ಪ್ರಾದೇಶಿಕ ಭಾಷೆಯಲ್ಲಿ ಯಾಕೆ ಶಿಕ್ಷಣ ಬೇಕು? ಓದಿ ಒಂದು ನಿದರ್ಶನ

ಪ್ರಾದೇಶಿಕ ಭಾಷೆಯಲ್ಲಿ ಯಾಕೆ ಶಿಕ್ಷಣ ಬೇಕು? ಓದಿ ಒಂದು ನಿದರ್ಶನ

ಪ್ರಾದೇಶಿಕ ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಏಕೆ ಬೇಕು..? ಓದಿ ಒಂದು ನಿದರ್ಶನ....

ಉತ್ತರ ಭಾರತದ ಶ್ರೀಮಂತ ವ್ಯಾಪಾರಿಯೊಬ್ಬರು ಕರ್ನಾಟಕದಿಂದ ಒಳ್ಳೆಯ ಜಾತಿಯ ಕುದುರೆಯೊಂದನ್ನು ಹಣಕೊಟ್ಟು ತಮ್ಮೂರಿಗೆ ಕೊಂಡು ಹೋದರು.ಕುದುರೆ ಅವರ ಊರಿಗೆ ಹೋದ ನಂತರ ಹುಚ್ಚುಹುಚ್ಚಾಗಿ ವರ್ತಿಸಲು ಆರಂಭಿಸಿತು.ಅದರ ಹೊಸ ಯಜಮಾನನಿಗೆ ಅದನ್ನು ನಿಯಂತ್ರಿಸೋದೆ ಕಷ್ಟದ ಕೆಲಸವಾಯಿತು.ದುಬಾರಿ ಕುದುರೆಯಾಗಿದ್ದರಿಂದ ಅದನ್ನು ಪಳಗಿಸಿದೆ ಹಾಗೇ ಬಿಡುವಾಗಿರಲಿಲ್ಲ.ಅದು ಅವರಿಗೆ ಪ್ರತಿಷ್ಠೆಯ ಪ್ರಶ್ನೆ ಕೂಡ ಆಗಿತ್ತು.ಹೀಗಾಗಿ ಒರ್ವ ಪ್ರಾಣಿಶಾಸ್ತ್ರಜ್ಞರನ್ನು ಕರೆದು ಕುದುರೆಯ ಸಮಸ್ಯೆಯನ್ನು ಅರಿಯಲು ಪ್ರಯತ್ನಿಸಿದ.ಪ್ರಾಣಿಶಾಸ್ತ್ರಜ್ಞರು ಕುದುರೆಯ ಹಿಂದೆ ಎಲ್ಲಿತ್ತು,ಅದರ ಯಜಮಾನ ಯಾವ ಊರಿನವ ಅಂತ ಮೊದಲು ತಿಳಿದುಕೊಂಡರು.ನಂತರ ಕುದುರೆಯ ಹತ್ತಿರ ಹೋಗಿ ಕಿವಿಯಲ್ಲಿ ಏನೋ ಹೇಳುತ್ತಿದ್ದರು. ಬಹಳ ಹೊತ್ತು ಹಾಗೆ ಮಾಡಿದರು.ಆಶ್ಚರ್ಯವೆಂಬಂತೆ ಅ ಕುದುರೆ ತನ್ನ ವರ್ತನೆ ಬದಲಿಸಿ ಶಾಂತವಾಯಿತು.ಪ್ರೀತಿಯಿಂದ ಪ್ರಾಣಿಶಾಸ್ತ್ರಜ್ಞರ ಮುಖ ನೆಕ್ಕಲು ಆರಂಭಿಸಿತು.ಅವರು ಶ್ರೀಮಂತ ವ್ಯಾಪಾರಿಯ ಬಳಿ ಬಂದು,'ಅದು ಕರ್ನಾಟಕದಲ್ಲಿ ಹುಟ್ಟಿಬೆಳೆದ ಕುದುರೆಯಾಗಿರುವದರಿಂದ ಅದಕ್ಕೆ ನಿಮ್ಮ ಹಿಂದಿ ಭಾಷೆ ಗೊತ್ತಿಲ್ಲ.ಹೊಸ ಭಾಷೆಗೆ ಹೊಂದಿಕೊಳ್ಳಲು ಅದಕ್ಕೆ ಕಷ್ಟವಾಗುತ್ತಿದೆ.ನಾನು ಕನ್ನಡಿಗ.ಹೀಗಾಗಿ ಕನ್ನಡದಲ್ಲಿ ಪ್ರೀತಿಯಿಂದ ಮಾತಾನಾಡಿಸಿದ್ದೇನೆ.ನೀವು ಅಲ್ಪ ಸ್ವಲ್ಪ ಕನ್ನಡ ಮಾತನಾಡಲು ಕಲಿಯಿರಿ ಎಂದರು.ಇಲ್ಲವಾದರೆ ಕನ್ನಡ ಗೊತ್ತಿರುವವನನ್ನು ಕುದುರೆಯ ಕೆಲಸಕ್ಕೆ ಇಟ್ಟುಕೊಳ್ಳಿ' ಎಂದರು.

ಪ್ರದೇಶ ಭಾಷೆ ಒಂದು ಪ್ರಾಣಿಯ ಮೇಲೆ ಪ್ರಭಾವ ಬೀರುತ್ತದೆ ಎಂದರೆ ಅದು ಮಕ್ಕಳ ಮೇಲೆ ಪ್ರಭಾವ ಬೀರದೆ ಇರುತ್ತದೆಯೇ..? ಹೀಗಾಗಿ ಮಕ್ಕಳಿಗೆ ಪ್ರಾದೇಶಿಕ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂಬುದು ಸರಿಯಲ್ಲವೇ..?ಈ ನಿಟ್ಟಿನಲ್ಲಿ ದೇವನೂರು ಮಹದೇವನವರು ಮಾತೃಭಾಷೆ ಶಿಕ್ಷಣ ಮಾಧ್ಯಮ ಆಗುವವರೆಗು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗುವುದಿಲ್ಲ ಎಂದಿರೋದರಲ್ಲಿ ಅರ್ಥವಿದೆ ಎನಿಸುತ್ತದೆ.

-@ಯೆಸ್ಕೆ

Comments