ಟಿ:ನಂಬಿಕೆಗಳು
- ಟಿ:ನಂಬಿಕೆಗಳು By: Sunil Jayaprakash (Mar 15 2006 - 2:32pm)
- ಟಿ: ನಾವುಗಳೇ ಹೀಗೆ! By: mahesh_b_s (Mar 15 2006 - 11:51am)
- ನೀವು ಸರಿ By: tvsrinivas41 (Mar 15 2006 - 11:58am)
- ಟಿ: ನೀವು ಸರಿ By: Sunil Jayaprakash (Mar 15 2006 - 2:12pm)
- ಉ: ಟಿ: ನೀವು ಸರಿ By: mahesh_b_s (Mar 15 2006 - 2:53pm)
- ಟಿ: ನೀವು ಸರಿ By: Sunil Jayaprakash (Mar 15 2006 - 2:12pm)
- ನೀವು ಸರಿ By: tvsrinivas41 (Mar 15 2006 - 11:58am)
- ನೀವಿದಕ್ಕೆ ಅಪವಾದವಾ? By: tvsrinivas41 (Mar 15 2006 - 11:49am)

RSS:
ಟಿ:ನಂಬಿಕೆಗಳು
ತಿರುಳಿಲ್ಲದ ಘಟನೆಗಳನು
ಬಹು ಸೃಷ್ಟಿಮಾಡಿ
ಹುರುಳಿಲ್ಲದೆಯೆ ನೆನೆದು
ದುಃಖಿಸುವ ನಾವುಗಳೇ ಹೀಗೆ
ಹಿಂದಿನದ ತಿರುಚುತ್ತೇವೆ
ಹೊಸದ ಸೃಷ್ಟಿಸುವುದಿಲ್ಲ
ಸುಮಾರು ವಾರಗಳ ಹಿಂದೆ ಚೆನ್ನೈ ವಿಮಾನ ನಿಲ್ದಾಣದಲ್ಲಿ, ಎರಡು ಘಂಟೆ ಕಾಯಬೇಕಾಗಿ ಬಂದು, ಮಾಡಲು ಏನೂ ತೋಚದೆ ಕುಳಿತಿದ್ದಾಗ, ಜೊತೆಗೆ ತೆಗೆದುಕೊಂಡು ಹೋಗಿದ್ದ ಮಂಕುತಿಮ್ಮನ ಕಗ್ಗ ಓದುತ್ತಾ ಕುಳಿತೆ. ಆಗ ಓದಿದ ಒಂದು ಕಗ್ಗ ಇಲ್ಲಿ ಪ್ರಸ್ತತವೆನಿಸುತ್ತಿದೆ.
ಕರಾರುವಕ್ಕಾದ ಪದ್ಯ ನೆನಪಿಲ್ಲ. ಅರ್ಥವಷ್ಟೇ ನೆನಪಿನಲ್ಲಿದೆ.
ನಮಗೆ ಈ ಕಾಲದಲ್ಲಿ ಅಸಹನೆ, ದುಃಖ ಮುಂತಾದಲು ಯಾಕೆ ಜಾಸ್ತಿಯಾಗಿದೆಯೆಂದರೆ...ನಮ್ಮಲ್ಲಿ ನಂಬಿಕೆಗಳಿಲ್ಲ. ಹಿಂದಿನ ನಂಬಿಕೆಗಳಲ್ಲಿ ನಮಗೆ ವಿಶ್ವಾಸವಿಲ್ಲ. ಹಿಂದಿನವು ಹೋದರೆ ಹೋಗಲಿ ಹೊಸತಾದ ನಂಬಿಕೆಗಳೇನಾದರು ಇವೆಯೇ ಎಂದು ಪರೀಕ್ಷಿಸಿದರೆ ಅದೂ ಇಲ್ಲ. ಹೀಗಾಗಿ ನಂಬಿಕೆಗಳಿಲ್ಲಿದೆ ಬದುಕುತ್ತಿರುವ ನಮ್ಮಲ್ಲಿ ದುಗುಡ ದುಮ್ಮಾನಗಳು ಹೆಚ್ಚಾಗಿವೆ.
ಇಲ್ಲಿ ನೀವು ಹೇಳಿದ ಹಿಂದಿನದ ತಿರುಚುತ್ತೇವೆ - ಬಹಳ ಸಮಯೋಚಿತವಾಗಿದೆ. ಈಗ ನಮಗೆ ಸತ್ಯವೇನೆಂಬುದೇ ತಿಳಿಯುವುದಿಲ್ಲ. ಇತಿಹಾಸವನ್ನು ಎಷ್ಟು ತಿರುಚಿ ಹಾಳು ಮಾಡಬಹುದೋ ಅಷ್ಟು ಹಾಳು ಮಾಡಿದ್ದೇವೆ. ನಮ್ಮ ಇತಿಹಾಸದ ಸಂಶೋಧನೆಗಳ ಬಗ್ಗೆಯೇ ನಮಗೆ ಹೆಮ್ಮೆಯಿಲ್ಲ. ಅದು ಪುಲಿಕೇಶಿ ಇರಬಹುದು ಅಥವಾ ಚಿದಾನಂದಮೂರ್ತಿಯವರು ಬೆಳಕು ಚೆಲ್ಲಿದ ಸಂಶೋಧನೆಗಳಿರಬಹುದು. ನಮ್ಮವರ ಬಗ್ಗೆ ಹೆಮ್ಮೆ ಪಡದೆ ಬೇರೆಯವರನ್ನು ಹೊಗಳುವುದರಲ್ಲೇ ಕಾಲ ಕಳೆಯುತ್ತೇವೆ.
ಇದನ್ನು ನಿಲ್ಲಿಸಿ ನಮ್ಮವರ ಬಗ್ಗೆ ಹೆಮ್ಮಪಡೋಣ. ನಾವೂ ಕೂಡ ಏನಾದರು ಸಾಧಿಸೋಣ.
ನೋಡಿ ಸಂಪದವೇ ಇದಕ್ಕೆ ಒಳ್ಳೆಯ ಉದಾಹರಣೆಯಾಗಿದೆ.