ಆನೆ ಬಂತು ಆನೆ - 3

ಆನೆ ಬಂತು ಆನೆ - 3

~~ಶ್ರೀನಿವಾಸ್ ತಂಡ ಸ್ವಲ್ಪ ದೂರ ಬಂದು ಕ್ಯಾಂಪ್ ಹಾಕಿತು. ರೇಂಜ್ ಆಫೀಸರ್ ಟೀ ಕುಡಿಯುತ್ತಾ  "ಶ್ರೀನಿವಾಸ್ , ನಾನು ಸ್ವಲ್ಪ ಚೈರ್ಮಾನ್ರ ಮನೆಗೆ ಹೋಗಿ ಬೆಳ್ಳಿಗೆ ಬರುತೀನಿ , ಏನಾದರೂ ಅರ್ಜೆಂಟ್ ಇದ್ದರೆ ಕಾಲ್ ಮಾಡಿ" , "ಸರಿ ಸರ್ , ನಾನು ಇಲ್ಲಿ ನೋಡಿಕೊಳುತೀನಿ ಹೋಗಿ ಬನ್ನಿ ".

ರೇಂಜ್ ಆಫೀಸರ್ ಜೀಪ್ ತೆಗೆದುಕೊಂಡು ರಾತ್ರಿ ಆಗುವುದರ ಒಳಗೆ ಚೈರ್ಮಾನ್ರ ತೋಟ್ಟದ್ ಮನೆಗೆ ಬಂದರು. ಇವರು ಬಂದ ವಿಷ್ಯನಾ ಚೆನ್ನ ಚೇರ್ಮನ್ಗೆ ತಿಳಿಸಿದನು. "ಲೇ ಚೆನ್ನ ಹೋಗಿ ಆ ಸರೋಜಮ್ಮನ  ಕರೆದುಕೊಂಡು ಬಾರೋ. ಎಲ್ಲಿ ಇದ್ದಾರೆ ಸಾಹೇಬರು " ಅಂತ ಹೇಳುತ್ತಾ ಟವೆಲ್ ತೆಗೆದುಕೊಂಡು ಸಾಹೇಬರು ಇದ್ದ ಕಡೆ ಹೋದರು. ಚೆನ್ನ ಸರೋಜಮ್ಮನ ಕರೆದುಕೊಂಡು ಬರೋಕ್ಕೆ ಹೋದ. ಆಫೀಸರ್ ರೂಮ್ ಒಳಗೆ ಚೆನ್ನ ಕೊಟ್ಟ ಗುಂಡು ಹಾಕುತ್ತಾ ಇದ್ದರು . ಅವರು ತಮ್ಮ ಕಾಲುಗಳನ ಚೇರ್ ಮೇಲೆ ಹಾಕಿ ದರ್ಪದಿಂದ ಇದ್ದರು. ಚೇರ್ಮನ್ ಬಂದಿದ್ನ ನೋಡಿ "ಏನು ಚೇರ್ಮನ್ ರು ಹೇಗೆ ಇದ್ದೀರಾ " ಅಂತ ಕಾಲು ಇಳಿಸದೆ ಕೇಳಿದರು.

