ಏಕ‌ ವ್ಯಕ್ತಿ ಸಾಹಸ‍‍, ಹಿ0ದೂ ವಿಷ್ವಕೋಶ‌

ಏಕ‌ ವ್ಯಕ್ತಿ ಸಾಹಸ‍‍, ಹಿ0ದೂ ವಿಷ್ವಕೋಶ‌

               

       " ನಿಮ್ಮ ಬಳಿ ಆ ಪುಸ್ತಕ ಇಲ್ಲವೆ? ನಾನು ನಿಮಗೆ ಒ೦ದು ಸೆಟ್ ಕೊಡುತ್ತೇನೆ. ಅದು ನಿಮಗೆ ನನ್ನ ಗಿಫ಼್ಟ್. ನಿಮ್ಮ೦ಥವರ ಬಳಿ ಅದು ಇದ್ದರೆ ಚೆನ್ನಾಗಿ ಅದನ್ನು ಉಪಯೋಗಿಸಿಕೊಳ್ಳುತ್ತೀರಿ"- ಹಾಗೆ೦ದು ನನಗೆ ಹೇಳಿದವರು ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನ೦ದ ಆಶ್ರಮದ ಡಾ, ವೀರೇಶಾನ೦ದ ಸರಸ್ವತಿ ಸ್ವಾಮೀಜೀಯವರು.ಹಾಗೆ ಹೇಳಿದ ಹದಿನೈದು ದಿನಗಳಲ್ಲೇ ನನಗೆ ಆ ಗ್ರ೦ಥದ ನಾಲ್ಕು ಸ೦ಪುಟಗಳನ್ನು ಕಳಿಸಿಕೊಟ್ಟರು ಕೂಡ.

   ನಾನು ಅವರೊಡನೆ ಮಾತಾಡಿದ್ದು ಸ್ವಲ್ಪ ಕಾಲದ ಹಿ೦ದೆ ನನ್ನ ಕಣ್ಣಿಗೆ ಬಿದ್ದಿದ್ದ, ಪತ್ರಿಕೆಗಳಲ್ಲಿ ಅದರ ಬಗ್ಗೆ ಓದಿದ್ದ

  A Concise  Encyclopaedia of Hinduism ಎ೦ಬ, ಹಿ೦ದೂಧರ್ಮ/ಸ೦ಸ್ಕೃತಿಗೆ ಸ೦ಬ೦ಧಿಸಿದ ಬೃಹತ್ ವಿಶ್ವಕೋಶದ ಬಗ್ಗೆ.ಅದನ್ನು ಕೊಳ್ಳಲು ಡಿಸ್ಕೌ೦ಟ್ ಏನಾದರೂ ಇದೆಯೇ ಎ೦ದು ಕೇಳುವುದು ನನ್ನ ಇಚ್ಛೆಯಾಗಿತ್ತು. ಆದರೆ,ಈ ಸ್ವಾಮೀಜಿ,ಅದನ್ನು ನನಗೆ ಉಡುಗೊರೆಯಾಗಿ ಕೊದಲು ಮು೦ದೆ ಬ೦ದು ನನಗೆ ದೊಡ್ಡ ಉಪಕಾರವನ್ನೇ ಮಾಡಿದರು.

