ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ? - ಭಾಗ ೩?!?!?

ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ? - ಭಾಗ ೩?!?!?

ಬರಹ

ಎಲ್ಲರಿಗೂ ನಮಸ್ಕಾರ,
"ರ್ರೀ ಮನೆಗೆ ಎಷ್ಟು ಹೊತ್ತಿಗೆ ಬರ್ತೀರಿ?" ಸರಣಿ ಲೀಖನಗಳನ್ನು ನಿಲ್ಲಿಸಬೇಕಾಗಿ ಬರುತ್ತಿದೆ, ಕ್ಷಮೆಯಿರಲಿ. ಕೆಲವು ತೂಕದ ವ್ಯಕ್ತಿಗಳ ಆಜ್ಞೆಯ ಮೇರೆಗೆ ನಾನು ತುಂಬ ಕಷ್ಟವೆನಿಸುವ ಈ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಲಿದ್ದೇನೆ.
ನನಗೆ ಗೊತ್ತಿದೆ, ಹೀಗೆ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಬೇಡಿ, ತೂಕದ ವ್ಯಕ್ತಿಗಳು ಎಂದರೆ ಯಾರು? ಎಂದರೆ, ಯಾಕೆ ಸ್ವಾಮಿ? ನನ್ನ ಸಂಸಾರ ನೆಟ್ಟಗೆ ನಡೆಯುವುದು ನಿಮಗೆ ಇಷ್ಟವಿಲ್ಲವೇ ಎಂದು ಕೇಳಬೇಕಾಗಿ ಬರಬಹುದು ಆದುದರಿಂದ ದಯವಿಟ್ಟು ಆ ಪ್ರಶ್ನೆ ಕೇಳಬೇಡಿ.
ವ್ಯಕ್ತಿಗಳು ಎಂದಿರುವಿರಲ್ಲ ಎಷ್ಟು ಜನ ನಿಮಗೆ ಹೀಗೆ ಕೇಳಿರುವರು? ಎಂದರೆ ಕೂಡ ನನ್ನದು ಮೇಲಿನದೇ ಉತ್ತರ.
ಒಟ್ಟಿನಲ್ಲಿ ಕಷ್ಟಗಳನ್ನು ಅನುಭವಿಸಬೇಕೆ ಹೊರತು ಅವನ್ನು ಹೊರಹಾಕಬಾರದು ಎಂಬುದು ನನ್ನ ಅನುಭವಕ್ಕೆ ವೇದ್ಯವಾದ ವಿಚಾರ. ಕಷ್ಟಗಳನ್ನು ಹೊರಹಾಕಬಾರದು ಎನ್ನುವುದು ಎಲ್ಲಿಂದ ಎಂಬ ತುಂಟ ಪ್ರಶ್ನೆಯೊಂದು ನಿಮ್ಮ ಮನಸಿನಲ್ಲಿ ಹುಟ್ಟಿದರೆ ಅದಕ್ಕೆ ನನ್ನ ಉತ್ತರ ನಿಮಗೆ ನೀವು ಕೂಡ ಕಷ್ಟಗಳನ್ನು ಹೇಳಿಕೊಳ್ಳಬೇಡಿ ಏಕೆಂದರೆ ಮದುವೆಯ ನಂತರ ಮನದ ಗೋಡೆಗಳಿಗೆ ಕೂಡ ಕಿವಿಗಳು ಮೂಡಿರುತ್ತವೆ.
ಮದುವೆಯಾದ ನಂತರ ವ್ಯಕ್ತಿಯ ವಾಕ್ ಸ್ವಾತಂತ್ರ್ಯ ಕೇವಲ ನೆಂಟರ ಮನೆಗಳಲ್ಲಿ, ಮದುವೆ ಮನೆಗಳಲ್ಲಿ,ಮಾವನ ಮನೆಯಲ್ಲಿ ಕಿತ್ತುಕೊಳ್ಳಲ್ಪಡುತ್ತದೆ ಎಂದುಕೊಂಡವನಿಗೆ ಇದು ತೀರ ಅಸಹಜವೆನ್ನುವ ಬೆಳವಣಿಗೆ, ನನ್ನ ಅಂತರ್ಜಾಲದ ಹಕ್ಕು ಕೂಡ ಕಾಣೆಯಾಗುತ್ತಿದೆ, ಹಾಗಾಗಿ ನಾನು ನನ್ನ ಅಂತರ್ಜಾಲದ ವಾಕ್ ಸ್ವಾತಂತ್ರ್ಯಕ್ಕಾಗಿ ನಾಳೆಯಿಂದ ಹೋರಾಟ ಮಾಡುವವನಿದ್ದೇನೆ. ನಿಮ್ಮೆಲ್ಲರ ಸಹಾಯ ಸಹಕಾರ ವನ್ನು ಕೋರುತ್ತಾ ನನ್ನ ಸ್ವಾತಂತ್ರ್ಯಾ ಹೋರಾಟದ ನಂತರ ನನ್ನ ಲೇಖನ ಸರಣಿಯನ್ನು ಮುಂದುವರೆಸುವ
ಆಸೆಗೆ ನಿಮ್ಮೆಲ್ಲರ ಹಾರೈಕೆಯನ್ನು ಬೇಡುತ್ತಾ.......
ಸರಿ sir,
ಮನೆಯವಳ ಫೋನ್ ಬರ್ತಾ ಇದೆ ಪ್ರಶ್ನೆ ಗೊತ್ತಲ್ಲ?
"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?"
ನನ್ನ ಲೇಖನಗಳು ಪ್ರಕಟವಾದ ನಂತರ ನನ್ನ ಮನೆಯವಳು ಎರಡನೇ ಪ್ರಶ್ನೆಯನ್ನು ಕೂಡ ಕೇಳಲಿಕ್ಕೆ ಶುರು ಮಾಡಿದ್ದಾಳೆ
"ರ್ರೀ ಏನು ಬರೀತಾ ಕೂತಿದೀರಿ?"