ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: Prabhu Murthy (May 5 2008 - 12:36pm)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: hamsanandi (May 6 2008 - 12:04am)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: hamsanandi (May 6 2008 - 12:11am)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: hamsanandi (May 6 2008 - 12:04am)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: Narayana (May 2 2008 - 12:33am)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: Narayana (May 2 2008 - 12:05am)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: hamsanandi (May 2 2008 - 2:00am)

RSS:
ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)
ಒಂದು ಸ್ವರದಲ್ಲಿ ಎರಡು ವಿಧಗಳಿದ್ದಾಗ, ಕೆಳಗಿರುವ ಸ್ವರವನ್ನು ಕೋಮಲವೆಂದೂ, ಮೇಲಿರುವ ಸ್ವರವನ್ನು ತೀವ್ರವೆಂದೂ ಹೇಳುವುದು ಹಿಂದೂಸ್ತಾನಿಯಲ್ಲಿ ಪದ್ಧತಿ.
ಹಿಂದೂಸ್ತಾನಿ ಪದ್ಧತಿಯಲ್ಲಿ ರಿ, ಗ, ಧ ಮತ್ತು ನಿ ಸ್ವರಗಳ ಕೆಳಗಿನ ಶ್ರುತಿಗಳಿಗೆ ’ಕೋಮಲ್’ ಎಂದೂ ಮೇಲಿನವುಗಳಿಗೆ ’ಶುದ್ಧ’ ಎಂದೂ
ಮತ್ತು
ಮಧ್ಯಮದ ಕೆಳಗಿನ ಶ್ರುತಿಯನ್ನು ’ಶುದ್ಧ’ ಎಂದೂ ಮೇಲಿನದನ್ನು ’ತೀವ್ರ’ ಎಂದೂ ಕರೆಯುತ್ತಾರಲ್ಲವೆ?
ಉದಾ: ಯಮನ್ ರಾಗದಲ್ಲಿ ಪ್ರಯೋಗಿಸುವುದು ’ತೀವ್ರ’ ಮಧ್ಯಮ. ಬಿಲಾವಲದಲ್ಲಿ ’ಶುದ್ಧ’ ಮಧ್ಯಮ.
ಮಧ್ಯಮದ ಶ್ರುತಿಗಳನ್ನು ಮಾತ್ರ ಹಾಗೆ ಕರೆಯುವುದನ್ನು ಅವುಗಳ ಆವೃತ್ತಿಗಳ (frequency) ಪರಸ್ಪರ ಅನುಪಾತವನ್ನು (ratio) ಆಧಾರವಾಗಿಟ್ಟುಕೊಂಡು ವಿವರಿಸಬಹುದು ಎಂದು ಓದಿರುವ ಅಸ್ಪಷ್ಟವಾದ ನೆನಪಿದೆ. ಯಾರಾದರೂ ಸಂಗೀತಶಾಸ್ತ್ರ ಮತ್ತು ಗಣಿತಗಳ ಉಭಯಪರಿಣಿತರಿದ್ದರೆ (ಪರಿಣಿತರಾಗಿ
) ಅದನ್ನು ಸ್ಪಷ್ಟಪಡಿಸಬಹುದು.
೧೨ ಅಥವಾ ೨೨ (ಬೇಕಾದರೆ ೨೭, ೩೨, ... infinite series) ಶ್ರುತಿಗಳ ಸ್ಥಾನಗಳನ್ನು ಆಧಾರ ಶಡ್ಜದಿಂದ ಒಂದೇ ಅನುಪಾತವನ್ನು ಬಳಸಿ ನಿರ್ಧರಿಸುವ ಒಂದು ಸರಳವಾದ algorithm ಇದೆ. ಅದರಂತೆ ಒಂದು C program ಬರೆದು computerನಲ್ಲಿ ಆಯಾ ಶ್ರುತಿಗಳ ಶಬ್ದಗಳನ್ನು ಹೊರಡಿಸಬಹುದು. ನಾನು ಹಿಂದೆ ಬೇರೆ ಬೇರೆ ಅನುಪಾತಗಳನ್ನು (ಉದಾ. golden ration ಅಂದರೆ (1 + sqrt(5)) / 2 ), ಇತ್ಯಾದಿ) ಬಳಸಿದರೆ ಉತ್ಪನ್ನವಾಗುವ ಶ್ರುತಿಗಳನ್ನು computerನಲ್ಲಿ ಹೊರಡಿಸಿದ್ದೆ. ಆದರೆ ಅವು ಉತ್ಪಾದಿಸಿದ ಶ್ರುತಿಗಳು ಕೊಂಚವೂ ತೃಪ್ತಿದಾಯಕವಾಗಿರಲಿಲ್ಲ. ಪ್ರಾಯಶಃ ಚಿಕ್ಕಂದಿನಿಂದಲೆ ಆಗಿರುವ conditioning ಇದಕ್ಕೆ ಕಾರಣವಾಗಿರಬಹುದು.
