ಒಂದು ಕಾರಣ ಎಂದರೆ, ವಚನಗಳನ್ನು ದಾಸಸಾಹಿತ್ಯದಷ್ಟು ಸುಲಭವಾಗಿ ಸಂಗೀತಕ್ಕೆ ಒಳಪಡಿಸುವುದು ಕಷ್ಟ; ಹೆಚ್ಚಿನ ದಾಸರ ರಚನೆಗಗಳು ಪ್ರಾಸ-ಛಂದಸ್ಸುಗಳನ್ನು ಹೊಂದಿರುತ್ತವಾದ್ದರಿಂದ, ಹಾಡಿಸ್ನಲ್ಲೇ ಒಂದುರೀತಿ ನಿಯತಲಯ ಉಂಟಾಗುತ್ತೆ. ಅದನ್ನು, ಯಾವುದೇ ಮಟ್ಟಿಗೆ ( ಮಟ್ಟು=ಹಾಡುವ ಧಾಟಿ) ಹೊಂದಿಸಲು ಬಹಳ ಕಷ್ಟಪಡಬೇಕಿಲ್ಲ.
ಆದರೆ, ವಚನಗಳಲ್ಲಿ ಈ ನಿಯತ ಲಯ ಕಡಿಮೆ. ಹಾಗಂತ ಇಲ್ಲವೇ ಇಲ್ಲವೆಂದಲ್ಲ. ಆದರೆ, ಆ ರೀತಿಯ ರಚನೆಗಳಿಗೆ ಸಂಗೀತ ಅಳವಡಿಸುವುದಕ್ಕೆ ಸ್ವಲ್ಪ ಹೆಚ್ಚಿನ ಸಂಗೀತದ ತಿಳುವಳಿಕೆ ಬೇಕು. ಇದೇ ಕಾರಣಕ್ಕೆ, ಮನೆಮನೆಯಲ್ಲಿ ದಾಸರ ರಚನೆಗಳು ಹಾಡಿನ ರೂಪದಲ್ಲಿಯೇ ನಿಂತ ರೀತಿಯಲ್ಲಿ, ವಚನಗಳು ಹಾಡಾಗಿ ಉಳಿಯಲಿಲ್ಲವೇನೋ ಎನ್ನಿಸುತ್ತೆ.
ಉ: ಉಳ್ಳವರು ಶಿವಾಲಯವ ಮಾಡುವರು

-ಹಂಸಾನಂದಿ