ಚೇರ್ಮನ್ ಮುಗುಳುನಗುತ ಒಳ ಒಳಗೆ ಎಷ್ಟು ದಿಮಾಕು ಅಂತ ಅಂದುಕೊಂಡು "ಏನೋ ತಮ್ಮ ಆಶೀರ್ವಾದ , " ಎಲ್ಲ ಕ್ಷೇಮ ಸಮಾಚಾರ ಮುಗಿದಮೇಲೆ "ಸಾಹೇಬರೆ ನಿಮ್ಮಿಂದ ಒಂದು ಸಹಾಯ ಆಗಬೇಕಿತ್ತು , ಆ ಶೇಷಪ್ಪ ನಿಗೆ  ಪರಿಹಾರ ಕೊಡಿಸಬೇಕು ,  ಹಾಗೆ ನನ್ನ ಜಮೀನಿನ ಮೇಲು ಆನೆ  ಬಂದಿತು ಅಂತ ಹೇಳಿ ನನಗು ಪರಿಹಾರ ಕೊಡಿಸಬೇಕು "
"ರೀ ಅಲ್ಲ ರೀ ನಿಮ್ಮ ಭೂಮಿ ಮೇಲೆ ಆನೆ ಬಂದಿತ , ಎನ್ ರೀ "
"ಸಾಹೇಬರೆ ೩೦೦೦೦ ರೂ ಒಂದು ಎಕರೆಗೆ , ಉಂಟು ಯಾರಿಗೆ ill
ಆಯಿತು , ಎನ್ ರೀ ನಿಮ್ಮ ಮಗ ಕಾಡಿಗೆ ಬಂದು ಇವಾಗ ನನ್ನ ಗೆಸ್ಟ್ ಆಗಿದಾನೆ "
"ಏನೋ ಹುಡುಕು ಮುಂಡೇದೆ , ವಿಚಾರಿಸಿ ಬುಟ್ಟು ಬೂಡಿ "
"ಆಯಿತು , ಇಷ್ಟೇನಾ ಇಲ್ಲ ",
"ಅರ್ಥ ಆಯಿತು , ಸರೋಜಮ್ಮ ಬಂದಳು , ಹಾಗೆ ನನ್ನ ಸಾ ಮೀಲು ಅರ್ಜಿ ",
"ಸ್ಯಾಂಕ್ಶನ್ ಮಾಡಿಸೋಣ , ಸರಿ ಇನ್ನೂ ಮುಂದೆ"
"ಹೋಗಿ ಮಜಾ ಮಾಡಿ" ಅಂತ ಹೇಳುತ್ತಾ ಚೇರ್ಮನ್ ಆಚೆ ಹೋದರು.

ಚೇರ್ಮ್ಯಾನ್ ಆಚೆ ಬಂದು ಬೆಂಕಿ ಕಾಯಿಸುತ ಕೂತ್ತಿದ ಚೆನ್ನನ ನೋಡುತ್ತಾ "ಲೋ ಚೆನ್ನ , ಸಾಹೇಬರು ಏನಾದರು ಕೇಳಿದರೆ ವ್ಯವಸ್ಥೆ ಮಾಡೋ , ಏನೋ ಇದು ಮಳೆ ಶುರುವಾಗಿದೆ , ನಾನು ಇಲ್ಲೇ ಮನೆಗೆ ಹೋಗಿ ಬತ್ತಿನಿ" ಅಂತ ಎರಡು ಹೆಜ್ಜೆ ಮುಂದೆ ಕೈ ಅಲ್ಲಿ ಛತ್ರಿ ಹಿಡಿದು ಹೊರಟರು.
"ಬುದ್ದಿ , ಒಂದು ಮಾತು ", " ಏನೋ ಹೇಳೋ ಬೇಗ"
ಚೆನ್ನ ತಲೆ ಬಾಗಿಸುತ ನೆಲ ನೋಡುತ "ಈ ತಲೆ ಹಿಡಿಯೋ ಕೆಲಸ ಬೇಕಿತ್ತಾ "
"ಯಾಕಲ ಚೆನ್ನ , ಏನೋ ಬೊಗಳುತ್ತ .." ಅಂತ ಗೊಣಗುತ ನಡೆದರೂ.

ಗೇಣಿ ಕೊಪ್ಪಲಿನ ಆಚ್ಚೆ ಕಾಡು ಮಧ್ಯದಲ್ಲಿ ಒಂದು ಹಾಳು ಮಂಟಪ ಇದೆ. ಮಳೆ ಬಂದಾಗ ಕಾಡು ಮಧ್ಯ ಸಿಕಿದವರಿಗೆ ಅದೇ ಆಸರೆ. ಆ ಊರಿನ ಮಂಜಣ ಆ ಸಂಜೆ ದನ ಮೇಯಿಸಲು ಕಾಡಿಗೆ ಹೋಗಿದ. ವಾಪಸು ಬರಬೇಕಾದರೆ ಗಾಡ ಕತಲು ಆವರಿಸಿತು. ಆ ಕತಲಿನಲ್ಲಿ ದಟ್ಟ ಕಾಡಿನ ಮಧ್ಯ ನಡೆದು ಬರೋದು ಅಂದರೆ ಜೀವ ಕೈಗೆ ಬಂದ ಹಾಗೆ , ಆದರೆ ಗೇಣಿ ಕೊಪ್ಪಲಿನ ಜನಕ್ಕೆ ಇದು ಅನಿವಾರ್ಯ.