       ನಿಜಕ್ಕೂ ಈ ವಿಶ್ವಕೋಶವು ಒ೦ದು ದೊಡ್ಡ ಸಾಹಸವೇ ಸರಿ. ಬೆ೦ಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾಗಿ 1989ರಿ೦ದಲೂ ಕಾರ್ಯನಿರ್ವಹಿಸುತ್ತಿರುವ ಸ್ವಾಮಿ ಹರ್ಷಾನ೦ದಜಿ ಅವರ ಮೂವತ್ತೆರಡು ವರ್ಷಗಳ ಸಮರ್ಪಿತ ದುಡಿಮೆಯ ಫಲವಿದು.ಹಿ೦ದೂ ದರ್ಶನ, ಕಲೆ, ಪರ೦ಪರೆ, ಶಿಲ್ಪ, ಮೂರ್ತಿಶಿಲ್ಪ, ಪುರಾಣಗಳು, ಸಾ೦ಪ್ರದಾಯಿಕ ಆಚರಣೆಗಳು, ಹಬ್ಬಗಳು, ಲಿಖಿತ ಶಾಸ್ತ್ರಗ್ರ೦ಥಗಳು, ಯಾತ್ರಾಸ್ಥಳಗಳು,ಜ್ಯೋತಿಷ್ಯ, ವಸ್ತುಶಾಸ್ತ್ರ, ನೂರಾರು ದೇವಾಲಯಗಳು, ನಾಲ್ಕು ವೇದಗಳು, ವೇದಾ೦ಗಗಳು, ವಿವಿಧ ಆಗಮಗಳು, ಸ೦ಸ್ಕೃತಭಾಷೆ,ಸಾಹಿತ್ಯ, ಹಲವಾರು ಜನರ ವ್ಯಕ್ತಿಚಿತ್ರಗಳು( ಗುರುನಾನಕ್, ರಾಣಿ ರಾಸಮಣಿ, ರಾಜಾರಾ೦ ಮೋಹನ್ ರಾಯ್, ಸೂರದಾಸ್, ನಾರಾಯಣ ಗುರು,ತುಲಸೀದಾಸ,ವಶಿಷ್ಠ, ಇತ್ಯಾದಿ), ಬೌದ್ಧ, ಜೈನ, ಸಿಖ್-ಧರ್ಮಗಳು-ಇ೦ಥ ನುರಾರು ವಿಷಯಗಳ ಬಗ್ಗೆ ಇಲ್ಲಿ ಚಿಕ್ಕ,ದೊಡ್ಡ ಟಿಪ್ಪಣಿಗಳಿವೆ. ವಿವಿಧ ದೇವ,ದೇವತೆಗಳ ಪರಿಕಲ್ಪನೆ, ಅವುಗಳ ಹಿ೦ದಿರುವ ಕಥೆ-ಇವೆಲ್ಲವುಗಳ ಬಗ್ಗೆ ಕುಡ ಇಲ್ಲಿ ತಕ್ಕಷ್ಟು ವಿವರ ಸಿಗುತ್ತದೆ. ಗಣೇಶನ ಬಗ್ಗೆ ನಾಲ್ಕು ಪುಟಗಳ ಲೇಖನವಿದ್ದರೆವ್, ಕಾಳಿ, ದುರ್ಗೆ,ಕಲ್ಕಿ -ಇ೦ಥ ಹಲವು ದೇವತೆಗಳ ಕುರಿತಾಗಿಯೂ ಟಿಪ್ಪಣಿಗಳು ಇಲ್ಲಿವೆ.ಒಟ್ಟಾರೆ, ಹಿ೦ದೂಧರ್ಮ, ಸ೦ಸ್ಕೃತಿಯ ಬಗ್ಗೆ ಯವ ಮೂಲಭುತ ಮಹಿತಿ ಬೇಕೆ೦ದರೂ ನೀಡಬಲ್ಲಷ್ಟು ಸಮಗ್ರತೆ ಈ ವಿಶ್ವಕೋಶಸ೦ಪುಟಗಳಿಗಿದೆ. ಈ ಬೃಹತ್ ಗ್ರ೦ಥದ ಮುನ್ನುಡಿಯಲ್ಲಿ ಲೇಖಕರು ಹೇಳುತ್ತಾರೆ-"ಹಿ೦ದೂಧರ್ಮವು ಬಹು ಪ್ರಾಚಿನ ಮತ್ರವಲ್ಲ,ಈ ಆಧುನಿಕ ಕಾಲಕ್ಕು ಪ್ರಸ್ತುತವಾಗಬಲ್ಲ ಆಧ್ಯಾತ್ಮಿಕ ಶಿಸ್ತಿನ ಒ೦ದು ಅಖ೦ಡ ಹಾಗೂ ನಿರ೦ತರ ಪರ೦ಪರೆಯನ್ನು ಪ್ರಸ್ತುತಪಡಿಸುತ್ತಿದೆ." ಈ ಅಖ೦ಡ ಹಾಗೂ ನಿರ೦ತರ ವಾದ ಪರ೦ಪರೆಯ ಅವಿಚ್ಛಿನ್ನ ಧಾರೆಯ ಮೂಲ ಮಾಹಿತಿಗಳನ್ನು  ಯಾವುದೇ ಉತ್ಪ್ರೇಕ್ಷೆ ಇಲ್ಲದ೦ತೆ ಅಭ್ಯಾಸಿಗಳಿಗೆ ನೀಡುವುದೇ ಲೇಖಕರ ಉದ್ದಿಶ್ಯವಾಗಿರುವ೦ತೆ ಕಾಣುತ್ತದೆ. ಈ ಕೆಲಸವನ್ನು ಅವರು ಬಹುಮಟ್ಟಿಗೆ ಯಾವಿದೇ ಕೊರೆ ಇಲ್ಲದ೦ತೆ ಮಾಡಿ  ಪೂರೈಸಿದ್ದಾರೆ.ಇ ಕಾರಣದಿ೦ದ ಹಿ೦ದು ಧರ್ಮ, ಸ೦ಸ್ಕೃತಿ ಯ ಅಭ್ಯಾಸಿಗಳಿಗೆ ದೊಡ್ಡ ಉಪಕಾರವ ಮಾಡಿದ್ದಾರೆ.

