ಸ್ವಾಮಿ,
ನೀವು ಹೇಗೆ z, f (ಪ್ರಾಯಶಃ z ದಂತ್ಯವಾಗಿದ್ದು, f ವಕಾರದಂತೆ ದಂತೋಷ್ಠವಾಗಿದೆ. ಹಲ್ಲು ಮತ್ತು ತುಟಿಗಳೆರಡಱಿಂದ ಉಚ್ಚರಿಸಲ್ಪಡುವ ಅಕ್ಷರಗಳೆರಡು ಈ ವ್ (v) ಹಾಗೂ f)ಗಳಿಗೆ ಹೊಸ ಸಂಕೇತಗಳನ್ನು ಕೊಡಲುತ್ಸುಕರಾಗಿರುವಂತೆ ಕನ್ನಡಕ್ಕೆ (ಹಾಗೂ ಇನ್ನೆಲ್ಲ ದ್ರಾವಿಡ ಭಾಷೆಗಳಿಗೆ) ವಿಶಿಷ್ಟವಾಗಿರುವ ’ಱ’ ಹಾಗೂ ’ೞ’ ಗಳನ್ನು ಉೞಿಸಿಕೊಳ್ಳಲು ಉತ್ಸಾಹ ತೋಱಬಾರದು. ವಾಸ್ತವವಾಗಿ ಈ z, f ಗಳೆರಡೂ ನಮಗೆ ಆಂಗ್ಲಕ್ಕಿಂತ ಮೊದಲು ಪಾರ್ಸಿ ಹಾಗೂ ಅರಬ್ಬರಿಂದ ಬಂದಿರಬೇಕು. ಹಾಗಾಗಿ ಹೞಗನ್ನಡದಲ್ಲೆಲ್ಲೂ ಸಿಗುವುದಿಲ್ಲ. ಬಿಜಾಪುರದವರೇ ಆದ ನಾಗಚಂದ್ರ, ರನ್ನರ ಕಾವ್ಯದಲ್ಲೂ ಈ f,z ಧ್ವನಿಗಳು ಸಿಗಲಾಱವು. ಆದರೆ ’ಱ’ ಹಾಗೂ ’ೞ’ ಗಳು ಕನಿಷ್ಠ ತಾೞೆಗರಿಗಳೊಂದಱಲ್ಲಿಯೂ ಸಿಗಬಹುದು. ಯಾಕೆಂದರೆ ಬಿಜಾಪುರದ ಸುಲ್ತಾನರೇ ಈ z, f ಗಳನ್ನು ನಮಗೆ ಪರಿಚಯಿಸಿರಬಹುದು. ಅದೂ ರನ್ನ, ನಾಗಚಂದ್ರರ ಕಾಲದಿಂದ ಸುಮಾರು ೪೦೦-೬೦೦ ವರ್ಷಗಳ ಮೇಲೆ.
ಉ: fa ಮತ್ತು za