ಉ: ಸರಿ
- ಸರಿ By: ಸಂಗನಗೌಡ (Sep 25 2006 - 8:27pm)
- ಉ: ಸರಿ By: kannadakanda (May 6 2008 - 7:02pm)
- ಉ: ಸರಿ By: Sunil Jayaprakash (May 8 2008 - 11:58am)
- ಉ: ಸರಿ By: kannadakanda (May 12 2008 - 8:24pm)
- ಉ: ಸರಿ By: mahesha (May 8 2008 - 12:42pm)
- ಉ: ಸರಿ By: mahesha (May 7 2008 - 7:43am)
- ಉ: ಸರಿ By: ಸಂಗನಗೌಡ (May 6 2008 - 11:15pm)
- ಉ: ಸರಿ By: Sunil Jayaprakash (May 8 2008 - 11:58am)
- ತಾಳ್, ತಾಳು ಮತ್ತು ಮೇಲು By: Sunil Jayaprakash (Sep 26 2006 - 3:24pm)
- ಇನ್ನೊಂದು ಮಾತು By: ಸಂಗನಗೌಡ (Sep 27 2006 - 9:05am)
- ತುಸು ಆಳಕ್ಕೆ By: ಸಂಗನಗೌಡ (Sep 26 2006 - 10:51pm)
- ಗಕ್ಕನೆಕೊನೆಗೊಳ್ಳುವ ಪದಗಳು - ಒತ್ತಕ್ಷರಗಳ ಮುಂದುವರಿದ ಕಂತು By: Sunil Jayaprakash (Sep 28 2006 - 9:45am)
- ನನ್ನ ಆಯಿಕೆ By: ಸಂಗನಗೌಡ (Sep 29 2006 - 2:05pm)
- ಗಕ್ಕನೆಕೊನೆಗೊಳ್ಳುವ ಪದಗಳು - ಒತ್ತಕ್ಷರಗಳ ಮುಂದುವರಿದ ಕಂತು By: Sunil Jayaprakash (Sep 28 2006 - 9:45am)
- ಉ: ಸರಿ By: kannadakanda (May 6 2008 - 7:02pm)
- ಮತ್ತೊಂದಿಷ್ಟು By: benaka (Sep 25 2006 - 11:16am)
- ಉ: ಮತ್ತೊಂದಿಷ್ಟು By: kannadakanda (Jun 9 2008 - 4:30pm)
- ಉ: ಮತ್ತೊಂದಿಷ್ಟು By: hamsanandi (Jun 9 2008 - 9:45pm)
- ಉ: ಮತ್ತೊಂದಿಷ್ಟು By: kannadakanda (Jun 9 2008 - 4:30pm)

RSS:
ಉ: ಸರಿ
ಒತ್ತಕ್ಷರಗಳು ಬೇಱೆ. ಸಂಯುಕ್ತಾಕ್ಷರಗಳು ಬೇಱೆ. ಒತ್ತಕ್ಷರಗಳೆಂದರೆ ಒಂದೇ ವ್ಯಂಜನ ಒತ್ತಲ್ಪಟ್ಟು ಉಚ್ಚರಿಸಲ್ಪಡುವುದು. ಉದಾ: ಕ್ಕ, ಚ್ಚ, ಟ್ಟ, ತ್ತ, ನ್ನ ಇತ್ಯಾದಿ. ಆದರೆ ಸಂಯುಕ್ತಾಕ್ಷರಗಳೆಂದರೆ ಕ್ಷ, ಕ್ಲ ಇತ್ಯಾದಿ ವಿಜಾತೀಯ ವ್ಯಂಜನಗಳು ಸೇರಿ ಆಗುವ ಅಕ್ಷರಗಳು. ಮಾನ್ಯ ಸುನೀಲ್‍ರವರು ನಿಜಕ್ಕೂ ಕನ್ನಡವನ್ನು ಚೆನ್ನಾಗಿ ಗಮನಿಸಿದ್ದರೆ ಸಂಯುಕ್ತಾಕ್ಷರಗಳು ಸಂಸ್ಕೃತಕ್ಕಿಂತ ಕಡಿಮೆ. ಪೂರ್ವದ ವ್ಯಂಜನ ನ್, ಣ್, ಯ್, ರ್, ಲ್, ಳ್, ೞ್ ಹಾಗೂ ಕೆಲವು ವೇಳೆ ಱ್ ಇದ್ದಾಗ ಮಾತ್ರ ಸಂಯುಕ್ತಾಕ್ಷರಗಳನ್ನು ಮಾಡಬಹುದು. ಇನ್ನೊಂದು ವಿಶೇಷವೆಂದರೆ ’ಱ್’ ನ ಉಚ್ಚಾರ ದಂತಮೂಲೀಯ ಕಂಪಿತವಾಗಿರುವುದರಿಂದ ಹೆಚ್ಚಾಗಿ ಹೞಗನ್ನಡ ಹಾಗೂ ಹೊಸಗನ್ನಡದಲ್ಲಿ ’ಱ್ಱ್’ ನಿಜವಾಗಿ ’ತ್ತ್’ ಆಗುತ್ತದೆ. ಗಮನಿಸಿ ತಮಿೞಿನ ಮಱ್ಱುಂ ಕನ್ನಡದಲ್ಲಿ ಮತ್ತು ’ನೆಱ್ಱಿ ’ ಕನ್ನಡದಲ್ಲಿ ’ನೆತ್ತಿ’ ಇತ್ಯಾದಿ. ಮಾನ್ಯ ಸುನೀಲರವರು ಇದನ್ನು ಗಮನಿಸದಿರುವುದು ದುರದೃಷ್ಟಕರ. ಹಾಗಾಗಿ ಅವರ ಸಂಯುಕ್ತಾಕ್ಷರಗಳ ಉದಾಹರೆಣೆಯಲ್ಲಿ ’ಜಾಣ್ಮೆ’, ’ಮೇಲ್ಮೆ’ ಇತ್ಯಾದಿ ಕನ್ನಡದ ನಿಯಮಿತ ಸಂಯುಕ್ತಾಕ್ಷರಗಳು ದೊರೆಯುತ್ತವೆ. ಸಂಸ್ಕೃತ ಬಿಟ್ಟರೆ ಇನ್ನಾವ ಭಾರತೀಯ ಭಾಷೆಗಳಲ್ಲಿ ವಿಸ್ತಾರವಾದ ಸಂಯುಕ್ತಾಕ್ಷರಗಳ ಸಂಯೋಜನೆ (Combination) ಕಾಣುವುದಿಲ್ಲ.