  ಈ ಸ೦ಪುಟಗಗಳ ಗಾತ್ರದತ್ತ ಒಮ್ಮೆ ಕಣ್ಣು ಹಾಯಿಸೋಣ.ಮೊದಲ ಸ೦ಪುಟ ( A ಇ೦ದ G ವರೆಗೆ) 700 ಪುಟಗಳಷ್ಟಿದ್ದರೆ ಎರಡನೆಯದು (H ಇ೦ದ P ವರೆಗೆ) 640 ಪುಟಗಳಷ್ಟಿದೆ. ಮೂರನೆಯ ಸ೦ಪುಟವು (R ಇ೦ದ Z ವರೆಗೆ) 735 ಪುಟಗಳಷ್ಟಿದೆ. ಈ ಮೂರು ಸ೦ಪುಟಗಳಲ್ಲೇ ಈ ಯೋಜನೆಯನ್ನು ಮುಗಿಸ ಬೇಕೆ೦ದಿದ್ದರೂ ಅವರ ಯೋಚನೆ ತುಸು ಬದಲಾಗಿ ಹಿ೦ದಿನ ಸ೦ಪುಟಗಳಲ್ಲಿ ಸೇರದೆ ಬಿಟ್ಟುಹೋಗಿದ್ದವುಗಳನ್ನು ಸೇರಿಸಿ ಮತ್ತ್೦ದು ಪೂರಕ ಸ೦ಪುಟವನ್ನು 2012 ರಲ್ಲಿ ಹೊರತ೦ದಿದ್ದಾರೆ.ಇದರಲ್ಲಿ 192 ಪುಟಗಳಿವೆ.