ಮಂಜಣ ಮಳೆ ಜೋರು ಆದರಿಂದ ಆ ಹಾಲು ಮಂಟಪದ  ಆಸರೆ ಪಡೆದನು. ಗಾಡ ಕತಲು , ವಿಚಿತ್ರ ಶಬ್ಧಗಳು , ಮಂಜಣ ಬಿಡಿ  ಸೇದುತ್ತ , ಮಧ್ಯ ಸೇವಿಸುತ ಕೂತು ಕೊಂಡನು, ಮಳೆ ಕಡಿಮೆ ಆಯಿತು. ಮಂಜಣ ಹೊರಡಲು ಸಿದ್ದನಾಗಿ ಮಂಟಪ ದಿಂದ ಆಚ್ಚೆ ಬಂದನು. ಅವನ ಎದುರಿಗೆ ಇದ್ದ ಗಿಡಗಳ ಮಧ್ಯದಿಂದ ಆನೆ ಒಂದು ಇವನ ಹತ್ತಿರ ಬರುತಿರುವಂತೆ ಅನಿಸಿತು, ಓಡಲು ಸಿದ್ದನಾದನು ಮಂಜಣ, ಪಕ್ಕದಲ್ಲಿ ಏನು ಇದೆ ಅನ್ನೋದು ಕಾಣಿಸದ ಗಾಡ ಕತಲು.

ರೇಂಜ್ ಆಫೀಸರ್ ಗೆ ಬೆಳ್ಳಗಿನ ಜಾವ ಫೋನ್ ಬಂತು , ಆಫೀಸರ್ ಹಾಸಿಗೆ ಇಂದ ಕಣ್ಣು ಉಜ್ಜಿಕೊಳುತ್ತ ಮೇಲೆ ಎದ್ದು ,"ಲೇ ಸರು , ಆ ಫೋನ್ ಕೊಡು ಇಲ್ಲಿ " ಅಂತ ಹೇಳಿದರು. ಅರೆ ಬೆತ್ತಲಾಗಿ ಇದ್ದ ಸರು ಕಂಬಳಿ ondu ಕೈಯಲ್ಲಿ ಹಿಡಿದು ಕೊಂಡು ಇನ್ನೊಂದು ಮಗುಲಿಗೆ ತಿರುಗಿ ಆಫೀಸರ್ ನ ಫೋನ್ ತೆಗೆದು ಕೊಟ್ಟಳು.

ಆಫೀಸರ್ ಫೋನ್ ರಿಸಿವ್ ಮಾಡಿ "ಹಲೋ ಏನ್ರಿ ಸೂರಿಯ ಇಷ್ಟು ಬೆಳ್ಳಿಗೆನೆ " ಅಂತ ಹಾಸಿಗೆ ಇಂದ ಮೇಲೆ ಏಳುತ ಹೇಳಿದರು. ಹಾಗೆ ಮುಂದೆ ಹೆಜ್ಜೆ ಬಾಗಿಲಿನ ಕಡೆ ನಡೆಯ ತೊಡಗಿದರು "ಏನು ಇನ್ನೊಂದು ಬಾಡಿನ , ಅದು ಆ ಹಾಳು ಮಂಟಪದ ಹತ್ತಿರನ  , ಏನ್ರಿ ಹೇಳುತ್ತಾ ಇರೋದು , ಸರಿ ಇನ್ನು ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಬರುತ್ತೀನಿ , ನೋಡ್ರಿ ಯಾವುದೇ ಮೀಡಿಯಾ ದವರು ಬಂದರು ಅಲ್ಲೌ ಮಾಡಬೇಡಿ , ಪೋಲಿಸ್ ಸ್ಟೇಷನ್ ಗೆ ಫೋನ್ ಮಾಡಿ ಟೀಂ ಕರೆಯಿಸಿ , ಬಂದೆ " ಅಂತ ನಡೆಯುತ ಮತ್ತೆ ಹಾಸಿಗೆ ಹತ್ತಿರ ಬಂದು ಸರೋಜಮ್ಮನ ಮುಖ ಸವರುತ್ತ ಬರುತ್ತೀನಿ ಅಂತ ಹೇಳುತ್ತಾ ರೆಡಿ ಆದರು. ಸರೋಜಮ್ಮ ಕೈ ಅಲ್ಲಿ ಕಂಬಳಿ ಹಿಡಿದು ಕೊಂಡೆ ಮುಗುಳು ನಗುತ್ತ ಟಾಟ ಮಾಡಿದಳು.

