ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
- ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ By: ಸಂಗನಗೌಡ (May 17 2008 - 4:38pm)
- ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ By: ಸಂಗನಗೌಡ (May 17 2008 - 4:53pm)

RSS:
ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
ಈ ಸಂಗತಿಗಳು ದಿಟಕ್ಕೂ ದಿಗಿಲು ಮೂಡಿಸುವಂತಿವೆ.
*೫ ವರುಶದ ಕೆಳಗಿನ ಮಕ್ಕಳಲ್ಲಿ ನೂರರಲ್ಲಿ ೪೮ ಮಕ್ಕಳು malnutrition ಇಂದಾಗಿ ಕುಂಟಿತ ಬೆಳವಣಿಗೆಯವರಾಗಿದ್ದಾರಂತೆ. ಅಂದರೆ ಹೆಚ್ಚು-ಕಡಿಮೆ ಯಾವುದೇ ಇಬ್ಬರು ಮಕ್ಕಳಲ್ಲಿ ಒಬ್ಬ ಕುಂಟಿತ ಬೆಳವಣಿಗೆಯವ.
*ನೂರರಲ್ಲಿ ಮುವತ್ತು ಮಕ್ಕಳು ಕಡಿಮೆ ತೂಕದವರಾಗಿ ಹುಟ್ಟುತ್ತಾರೆ.
*ಈಗ ಕೂಳು ದಿನಿಸು ತುಟ್ಟಿ ಆಗಿರುವದರಿಂದ, ಇನ್ನೂ ೧.೫ ರಿಂದ ೧.೮ ಮಿಲಿಯನ್ ಅಂದರೆ ೧೫ ರಿಂದ ೧೮ ಲಕ್ಷ ಮಕ್ಕಳು(ಈಗಾಗಲೇ ಐವತ್ತು ಮಿಲಿಯನ್ ಅಂದರೆ ೫ ಕೋಟಿ ಮಕ್ಕಳು malnutrition ಅಂದರೆ ಕುಂಟಿತ ಬೆಳವಣಿಗೆಯ ತೊಂದರೆಯಿಂದ ಬಳಲುತ್ತಿದ್ದಾರೆ!!!) ಕುಂಟಿತ ಬೆಳವಣಿಗೆಯ ತೊಂದರೆಯಿಂದ ಬಳಲಿದ್ದಾರೆ.
*ಬಡವರು ಊಟದ ಸಂಕೆಗಳನ್ನು ಕಡಿಮೆಗೊಳಿಸಿಕೊಳ್ಳುತ್ತಿದ್ದಾರಂತೆ. ಮೂರು ಹೊತ್ತು ತಿನ್ನುತ್ತಿದ್ದವರು ಎರಡು ಹೊತ್ತಿಗೆ, ಎರಡು ಹೊತ್ತಿನವರು ಒಂದು ಹೊತ್ತಿಗೆ ಹಿಂಬಡತಿ ಹೊಂದುತ್ತಿದ್ದಾರೆ.
*ಮುನ್ನೂರು ಮಿಲಿಯನ್ ಅಂದರೆ ಮುವತ್ತು ಕೋಟಿ ಮಂದಿ ದಿನಕ್ಕೆ ಒಂದು ಡಾಲರಿಗಿಂತ ಕಡಿಮೆ ಹಣದಲ್ಲಿ ಬದುಕುತ್ತಿದ್ದಾರೆ.
*ಇದರಿಂದ ಸಾಲೆಯಿಂದ ಹೊರಬರುವ ಮಕ್ಕಳ ಸಂಕೆ ಹೆಚ್ಚಲಿದೆ.
*industrialization ಮತ್ತು outsourcing services ಮೇಲೆ ಹೆಚ್ಚಿಗೆ ಹಣ ಸರಕಾರ ಹೂಡುತ್ತಿದೆ. ರೈತಕಿ(ಬೇಸಾಯ) ಮೇಲೆ national budget ನ 2.2% ಅಸ್ಟೇ ಹೂಡಲಾಗುತ್ತಿದೆ.
*ರೈತರು ಕೂಳು ಕಾಳುಗಳನ್ನು ಹೆಚ್ಚು ಬೆಳೆಯಬೇಕಿದೆ.
*ಕೂಳು ಕಡಿಮೆ ಬಿದ್ದಾಗ ಹೊರಗಿನಿಂದ ತರಿಸಲಾಗುತ್ತದೆ, ಅದರ ಬದಲು ಒಳ್ಳೆ ಬೆಂಬಲ ಬೆಲೆ ಕೊಟ್ಟು ಕೂಳು ದಿನಿಸು ಬೆಳೆಯಲು ರೈತರನ್ನು ಸರಕಾರ ಹುರುದುಂಬಿಸಬೇಕು.
*ರೈತರಿಂದ ಹಿಡಿದು ಎಲ್ಲರೂ ಇಂಡಸ್ಟ್ರಿಯಲೈಜೇಶನ್‍ಗೇ ಹೆಚ್ಚಿನ ಒತ್ತು ಕೊಡುತ್ತ ಹೊಂಟಿದ್ದಾರೆ. ಇದು ಸರಿ ಅಲ್ಲ. ರೈತರಲ್ಲೂ ಕೂಳು ದಿನಿಸು ಹೆಚ್ಚಿನ ಲಾಬ ತರದೆಂಬ ಅನಿಸಿಕೆ ಇದೆ, ಅದಕ್ಕೆ ಕಬ್ಬು, ಅಡಕೆ, ಮುಂತಾದ ವಾಣಿಜ್ಯ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯುತ್ತಿದ್ದಾರೆ.
*ಒಟ್ಟಿನಲ್ಲಿ ಇಂಡಿಯನ್ಸ್ ಅಗ್ರಿಕಲ್ಚರ್‍ಗೆ ಅದರಲ್ಲೂ ಕೂಳು ದಿನಿಸು ಬೆಳೆಯುವಂತೆ ಹೆಚ್ಚು ಒತ್ತು ಕೊಡಬೇಕಿದೆ. ಅದೊಂದೇ ಇದಕ್ಕೇ ಮದ್ದು.