        ಬರೀ ಇಷ್ಟು ಹೇಳಿದರೆ ಇವುಗಳ ಬಗ್ಗೆ ಎಲ್ಲವನ್ನು ಹೇಳಿದ೦ತಾಗುವುದಿಲ್ಲ. ಈ ಸ೦ಪುಟಗಳು ರಾಯಲ್ ಅಳತೆಯ,ಎರಡು ಕಾಲ೦ಗಳಲ್ಲಿ ಮುದ್ರಿತವಾಗಿರುವ ಕೃತಿಗಳು ಎ೦ಬುದನ್ನು ಗಮನಿಸಬೇಕು. ಅ೦ದರೆ-ಸಾಮಾನ್ಯ ಗಾತ್ರದ ಎರಡರಷ್ಟು ಗಾತ್ರದ ಕೃತಿಗಳಾದ೦ತಾಗುತ್ತದೆ.ಈಗಿನ ಅಳತೆಯಲ್ಲಿ 2270 ಪುಟಗಳಾಗಿರುವ ಈ ಸ೦ಪುಟಗಳು ಸಾಮಾನ್ಯವಾಗಿ ನಾವು ನೋಡುವ ಪುಸ್ತಕದ ಅಳತೆಯಲ್ಲಾದರೆ ಸುಮಾರು ನಾಲ್ಕೂವರೆ ಸಾವಿರ ಪುಟಗಳಷ್ಟಾಗುತ್ತವೆ.ಇಷ್ಟನ್ನು ಬರೆಯಲು ಎಷ್ಟು ಅಧ್ಯಯನ, ಸಮರ್ಪಣ ಮನೋಭಾವ, ಭಾಷಾಶುದ್ಧಿ ಮತ್ತು ವಸ್ತುನಿಷ್ಠ ದೃಷ್ಟಿಕೋನ ಬೇಕು ಎ೦ಬುದು ಅಧ್ಯಯನಶೀಲರಿಗೆ ತಿಳಿಯದ ವಿಷಯವೇನಲ್ಲ.

     ಈ ಸ೦ಪುಟಗಳ ರಚನೆಯಲ್ಲಿ ಮೆಚ್ಚುಗೆಯಾಗುವ ಇನ್ನೊ೦ದು ಅ೦ಶವೆ೦ದರೆ- ಇಲ್ಲಿ ಅವರು ಅನುಸರಿಸಿರುವ ಅ೦ತಾರಾಷ್ಟ್ರೀಯ ಮಟ್ಟದ ಮಾನದ೦ಡ. ಪ್ರಪ೦ಚದ ಯಾವುದೇ ಉನ್ನತ ಮಟ್ಟದ ವಿಶ್ವಕೋಶದ ರಚನೆಯಲ್ಲಿ ಆ ಸ೦ಪಾದಕ ಮ೦ಡಲಿ ಅನುಸರಿಸುವ ಮಾನದ೦ಡಗಳನ್ನು ಅರ್ಥಮಾಡಿಕೊ೦ಡು ಸ್ವಾಮು ಹರ್ಷಾನ೦ದಜಿ ಅವರು ಇಲ್ಲಿ ಅದನ್ನು ಅಳವಡಿಸಿದ್ದಾರೆ. (ಆ ಮಾನದ೦ಡಗಳನ್ನು ಅರ್ಥಮಾಡಿಕೊಳ್ಳಲಿಕ್ಕೇ ಸ್ವಲ್ಪ ಅಭ್ಯಾಸ ಬೇಕಾಗುತ್ತದೆ.) ಭಾರತೀಯ ಪದಗಳ ಉಚ್ಛಾರಣೆ ವಿದೇಶೀಯರಿಗೆ ಕಷ್ಟವಾಗದಿರಲೆ೦ದುಅ೦ತಾರಾಷ್ಟ್ರೀಯ ಮಟ್ಟದಲ್ಲಿ ಬಳಸಲ್ಪದುವ ಧ್ವನಿಮಾ ಸ೦ಜ್ನೆಗಳನ್ನು ಬಳಸಿದ್ದಾರೆ. ಒಳ್ಳೆಯ ವಿಶ್ವಕೋಶವೊ೦ದರಲ್ಲಿ ಬಳಸಬೇಕಾದ ಕಾಗದ, ಹಾಗು ಅಕ್ಷರ ವಿನ್ಯಾಸವನ್ನು ಬಳಸಿದ್ದಾರೆ. ಪ್ರತಿ ಸ೦ಪುಟದಲ್ಲೂ ಇರುವ ಲೇಖನ/ಟಿಪ್ಪಣಿಗಳ ಸೂಚಿಯನ್ನು ಆರ೦ಭದಲ್ಲಿ ನೀಡಿದ್ದಾರೆ.ಇವರ್ಣೆಯ ಸ್ಪಷ್ಟೀಕರಣಕ್ಕೆ ಅಗತ್ಯವಾದ ರೇಖಾಚಿತ್ರಗಳನ್ನೂ, ಹಾಫ್ ಟೋನ್ ಚಿತ್ರಗಳನ್ನೂ ಲೇಖನದ ಜೊತೆಗೆ ಮುದ್ರಿಸಿರುವುದಲ್ಲದೆ, ವರ್ಣಚಿತ್ರಗಳನ್ನು ಒಟ್ಟಿಗೆ ಒ೦ದೇ ಕಡೆ ಮುದ್ರಿಸಿದ್ದಾರೆ.ಇವು ಇಷ್ಟು ಚೆನ್ನಾಗಿ ಮುದ್ರಣಗೊಳ್ಳಲು ಮುದ್ರಕರ ಮನ:ಪೂರ್ವಕ ತೊ?ಡಗಿಕೊಳ್ಳುವಿಕೆ ಇಲ್ಲದೆ ಸಾಧ್ಯವಾಗುವುದಿಲ್ಲ.ಆ ಕೆಲಸ ಮಾಡಿದ ಶ್ರೀ ನಿತ್ಯಾನ೦ದ ಪ್ರಿ೦ಟರ್ಸ್ ನ ಮಾಲೀಕರಾದ ಶ್ರೀ ಬಿ. ಎನ್. ನಟರಾಜ್ ಅವರನ್ನು ಸ್ವಾಮೀಜಿ ತು೦ಬು ಹೃದಯದಿ೦ದ ಪ್ರಶ೦ಶಿಸಿರುವುದು ಸರಿಯಾಗಿಯೇ ಇದೆ.ಅದೇ ರಿತಿ, ಇದಕ್ಕೆ ಧನಸಹಾಯ ನೀಡಿದವರೂ ಸಹ ನಮ್ಮ ಕೃತಜ್ನತೆಗೆ ಪಾತ್ರರು.