ಆಫೀಸರ್ ರೂಂ ಇಂದ ಆಚೆ ಬಂದು "ಲೇ ಚೆನ್ನ ಬಾರೋ ಇಲ್ಲಿ" ಅಂತ ಕರೆದರೂ. ಚೆನ್ನ ಓಡುತ್ತಾ ಬಂದನು , ಮೈ ಬಾಗಿಸಿ "ಹೇಳಿ ಬುದ್ದಿ " ಅಂತ ಹೇಳಿದನು , "ಲೋ ಆ ಹಾಳು ಮಂಟಪದ ಹತ್ತಿರ ಯಾರೋ ಹೋಗಿಬಿಟ್ ಇದರಂತೆ , ಹೋಗುತ್ತಾ ಇದ್ದೀನಿ , ಛೇರ್ಮನ್ ಬಂದಾಗ ಹೇಳೋ " ಅಂತ ಹೇಳುತ್ತಾ ತಮ್ಮ ಗಾಡಿ ಹತ್ತಿರ ಹೋದರು

ಆಫೀಸರ್  ಆ ಮಂಟಪದ ಹತ್ತಿರಕ್ಕೆ ಹೋಗುವಷ್ಟರಲ್ಲಿ ಪೋಲಿಸ್ ಕೂಡ ಬಂದಿತು. ಆಫೀಸರ್ ನ ನೋಡಿ ಇನ್ಸ್ಪೆಕ್ಟರ್ ಪ್ರತಾಪ್ "ಏನ್ ರೇಂಜ್ ಸಾಹೇಬರ ಪಯಣ ಎಲ್ಲೋ ಹೋಗಿ ಬಂದ ಹಾಗೆ ಕಾಣಿಸುತ್ತೇ" ಅಂತ ಕೇಳಿದರು. "ಹೀಗೆ ಪ್ರತಾಪ , ಏನು ಆಗಿದೆ , ಯಾರು ಅದು " ಅಂತ ಬಾಡಿ ಇದ್ದ ಕಡೆಗೆ ಹೆಜ್ಜೆ ಹಾಕಿದರು. ಅವರನೇ ಹಿಂಬಾಲಿಸುತ್ತಾ ಪ್ರತಾಪ್ "ಈ ಊರಿನ ಮಂಜ ಅಂತ ಬಾಡಿ ಗುರುತಿಸಿದ್ದಾರೆ ನಮ್ಮ ಕಾನ್ಸ್ಟೇಬಲ್ಗಳು , ರಕ್ತ ಕಾರಿ ಸಾರಿ ಸತ್ತಿರೋದನ ನೋಡಿದರೆ , ಯಾವುದೊ ಪ್ರಾಣಿ ಇವನ ಮೇಲೆ ಆಕ್ರಮಣ ಮಾಡಿದೆ ಅನಿಸುತ್ತೆ , ಮಳೆ ಇದಿದರಿಂದ ಸರಿ ಆಗಿ ಹೆಜ್ಜೆ ಗುರುತುಗಳು ಇಲ್ಲ , ನಮ್ಮವರು ಒಂದು ಸ್ವಲ್ಪ ದ ದೂರದ ವರೆಗೂ ಹೋಗಿ ನೋಡಿದ್ದಾರೆ , ಅಲ್ಲಿ ಇಲ್ಲಿ ಆನೆ ಪಾಇಕಾನೆ ಕಾಣಿಸಿದೆ , ಎಲ್ಲೋ ಆನೆ ಇವನ ಮೇಲೆ ದಾಳಿ ಮಾಡಿರಬೇಕು , ನೋಡಿ ಅವನ ಮೀನಕಂಡದ ಮುಂಭಾಗದ ಕಾಲಿಗೆ ತರಚು ಗಾಯ ಹಾಗಿದೆ , ಬಟ್ಟೆ ಎಲ್ಲ ಹರಿದಿದೆ , ಎಲ್ಲೋ , ಓಡಿ ಹೋಗೋಕ್ಕೆ ಟ್ರೈ ಮಾಡಿರಬೇಕು , ಆಗದೆ ಬಿದ್ಡಿರ್ ಬೇಕು " ಅನಿಸುತ್ತೆ ಅಂತ ಬಾಡಿ ತೋರಿಸುತ್ತ ಹೇಳಿದರು .

