ಹಳೆ ಗೆಳೆಯ

ಹಳೆ ಗೆಳೆಯ

" ಇವನು ಇನ್ನು ಯಾಕೆ ಬಂದಿಲ್ಲ?". ಮುಂಜಾನೆ ಬರುತ್ತೇನೆನ್ದು ಹೇಳಿದವನು ಮದಾಹ್ನ ಒಂದಾದರು ಬಂದೇ ಇರಲಿಲ್ಲ.  ನಿನ್ನೆ ನಾನೆ ಕರೆ ಮಾಡಿ, ಬೇಗ ಬರಲಿ ಅಂತ ದುಡ್ಡು ಕೂಡ ಕೊಟ್ಟಿದ್ದೆ . ಆದರು ಅವನು ಬಂದಿರಲಿಲ್ಲ.

ಮೊದಲಾದರೆ ನಾನೆಂದರೆ ಏನು ಅಕ್ಕರೆ ಅವನಿಗೆ. ಕರೆದಾಗೆಲ್ಲ ಒಡೋಡಿ ಬರುತಿದ್ದ. ಆದರೆ ಈಗ ಯಾವಗ ಕೇಳಿದರು ಬುಸ್ಯಿ. ಅದರಲ್ಲಿ ಅವನದೇನು ತಪ್ಪಿಲ್ಲ ಬಿಡಿ. ಮೊದಲಾದರೊ ನಾನಷ್ಟೇ ಪರಿಚಯ , ಆದರೆ  ಈಗ ಸಾವಿರಾರು ಒಡನಾಡಿಗಳು ಅವನಿಗೆ.

5-6 ವರುಷಗಳ ಹಿಂದಿನ ಮಾತಿದು. ಅವನಿನ್ನು ನಗರಕ್ಕೆ ಹೊಸಬ. ಅವನಿಗೆ ಪುಸ್ತಕದ ಹುಚ್ಚು. ಆ ಹುಚ್ಚೆ ನನ್ನ ಅವನ ಕಡೆ ಸೆಳೆದಿದ್ದು. ಪ್ರತಿಯೊಂದು ಹೊಸ ಪುಸ್ತಕ ಬಂದಾಗ ಮರೆಯದೆ ನನಗೆ ಕಳಿಸಿ ಕೊಡುತಿದ್ದ.  ಆ ಒಂದು ದಿನ ನನ್ನ ಗುರುಗಳ ಜೀವನ ಚರಿತ್ರೆ ಬರುತ್ತಿದೆ ಅನ್ನುವ ಸುದ್ದಿ ಬಂದಿತ್ತು. ಒಂದು ವಾರದೆ ಹಿಂದೆಯೆ ಕರೆ ಮಾಡಿ ಪುಸ್ತಕ ಕಾದಿರಿಸೆಂದು ಕಾಡಿಬಿಟ್ಟಿದ್ದೆ. ಅಷ್ಟೆಲ್ಲಾ ಕಾಡಿದರು ಸ್ವಲ್ಪವು ಮುನಿಯದೆ ಬಿಳೀ ತೊದಲಿನ ಹೋತ್ತಿಗೆಯನ್ನು ಸ್ವಲ್ಪವು ಮುಕ್ಕಾಗದ ಹಾಗೆ ತಲುಪಿಸಿ ಕೊಟ್ಟಿದ್ದ. ಆ ಪುಸ್ತಕವಿಂದು ನನ್ನ ಇಣುಕಿ ನೊಡಿ ನಗುತಿದೆ.

ಅವನು ತುಂಬ ಬದಲಾಗಿದ್ದಾನೆ. ಮೊದಲಿನ ಪುಸ್ತಕಗಳ ಆಕರ್ಷಣೆ ಇಂದು ಉಳಿದಿಲ್ಲ. ಇವಗೆನಿದ್ದರು ಫೋನುಗಳ ಹುಚ್ಚು ಅವನಿಗೆ. ನೂರೋಂದು ಫೊನುಗಳನ್ನು ಹೊತ್ತುಕೊಂದು ತಿರುಗುತಿರುತ್ತಾನೆ.  ಇಷ್ಷು ಸಾಲಲಿಲ್ಲ ಅಂತ ಮೊನ್ನೆ ಬಟ್ಟೆ ವ್ಯಾಪಾರ ಮಾಡುತ್ತಿನಿ ಅನ್ನುತಿದ್ದ. ಈ ಎಲ್ಲಾ ಜಂಜಾಟದಲ್ಲಿ ನನ್ನಂತ ಪುಸ್ತಕ ಹುಳುವಿನ ನೆನಪೆಲ್ಲಿ ಅವನಿಗೆ.

ಕಾಲಿಂಗ್ ಬೆಲ್ ಶಬ್ದ. ಅವನು ಬಂದ ಅನ್ಸುತ್ತೆ. ನನ್ನ ಮಚ್ಚಿನ "ಯಾನ" ವನ್ನು ಹೊತ್ತು ತಂದಿರುತ್ತಾನೆ. ನೀನು ತಡವಾದರು ಬಂದೆ ಬರುವೆಯೆಂಬ  ನಂಬಿಕೆ ನನಗೆ "flipkart". ಯಾಕೆಂದರೆ ನನಗೆ  ನೀನಿನ್ನು ಪುಸ್ತಕ ಪ್ರೇಮಿ ಹಳೆ ಗೆಳೆಯ.

                                                                       - ಅನಾಮಿಕ "flipkart" ನ  ಪುಸ್ತಕ ಗ್ರಾಹಕ      

 

Comments