ಕನ್ನಡ ಸಂಸ್ಕೃತ
- ಉ: ಕೇಶಿರಾಜನ ಶಬ್ದಮಣಿ ದರ್‍ಪಣಂ By: kannadakanda (Aug 6 2008 - 12:56pm)
- ಉ: ಕೇಶಿರಾಜನ ಶಬ್ದಮಣಿ ದರ್‍ಪಣಂ By: mahesha (Aug 7 2008 - 9:18am)
- ಶಬ್ದಮಣಿ ದರ್ಪಣ By: ismail (Mar 11 2006 - 12:11pm)
- ಪಾಣಿನಿ By: mahesh_b_s (Mar 13 2006 - 11:22am)
- ಕನ್ನಡ ಸಂಸ್ಕೃತ By: mahesh_b_s (Mar 13 2006 - 12:24pm)
- ಉ: ಕನ್ನಡ ಸಂಸ್ಕೃತ By: kannadakanda (Jun 9 2008 - 4:08pm)
- ಕನ್ನಡ ಮತ್ತು ಸಂಸ್ಕೃತ By: shreekant.mishrikoti (Mar 13 2006 - 12:03pm)
- ಕನ್ನಡ ಸಂಸ್ಕೃತ By: mahesh_b_s (Mar 13 2006 - 12:24pm)
- ಪಾಣಿನಿ By: mahesh_b_s (Mar 13 2006 - 11:22am)

RSS:
ಕನ್ನಡ ಸಂಸ್ಕೃತ
"ೠ" ಕಾರವನ್ನು ಸರಕಾರ ಬಿಟ್ಟಿರಬಹುದು ಆದರೆ.
ಮಾತೃ+ಋಣ = ಮಾತೄಣ ವಾಗುವುದು, ಹೀಗೆ
ಪಿತೃ+ಋಣ = ಪಿತೄಣ
ಆದ್ದರಿಂದ "ೠ"ಕಾರವು ಕನ್ನಡದಲ್ಲು ಅವಶ್ಯಕವೆ.
ಇನ್ನು ಲೃ.. ಕನ್ನಡದಲ್ಲಿ ಸಂಸ್ಕೃತ ಶ್ಲೋಕಗಳನ್ನು ಮತ್ತು ವೇದ ಮಂತ್ರಗಳನ್ನು ಮುದ್ರಿಸುವಾಗ "ಲೃ"ಕಾರವು ಬೇಕು.
ಕನ್ನಡದಲ್ಲಿ ಕೇವಲ, ಆದೇಶ, ಲೋಪ ಮತ್ತು ಆಗಮ ಗಳೆಂಬ ಮೂರು ಸಂಧಿಗಳು ಕನ್ನಡ ಸಂಧಿಗಳು. ಹಾಗು ಸವರ್ಣಧೀರ್ಘ, ಗುಣ, ಯಣ್, ವೃದ್ಧಿ, ಅನುನಾಸಿಕ, ವಿಸರ್ಗ, ಇತ್ಯಾದಿಗಳು ಸಂಸ್ಕೃತದ ಸಂಧಿಗಳು.
ಆದರೆ ಕಿಸು+ಪೊೞಲ್ = ಕಿಸುವೊೞಲ್ ("ಕವಿ ರಾಜ ಮಾರ್ಗ") ಇದು ಯಾವ ಸಂಧಿ, ಹಾಗೆ
ಕಿರು + ಮಕ್ಕಳ್ = ಕಿರುವಕ್ಕಳ್("ಕವಿ ರಾಜ ಮಾರ್ಗ")?
ಇನ್ನು ಸಮಾಸಗಳಲ್ಲಿ ಗಮಕ ಮತ್ತು ಅರಿ ಸಮಾಸಗಳನ್ನು ಬಿಟ್ಟು ಮಿಕ್ಕೆಲ್ಲ ಸಮಾಸಗಳು ಸಂಸ್ಕೃತದ್ದೆ.
ನಮ್ಮ ನಾಡ ಗೀತೆಯ ಮೊದಲ ಸಾಲಾದ
"ಜಯ ಭಾರತ ಜನನಿಯ ತನುಜಾತೆ, ಜಯ ಹೆ ಕರ್ಣಾಟಕ ಮಾತೆ" ಯಲ್ಲಿ ಒಂದೂ ಅಚ್ಚಗನ್ನಡ ಪದವಿಲ್ಲ ಎಲ್ಲವು ಸಂಸ್ಖೃತದ ಪದಗಳು.
ಹೀಗೆ ಇತ್ಯಾದಿ