ಹೋದಾಗ ಎದುರಾಗುವ ಮುಖಗಳು, ಹಗಲಾಗದಿರಲಿ ಬೇಗ ಎನ್ನುವ ಧಾವಂತದಲ್ಲೇ ಇರುವ ಪೇಪರಿನ, ಹಾಲಿನ ಹುಡುಗರು, ಕಸ ಎಸೆಯಲು ಹೋದಾಗ ಇನ್ನೂ ಮಂಪರಿನ ಮುದ್ದೆ ಮುದ್ದೆ ಕಣ್ಣು, ಚಪ್ಪಟೆ ಮುಖ ಹೊತ್ತು ಎದುರಾಗುವವರು, ಬಸ್ಸಿನಲ್ಲಿ, ಹಾದಿಯಲ್ಲಿ ದಿನವೂ ಸಿಗುವ ಅದೇ ಅದೇ ಮಂದಿ, ನಿಮ್ಮ ಪಕ್ಕದ ಸೀಟಿನಲ್ಲೇ ಕುಳಿತ ಆತ ಅಥವಾ ಆಕೆ, ಪಕ್ಕದ ಫ್ಲ್ಯಾಟಿಗೆ ಹೊಸದಾಗಿ ಬಂದವರು, ಮುಖಮುಖ ನೋಡಿ ನಗಲೋ ಬೇಡವೋ ಎಂದು ತಿಂಗಳಿಂದ ಯೋಚಿಸುತ್ತಲೇ ಇರುವವರು... ನಿಮ್ಮ ಆಫೀಸಿಗೆ ಬಂದು ಯಾರನ್ನು ಮಾತನಾಡಿಸಬೇಕೋ ತಿಳಿಯದೆ ಕಂಗಾಲಾಗಿ ಇನ್ಯಾಕೋ ನಿಮ್ಮ ಮುಖಕ್ಕೆ ನಗು ಎಸೆಯಲು ಹಿಂಜರಿಯುತ್ತಿರುವವರು....ನಿಮಗೆ ದಿನವೂ ಪ್ರೀತಿಯಿಂದ ತನ್ನ ಎಂಜಲು ಹಚ್ಚಿ ಟಿಕೆಟ್ ಹರಿದು ಕೊಡುವ ಕಂಡೆಕ್ಟರ್, ನಿಮ್ಮನ್ನು ಒಂದು ದಿನವೂ ಬಿಟ್ಟು ಹೋಗುವ ಮನಸ್ಸು ಬರದ ಅದೇ 31A ರೂಟಿನ ದಪ್ಪ ಹುಬ್ಬುಗಳ ಡ್ರೈವರ್, ಆ ತಿರುವಿನಲ್ಲಿ ದಿನವೂ ಬಸ್ಸು ಹತ್ತುವ ಅಜ್ಜ.... ದಿನವೂ ಟ್ರಾಫಿಕ್ಕಿನಲ್ಲಿ ದಿನಬಿಟ್ಟು ದಿನ ನಿಲ್ಲುವ ಅದೇ ಹೊಸ ಹೊಸ ಯುವ ಪೋಲೀಸರು-ಪೋಲೀಸಿಣಿಯರು....ಸ್ವಲ್ಪ ಇರಿ, ಒಂದು ದಮ್ಮು ಎಳೆದು ಬರುತ್ತೇನೆ ಎಂದು ಮಾಯವಾಗುವ ಮ್ಯಾಗಝೀನ್ ಅಂಗಡಿಯ ಮುದುಕ...
ಉ: ಓದಿದ್ದು

ಹತ್ತಿರವಿದ್ದೂ ದೂರ....ಕೋಟೆ ಸುಭದ್ರ!