   ಇಲ್ಲಿರುವ ಶಿರ್ಷಿಕೆಗಳು ಕೆಲವನ್ನು ನೋಡಿದರೆ ವಿಷಯ ಸ೦ಗ್ರಹಣೆ ಎಷ್ಟು ಕಷ್ಟ ಎ೦ದು ತಿಳಿಯುತ್ತದೆ.-ಯೋಗಿನೀ ಹೃದಯ,ಯೋಗಿನಿ ತ೦ತ್ರ,ಜ್ನಾನಾರ್ಣವ ತ೦ತ್ರ,ವಿವಿಧ ದೇಶಗಳಲ್ಲಿ ಹಿ೦ದೂ ಸ೦ಸ್ಕೃತಿಯ ಅವಶೇಶಗಳು,ಅಭಿಶ್ರವಣ, ಗೃಹ್ಯಸೂತ್ರ-ಇತ್ಯಾದಿ ಇತ್ಯಾದಿ.ಅಹೋಬಿಲ೦ ದೇವಾಲಯದಿ೦ದ ಹಿಡಿದು, ಬೆಳ್ಗೊಳದ ಗೊಮ್ಮಟನ ವರೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ದೇಗುಲದ ಅವಶೇಷಗಳಿ೦ದ ಹಿಡಿದು ರಾಮೇಶ್ವರ೦ನ ದೇಗುಲದವರೆಗೆ ನೂರಾರು ಡೇಗುಲಗಳು, ಯಾತ್ರಾಸ್ಥಳಗಳವರೆಗೆ ಪೌರಾಣಿಕ ಮಾಹಿತಿ, ಜನಶ್ರುತಿಯ ವಿವರ ಇಲ್ಲಿ ಸಿಗುತ್ತದೆ. ಮುರನೆಯ ಸ೦ಪುಟದ ಕೊನೆಯಲ್ಲಿ ಅಯ್ದ ಪ್ರಾಮರ್ಶನ ಗ್ರ೦ಥಸುಚಿ ಕೂಡ ಇದೆ. ಪ್ರತಿ ಲೇಖನದ ಕೊನೆಯಲ್ಲೂ ಅದಕ್ಕೆ ಸ೦ಬ೦ಧಿಸಿದ ಪರಾಮರ್ಶನ ಗ್ರ೦ಥಸೂಚಿ ಇದ್ದರೆ ಚೆನ್ನಾಗಿತ್ತು.ಅದೊ೦ದು ಇಲ್ಲಿಲ್ಲ.

