ಸಂಪದ ಆಪ್ ೨೦೧೫

ಸಂಪದ ಆಪ್ ೨೦೧೫

ಬರಹ

ಸಂಪದಕ್ಕೆ ಈಗಲೂ ಪ್ರತಿನಿತ್ಯ ಸಾವಿರಾರು ಓದುಗರು ಬರುತ್ತಿರುವುದು ನಮಗೆ ಇದನ್ನು ನಡೆಸಿಕೊಂಡು ಹೋಗುವಲ್ಲಿ ಪ್ರೋತ್ಸಾಹ ನೀಡಿದೆ. ಆದರೆ ಇತ್ತೀಚಿನ ಬಳಕೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ತಿಳಿದುಬಂದ ಸಂಗತಿಯೆಂದರೆ ಹೆಚ್ಚಿನ ಓದುಗರು ಮೊಬೈಲ್ ಮೂಲಕ ಸಂಪದವನ್ನು ಓದುತ್ತಿರುವುದು. ಸುಮಾರು ಹತ್ತು ವರ್ಷಗಳ ಸಾವಿರಾರು ಪುಟಗಳಿರುವ ಇಷ್ಟು ದೊಡ್ಡ ಪೋರ್ಟಲ್ಲೊಂದರಲ್ಲಿ ಮೊಬೈಲಿಗೆ ಹೊಂದಿಸುವಂತೆ ಬೇಕಾದ ಬದಲಾವಣೆಗಳನ್ನು ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಸಂಪದವನ್ನು ಮೊಬೈಲಿನಲ್ಲಿ ಓದಲು ಪ್ರಯತ್ನಿಸುತ್ತಿರುವವರಿಗೆಲ್ಲ ಅನುಕೂಲವಾಗುವಂತೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೆವು. ಅದರಲ್ಲಿ ಮೊದಲ ಕೆಲವು ಹೆಜ್ಜೆಗಳು ಈಗಾಗಲೇ ಪೂರ್ಣಗೊಂಡಿದ್ದು ಸಂಪದ.net ಮೊಬೈಲ್ ಬ್ರೌಸರಿನಲ್ಲಿ ಸುಲಭ ರೀತಿಯಲ್ಲಿ ಓದಲು ಲಭ್ಯವಾಗಿದೆ. ಇನ್ನು ಮುಂದಿನ ಹೆಜ್ಜೆ - ನವೀಕರಿಸಿದ ಸಂಪದ ಆಪ್. ಇದು ಈಗ ತಯಾರಾಗಿ ನಿಮ್ಮ ಮುಂದಿಡುತ್ತಿರುವ ಖುಶಿ ನಮ್ಮದು.

ಹೊಸ ಆಪ್ ಸ್ವತಃ ಗೂಗಲ್ ರೂಪಿಸಿರುವ ಹಲವು ಮಾನ್ಯತೆಗಳಿಗೆ ಅನುಸಾರವಾಗಿ ತಯಾರಾಗಿದೆ. ಇದನ್ನು ಬಳಸುವಾಗ ನಿಮಗೆ ಅದರ ಅನುಭವ ಆಗಬಹುದು.

ಆಪ್ ತಯಾರು ಮಾಡುವುದರ ಹಿಂದೆ ನಾನೂ ಭಾಗಿಯಾಗಿರುವ ಸಾರಂಗ ಇನ್ಫೋಟೆಕ್ ತಂಡದ ಶ್ರಮವಿದೆ. ಇದನ್ನು ನೀವೆಲ್ಲರೂ ಸ್ವಾಗತಿಸಿ, ಬಳಸಿ, ಉತ್ತೇಜನ ನೀಡುತ್ತ ಉಳಿದವರೊಂದಿಗೂ ಹಂಚಿಕೊಂಡರೆ ನಮ್ಮೆಲ್ಲರ ಕನ್ನಡ ಉತ್ಸಾಹಕ್ಕೆ ಪ್ರೋತ್ಸಾಹ ಸಿಗುವುದು. ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚಿಸುವಲ್ಲಿ ಕೂಡ ಸಹಾಯವಾಗಬಲ್ಲುದು.