ಅಂಬಾಸುತನ ಬಗ್ಗೆ

ಅಂಬಾಸುತನ ಬಗ್ಗೆ

           ನಮ್ಮ ಮನೆಯಲ್ಲಿ ಹಿಂದಿನಿಂದಲೂ ಜಗದಂಬಿಕೆಯ ಆರಾಧಕರು. ಆಕೆಯನ್ನು ನೆನೆಯದೆ ಯಾವ ಕಾರ್ಯವನ್ನು ಮಾಡಿದವರಲ್ಲ. ನಮ್ಮಗಳ ಜೀವನದಲ್ಲಿ ನಾವು ಹೆಚ್ಚಾಗಿ ಪ್ರಾಶಸ್ತ್ಯ ಕೊಟ್ಟಿರುವುದು ಆಕೆಗೆ. ಊಟ ತಿಂಡಿಗೆ, ಉಡುವ ಬಟ್ಟೆಗೆ ಬಡತನವಿದ್ದರೂ ಜಗನ್ಮಾತೆಯ ಭಕ್ತಿಯಲ್ಲಿ ಶ್ರೀಮಂತರೇ (ಬೇರೆಯವರ ಭಾವದಲ್ಲಿ ಕೊಂಚ ಹೆಚ್ಚೇ ). ಕಷ್ಟ ಬಂದಾಗ ಆಕೆಯ ಮುಂದೆ ಕುಳಿತು ಕಣ್ಣೀರು ಹಾಕುವುದನ್ನು ಬಿಟ್ಟರೆ ಬೇರೆ ಏನೂ ತಿಳಿಯದು. ಕಷ್ಟ ಕೊಟ್ಟು ಪರೀಕ್ಷಿಸಿದರೂ ನಂತರ ಕೈ ಹಿಡಿದು ಕಾಪಾಡುತಿದ್ದಾಳೆ. 

          ಜೀವನದಲ್ಲಿ  ಗುರಿ ಮುಟ್ಟಲು ಗುರುವಿನ ಅವಶ್ಯಕತೆ ಬಂದಾಗ ಸದ್ಗುರುವನ್ನು ನಮಗೆ ಅನುಗ್ರಹಿಸಿದ್ದಾಳೆ .("ಸದ್ಗುರು ರೂಪಿಣಿ ಶ್ರಿಲಲಿತೆ"  ಆ ಮಾತೆಯೇ ಗುರುವಾಗಿ ನಮಗೆ ದಾರಿತೋರುತಿದ್ದಾಳೆ ಎಂಬುದು ನನ್ನ ಭಾವನೆ) ಬಾಣಾವಾರದ ಶ್ರೀ ಶ್ರೀ ಶ್ರೀ ಕೃಷ್ಣ ಯೋಗಿಂದ್ರ ಸರಸ್ವತಿ ಪರಮಹಂಸರು ಹಾಗು ಅವರ ಅವತಾರಿ ಸಖರಾಯಪಟ್ಟಣದ ಶ್ರೀ ವೆಂಕಟಾಚಲ ಅವಧೂತರನ್ನು ನಾವು ನಮ್ಮ ಸದ್ಗುರುಗಳೆನ್ದು ಭಾವಿಸಿ ಅವರನ್ನು ಆರಾಧಿಸುತಿದ್ದೇವೆ. ಬೌತಿಕವಾಗಿ ನಾವುಗಳು ಅವರನ್ನು ಕಾಣದಿದ್ದರೂ ಮಾನಸಿಕವಾಗಿ ಹಾಗು ಸ್ವಪ್ನ ದೃಷ್ಟಾಂತದ ಮೂಲಕ ನಮಗೆ ಅನುಗ್ರಹಿಸಿದ್ದಾರೆ .ಮತ್ತು ಅವರ ಪರಮಾಪ್ತ ಶಿಷ್ಯರು ನಮಗೆ ಅವರ ವಿಚಾರಧಾರೆಗಳನ್ನು ನಮಗೆ ತಿಳಿಸಿ ಪ್ರಾಪಂಚಿಕ ಹಾಗು ಪರಮಾರ್ತದ ದಾರಿ ತೋರಿಸುತಿದ್ದಾರೆ. ನಮ್ಮ ಜೀವನದಲ್ಲಿ ಇಸ್ಟೆಲ್ಲಾ ಬದಲಾವಣೆಗಳು ಕಾಣಲು ಅವರೇ ಕಾರಣ. ನಮ್ಮ ಹಿಂದಿನವರು ಆ ತಾಯಿಯನ್ನು ನಂಬಿ ಪೂಜಿಸಿದ್ದರಿಂದ ಅವಳು ನಮಗೆ ಈ ದಾರಿ ತೋರಿಸಿದ್ದಾಳೆ .