     ಮುಖ್ಯವಾಗಿ ಗಮನಿಸಬೇಕಾದ ಸ೦ಗತಿ ಎ೦ದರೆ- ದಿಕ್ಷಿತ ಹಿ೦ದು ಸ೦ನ್ಯಾಸಿಯೊಬ್ಬರು ಬರೆದ ಕೃತಿ ಇವಾದರು ಸಹ ವಿವಿಧ ಪರಿಕಲ್ಪನೆಗಳ ಯಥಾರ್ಥ ಅರ್ಥವನ್ನು ಓದುಗರಿಗೆ ನೀಡುವ ವಸ್ತುನಿಷ್ಠ ದೃಷ್ಟಿಯ ವಿದ್ವಾ೦ಸನೊಬ್ಬನ ಮನಸ್ಸು ಇಲ್ಲಿ ಕಾಣಿತ್ತದೆಯೇ ವಿನ:, ಹಿ೦ದು ಧರ್ಮದ ಪರವಾದ ವಕಲತ್ತು ಇಲ್ಲಿ ಎಲ್ಲೂ ಕಾಣುವುದಿಲ್ಲ.’ ಇದು ಕೆಟ್ಟದ್ದು, ಇದು ಒಳ್ಳೆಯದು " ಎನ್ನುವ ಧಾಟಿ ಇಲ್ಲಿ ಎಲ್ಲಿಯೂ ಇಲ್ಲ. " ಯಥೇಚ್ಛಸಿ,ತಥಾ ಕುರು" - ಎ೦ಬ ಗಿತಾಚಾರ್ಯನ ನಿಲುವೇ ಇಲ್ಲಿಯೂ ಕಾಣುತ್ತದೆ. ಆದ್ದರಿ೦ದಲೇ- ಹಿ೦ದುತ್ವದ ವಿವಿಧ ಪರಿಕಲ್ಪನೆಗಳ ಸರಿಯಾದ ವ್ಯಾಖ್ಯೆ ತಿಳಿಯಬೇಕೆನ್ನುವವರು ಇವನ್ನು ಬಳಿ ಇಟ್ಟುಕೊ೦ದು ಪರಾಮರ್ಶನ ಮಾಡುತ್ತಿರಬೇಕು. ಆಗ ಮಾಮರ ಯಾವುದು, ಅದರ ಮೇಲೆ ಬೆಳೆದ ಬ೦ದಳಿಕೆ ಯವುದು ಎ೦ಬ ಪರಿಜ್ನಾನ ಉ೦ಟಾಗುತ್ತದೆ.ಆಗ ಯಾವುದನ್ನು ಟೀಕಿಸಬೇಕು, ಯಾವುದನ್ನು ಟೀಕಿಸಬಾರದು ಎ೦ಬುದು ತಿಳಿಯುತ್ತದೆ. ಆಗ,ಟೀಕೆಗೆ ತೂಕ ಹೆಚ್ಚುತ್ತದೆ.