ಆ ಅನುಪಾತವನ್ನು ೨ ರ ೧೨ ನೇ ಘಾತವಾಗಿಸಿಕೊಂಡರೆ (12th root of 2) ಪೈಥಾಗೊರಸ್~ನ normalized scaleನ ಶ್ರುತಿಗಳು ಉತ್ಪನ್ನವಾಗುತ್ತವೆ. ಹಾರ್ಮೋನಿಯಂ, ಪಿಯಾನೋ ಇತ್ಯಾದಿ ಪಾಶ್ಚಾತ್ಯ ವಾದ್ಯಗಳಲ್ಲಿರುವಂತೆ. ನಿಜ, ಇದು ಹೈಸ್ಕೂಲ್ ಭೌತಶಾಸ್ತ್ರದಲ್ಲಿ ಕಲಿತಿದ್ದ ವಿಶಯ! ಆದರೆ ಆ ಪಾಠ ಹೇಳದ ಗಹನವಾದ ವಿಶಯ ಎಂದರೆ ನಮ್ಮ ಶ್ರುತಿಗಳಂತೆ ಇಲ್ಲಿನ ಶ್ರುತಿಗಳ ಪಂಕ್ತಿ inifinite series ಆಗುವುದಿಲ್ಲ! ಈ ವೈಶಿಷ್ಠ್ಯತೆ ನಮ್ಮ ವಾದ್ಯಗಳ ಮತ್ತು ಸಂಗೀತದ melodic ಸಂಕೀರ್ಣತೆ ಮತ್ತು ಸೌಂದರ್ಯೋಪಾಸಕ (aesthetic) ಗುಣಗಳನ್ನು ವೃದ್ಧಿಸಿದೆ ಎನಿಸುತ್ತದೆ.
ಭೈರವಿ:
) ಪ್ರಾತಃಸಂಧ್ಯಾ ವೇಳೆಗೆ ಮುಗಿಯುತ್ತಿದ್ದವಂತೆ. ಆ ಪ್ರಹರಕ್ಕೆ (೧ ಪ್ರಹರ == ೩ ತಾಸು; ದಿನಕ್ಕೆಂಟು ಪ್ರಹರಗಳು; ಪ್ರತಿ ಪ್ರಹರಕ್ಕೂ ಅದಕ್ಕೇ ಒಪ್ಪುವ ರಾಗಗಳು!) ಒಪ್ಪುವ ರಾಗಗಳಲ್ಲಿ ಭೈರವಿಯು ಜನಪ್ರಿಯವಾಗಿ ಅಂತಹ ಕಚೇರಿಗಳು ಆ ರಾಗದಲ್ಲೆ ಸಮಾಪ್ತವಾಗುವ ರೂಢಿ ಬೆಳೆದಿರಬೇಕು. ಉಳಿದ ಸಮಯಗಳಲ್ಲಿ ಆಗುವ ಕಚೇರಿಗಳೂ ಅದೇ ವಾಡಿಕೆಯನ್ನು ಮಾಡಿಕೊಂಡಿರಬೇಕು.
’ರಾತ್ರಿಯಿಡೀ ಸಂಗೀತ ಕಚೇರಿ’ಗಳು (ಹಿಂದೂಸ್ತಾನಿಯವರು ’ಕಚೇರಿ’ ಪದ ಉಪಯೋಗಿಸಲ್ಲ
ಅಂದಹಾಗೆ, ಕರ್ನಾಟಕೀಯ ಸಂಪ್ರದಾಯದಲ್ಲಿ ಮಧ್ಯಮಾವತಿಯಲ್ಲಿ ಮುಗಿಸಬೇಕೆಂಬ ಕ್ರಮವನ್ನು ಅಷ್ಟೊಂದು (ಹಿಂದೂಸ್ತಾನಿಯಲ್ಲಿ ಭೈರವಿಯಷ್ಟು) ಕಟ್ಟುನಿಟ್ಟಾಗಿ ಪಾಲಿಸುವಂತೆ ತೋರುವುದಿಲ್ಲ.
ನಿಮ್ಮ ಲೇಖನ ಚೆನ್ನಾಗಿದೆ.
ಪ್ರಭು ಮೂರ್ತಿ