       ನಮ್ಮ ಊರು  ಹಾಸನ ಜಿಲ್ಲೆ ಹೊಳೆನರಸೀಪುರ ತಾ|| ಹರಿಹರಪುರ ಅಲ್ಲಿನ  ಗ್ರಾಮದೇವತೆ ಹಾಗು ನಮ್ಮ  ಆರಾದ್ಯ ದೇವತೆ ಶ್ರೀ ಉಡುಸಲಮ್ಮ (ದುರ್ಗಾಪರಮೇಶ್ವರಿ ). ಅವಳನ್ನು ನಂಬಿಯೇ ನಾವು ಜೀವನ ನಡೆಸುತ್ತಿರುವುದು. ನಮ್ಮ ಪೂರ್ವಿಕರೆಲ್ಲಾ ಈಕೆಯನ್ನೇ ನಂಬಿ ಪೂಜಿಸಿ ಅವಳ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ನಮ್ಮ ಪೂರ್ವಿಕರು ಮುಂಚಿನಿದಲೂ  ಹರಿಹರಪುರದವರು ನಂತರ ಕಾಲಕ್ರಮೇಣ  ಪಕ್ಕದಲ್ಲಿರುವ ತವನಿಧಿ (ಈಗಿನ ತವನಂಧಿ ) ಎಂಬ ಗ್ರಾಮದಲ್ಲಿ ವ್ಯವಸಾಯ ಹಾಗು ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಕಷ್ಟದಿಂದಲೇ ಜೀವನ ಸಾಗಿಸುತಿದ್ದರು. ನಮ್ಮ ಮುತ್ತಜ್ಜಿ  ಅಚಮ್ಮನವರು ಪತಿಯನ್ನು ಕಳೆದುಕೊಂಡು  ಸಂಸಾರದ ಹೊರೆ ಹೊತ್ತು ಮಕ್ಕಳನ್ನು ಸಾಕಿ ಸಲಹುತಿದ್ದರು. ಅಲ್ಲಿ ಬದುಕು ನಡೆಸುವುದು ತೀರಾ ಕಷ್ಟವೆನಿಸಿದಾಗ ಜಗದಂಬಿಕೆಯ ಮೊರೆಹೊಕ್ಕಿ ದೇವರ ಮುಂದಿನ ದೀಪದಲ್ಲೇ ಸೋಗೆ ಗರಿಯನ್ನು ಹತ್ತಿಸಿಕೊಂಡು ಈ ಅಗ್ನಿಯು ಎಲ್ಲಿಯವರೆಗೆ ಬೆಳಕು ನೀಡುವುದೋ ಅಲ್ಲಿಯವರೆಗೆ ನೆಡೆದು ಕೊನೆಗೆ ನೀನು ತೋರುವ ಸ್ಥಳದಲ್ಲಿ ನೆಲೆನಿಂತು ಜೀವನ ಸಾಗಿಸುತ್ತೇವೆಂದು ಸಂಕಲ್ಪಿಸಿ ಮಕ್ಕಳು ದನಕರುಗಳೊಂದಿಗೆ ತವನಿಧಿ ಇಂದ ಹೊರಡುತ್ತಾರೆ. ಅವರು ನಮ್ಮ ಮೂಲ ಗ್ರಾಮ  ಹರಿಹರಪುರಕ್ಕೆ ಬಂದಾಗ ಸೋಗೆಗರಿಯು ಆರಿಹೋಗುತ್ತದೆ. ಅಚಮ್ಮನವರು ಮುಂಚೆ ಅಂದುಕೊಂಡಂತೆ ಉಡುಸಲಮ್ಮ  ತೋರಿದ ಗ್ರಾಮ  ಹರಿಹರಪುರದಲ್ಲೇ ಜೀವನ ನಡೆಸಲು ಪ್ರಾರಂಬಿಸುತಾರೆ. ನಂತರ ಇಲ್ಲೂ ವ್ಯವಸಾಯ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ನೆಮ್ಮದಿಯ ಬದುಕು ಸಾಗಿಸುತಾರೆ. 
       ಹೀಗೆ ಆ ತಾಯಿಯು ತೋರಿದ ದಾರಿಇಂದ ಇಂದು ನಮ್ಮ ಕುಟುಂಬ ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ . ನಮ್ಮ ಅಜ್ಜಿ ತಾತಾ ಅಪ್ಪ ಅಮ್ಮ  ಎಲ್ಲರೂ ನಮಗೆ ಜಗದಂಬಿಕೆಯ ಕತೆಗಳನ್ನು ಮಹಿಮೆಗಳನ್ನು ನಮಗೆ ಚಿಕ್ಕ ವಯಸಿನಿಂದಲ್ಲೂ ಹೇಳಿ ಅವಳ ಮೇಲೆ ನಮಗೆ ಭಕ್ತಿ ನಂಬಿಕೆ ಹುಟ್ಟಿಸಿದ್ದಾರೆ . ಅದರಲ್ಲೂ ನನಗಂತೂ ಅವಳ ಮೇಲೆ ಅಪಾರವಾದ ನಂಬಿಕೆ . ಏನೋ ಗೊತ್ತಿಲ್ಲ ಅವಳಿಲ್ಲದೆ ನನ್ನದೇನೂ ಇಲ್ಲ ಎನ್ನುವ ಭಾವನೆ. ಹೇಳಿಕೊಳ್ಳಲಾಗದ ಭಾವನೆ.  ಅವಳ ಮುಂದೆ ಕೂತು ನನ್ನ ಎಲ್ಲಾ ಭಾವನೆಗಳನ್ನೂ ಹೇಳಿಕೊಳ್ಳುತ್ತೇನೆ . ನಗ್ತೀನಿ , ಅಳ್ತೀನಿ , ಬೈತೀನಿ, ಮುದ್ದು ಮಾಡ್ತೀನಿ. ಅವಳು ದೇವರು ಅನ್ನೋದನ್ನ ಮರೆತು ನನ್ನ ಅಮ್ಮ ಅನ್ಕೋತೀನಿ. 
          ಜೀವನದಲ್ಲಿ ನನಗೆ ಆ ತಾಯಿ ಮತ್ತು ಗುರು ಇದ್ರೆ ಸಾಕು ಏನೂ ಬೇಡ. ಹಣ ಮಾಡ್ಬೇಕು, ಹೆಸರು ಮಾಡ್ಬೇಕು ಅನ್ನೋದು ನಂಗೆ ಇಲ್ಲ . ಯಾವಾಗಲು ಇವರಿಬ್ಬರನ್ನು ನೆನಿತಾ ಇದ್ರೆ ಸಾಕು. ಇದೇ ನನ್ನ ಜೀವನದ ಗುರಿ
Show less
1
 

Rating
No votes yet

Comments