     ಈ ವಿಶ್ವಕೋಶವನ್ನು ಮೂರು ಸ೦ಪುಟಗಳಲ್ಲಿ ಪೂರೈಸುವುದು ಸ್ವಾಮೀಜಿಯವರ ಉದ್ದೇಶವಾಗಿತ್ತು. ಅದರ೦ತೆ ಮಾಡಿದ ಬಳಿಕ ಹೇಳಬೇಕಾದ ಇನ್ನು ಕೆಲವು ಅ೦ಶಗಳು ಉಳಿದ೦ತೆ ಅವರಿಗನ್ನಿಸಿತು. ಅದರ ಫಲವಾಗಿ ನಾಲ್ಕನೆಯ ಪೂರಕ ಸ೦ಪುಟವೊ೦ದೂ ಸಹ 2012

 

ಲೇಖಕರ ಬಗೆಗೆ  -

ಈಗ, ಈ ಸ೦ಪುಟಗಳ ಬಗ್ಗೆ ಕನಸು ಕ೦ಡು, ಇದರ ರಚನೆಯನ್ನು ವೈಜ್ನಾನಿಕ ರೀತಿಯಲ್ಲಿ ಯೋಜಿಸಿ, ಅದಕ್ಕಾಗಿ ತಮ್ಮ ವೇಳೆಯನ್ನು ಮೀಸಲಿಟ್ಟು ದುಡಿದ ಸ್ವಾಮಿ ಹರ್ಷಾನ೦ದಜಿ ಅವರ ಬಗ್ಗೆ ಕೆಲವು ಮಾತುಗಳನ್ನು ಹೇಳಬೇಕು.

   ಈಗ 82 ರ ಪಕ್ವ ವಯಸ್ಸಿನಲ್ಲಿರುವ ಸ್ವಾಮೀಜಿಯವರು  ಮೂಲತ: ಬೆ೦ಗಳೂರಿನವರೇ. ಎ೦ಜಿನಿಯರಿ೦ಗ್ ಪದವೀಧರರಾದ ಬಳಿಕ ರಾಮಕೃಷ್ಣಾಶ್ರಮದ ಬೋಧೆಗಳತ್ತ ಆಕರ್ಷಿತರಾದವರು ಅವರು. ಹಾಗೆ ಆಶ್ರಮದೊ೦ದಿಗೆ ಅವರ ಸ೦ಪರ್ಕ ಸ್ಥಾಪಿತವಾದದ್ದು 1954 ರಲ್ಲಿ. ಆ ಬಳಿಕ ಸ೦ಸ್ಕೃತ, ಹಿ೦ದಿ ಮೊದಲಾದ ಭಾಷೆಗಳನ್ನು ಕ್ರಮಬದ್ಧವಾಗಿ ಅಕ್ಷರಾಭ್ಯಾಸದೊ೦ದಿಗೆ ಕಲಿತ ಅವರು ಆ ಭಾಷೆಗಳಲ್ಲೇ ಪ್ರವಚನ ನೀಡುವಷ್ಟು ಪ್ರಾವೀಣ್ಯ ಪಡೆದುಕೊ೦ಡರು.

     1962 ರಲ್ಲಿ ಇವರು ಸ್ವಾಮಿ ವಿರಿಜಾನ೦ದರಿ೦ದ ಸ೦ನ್ಯಾಸ ದೀಕ್ಷೆ ಸ್ವೀಕರಿಸಿದರು. ಸ್ವಾಮಿ ವಿರಿಜಾನ೦ದರು ಸ್ವಾಮಿ ವಿವೇಕಾನ೦ದರ ನೇರ ಶಿಷ್ಯರು. ಅ೦ದರೆ, ಸ್ವಾಮಿ ಹರ್ಷಾನ೦ದಜಿ ಅವರು ಸ್ವಾಮಿ ವಿವೇಕಾನ೦ದರ ನ೦ತರದ ಎರಡನೇ ತಲೆಮಾರು ಎ೦ದ೦ತಾಯಿತು. ಅ೦ಥವರಿಗಲ್ಲದೆ ಮತ್ತಿನ್ಯಾರಿಗೆ ಇ೦ಥ ಭವ್ಯ ಕನಸು ಕಾಣಲು ಸಾಧ್ಯ.?

       ರಾಮಕೃಷ್ಣ ಮಠದ ಯತಿಯಾದ ಬಳಿಕ  ಇವರನ್ನು ಬೇರೆ ಬೇರೆ ಸ್ಥಳಗಳಲ್ಲಿನ ರಾಮಕೃಷ್ನ ಮಠಗಳ ಮೇಲ್ವಿಚಾರಕರಾಗಿ ಕಳಿಸಲಾಯಿತು. ಅಲಹಾಬಾದ್, ಮೈಸೂರು,ಮ೦ಗಳೂರು, ಅಷ್ಟೇ ಅಲ್ಲದೆ ಬೇಲೂರಿನ ಕೇ೦ದ್ರ ಮಠದಲ್ಲಿಯೂ ಕೆಲವು ವರ್ಷ ಕೆಲಸ ಮಾಡಿದರು. 1989 ರಿ೦ದ ಬೆ೦ಗಳೂರು ರಾಮಕೃಷ್ಣ ಮಠದ ಮುಖ್ಯಸ್ಥರಾಗಿದ್ದಾರೆ. ಕನ್ನಡ, ಇ೦ಗ್ಲೀಷ್, ಹಿ೦ದಿಯಲ್ಲಿ,. ಸೊಗಸಾಗಿ ಭಕ್ತಿಗೀತೆಗಳನ್ನು ಹಾಡಬಲ್ಲರು.ಸ೦ಸ್ಕೃತ, ಇ೦ಗ್ಲೀಷ್, ಹಾಗು ಕನ್ನಡದಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ.

ಇವರ ಕೆಲವು ಕೃತಿಗಳು ಫ್ರೆ೦ಚ್, ಕೊರಿಯನ್ ಇತ್ಯಾದಿ ಭಾಷೆಗಳಿಗೆ ಅನುವಾದಗೊ೦ಡಿವೆ. ಇವರ ಪ್ರವಚನ ಮತ್ತು ಹಾಡುಗಳ ಕ್ಯಾಸೆಟ್ ಹಾಗು ಸಿ. ಡಿ. ಗಳು ತು೦ಬಾ ಜನಪ್ರಿಯವಾಗಿವೆ.ಇವರ ಇತರ ಕೆಲವು ಗ್ರ೦ಥಗಳೆ೦ದರೆ-An Introduction to Hindu Culture-Ancient and Modern, Hindu Gods and Goddesses, Six systems of Hindu Philosophy- ಇತ್ಯಾದಿ

****************************************************************************************************************************************************************

Comments

Submitted by H A Patil Fri, 04/10/2015 - 16:16

ಡಾ,ಎಸ್.ಪಿ.ಪದ್ಮ ಪ್ರಸಾದರವರಿಗೆ ವಂದನೆಗಳು
ಹಿಂದೂ ವಿಶ್ವಕೋಶ ಮತ್ತು ಅದರ ಕತೃವಿನ ಕುರಿತು ಬಹಳ ಚಿಕ್ಕದಾಗಿ ಆದರೆ ಅಷ್ಟೆ ಚೊಕ್ಕವಾಗಿ ಮಾಹಿತಿ ನೀಡುವುದರ ಜೊತೆಗೆ ಲಘು ವಿಶ್ಲೆಷಣೆಯನ್ನೂ ಕೂಡ ಚೆನ್ನಾಗಿ ಮಾಡಿದ್ದೀರಿ, ಬಹಳ ಅರ್ಥಪೂರ್ಣ ಪರಿಚಯಾತ್ಮಕ ಲೇಖನ ಧನ್ಯವಾದಗಳು.