"ಬನ್ನಿ ಹೋಗೋಣ , ಪೋಸ್ಟ್ ಮಾರ್ಟಂ ಗೆ ಬಾಡಿ ಕಳಿಸೋಣ" ಅಂತ ಹೇಳುತ್ತಾ ಬಾಡಿ ಇದ್ದ ಕಡೆ ಇಂದ ಹಿಂದಕ್ಕೆ ನಡೆದರೂ, ಪ್ರತಾಪ್ ಹಿಂದೆ ಆಫೀಸರ್ ಕೂಡ ನಡೆದರೂ, ಇಬ್ಬರು ಮಂಟಪದ  ಮುಂದೆ ಹಾಕಿದ ಚೇರ್ ಮೇಲೆ ಕೂತ್ತರು. ಆಫೀಸರ್ ಸಿಗರೇಟ್ ಹಚ್ಚುತ್ತ "ಏನ್ ಕರ್ಮ ರೀ ನಮ್ಮಗೆ , ಈ ಆನೆ ಹುಡುಕೋದು , ಇನ್ನು ಇದು ಬೇರೆ , ಇವತು ಯಾಕೋ ಗ್ರಹಚಾರ ಸರಿ ಇಲ್ಲ ಅನ್ನಿಸುತ್ತೆ , ಹಾಳದು ಆನೆ ಕೈಗೆ ಸಿಗಲ್ಲಿಲ , ತಪ್ಪಿಸಿಕೊಂಡು ಬಿಟ್ಟು ಹೋಯಿತು , ಇನ್ನು ಮೇಲಿನ ಅಧಿಕಾರಿಗಳಿಗೆ ಏನು ಹೇಳೋದು , ಆ ಆನೆ ಕ್ಯಾಂಪ್ ಬೇರೆ ಏನು ಮಾಡಿದಾರೋ , ಸರಿ ನಿಮ್ಮಗೆ ಸಂಜೆ ಫೋನ್ ಮಾಡುತ್ತೀನಿ , ಆ ಆನೆ ಕ್ಯಾಂಪ್ ಹತ್ತಿರ ಹೋಗಿ ಬರುತ್ತೀನಿ " ಅಂತ ಹೇಳಿ ಗಾಡಿ ಸ್ಟಾರ್ಟ್ ಮಾಡಿಕೊಂಡು ಹೊರಟರು.

ರೇಂಜ್ ಆಫೀಸರ್ ಆನೆ ಕ್ಯಾಂಪ್ ಇದ್ದ ಹತ್ತೀರಕ್ಕೆ ಬಂದರು . ಗಾಡಿ ನಿಲಿಸಿ, ಕೂಲಿಂಗ್ ಗ್ಲಾಸ್ ಹಾಕಿಕೊಳುತ್ತ "ರೀ ಶಂಕರಪ್ಪ ಬನ್ರಿ ಇಲ್ಲಿ , ಹೋಗಿ ಅಲ್ಲಿ ತಿಂಡಿ ಆಗಿದ್ದರೆ ಕಟ್ಟಿಸಿಕೊಂಡು ಬನ್ನಿ ಸ್ವಲ್ಪ , ರೀ ಇನ್ನೊಂದು ವಿಷಯ , ಇರಿ , ರೀ ಶ್ರೀನಿವಾಸ್ ಸ್ವಲ್ಪ ಬನ್ನಿ ಇಲ್ಲಿ" ಅಂತ ಶ್ರೀನಿವಾಸರ ಕಡೆ ಕೈ ತೋರಿಸುತ್ತ ಕರೆದರೂ. ಆನೆಗೆ ಆಹಾರ ಕೊಡುತ್ತ ಇದ್ದಿದನ ನೋಡಿಕೊಳುತ್ತ ಇದ್ದ ಶ್ರೀನಿವಾಸ್ ಸಾಹೇಬರು ರೇಂಜ್ ಆಫೀಸ್ಸೆರ್ ಇದ್ದ ಕಡೆಗೆ ಬಂದರು.

"ಏನ್ ಸರ್ , ಯಾಕೋ ಗರಂ ಅಲ್ಲಿ ಇದ್ದೀರಾ ಏನು ಆಯಿತು , ರೀ ಶಂಕರಪ್ಪ ಬನ್ನಿ ಕೂತ್ತಿಕೊಳ್ಳಿ ಇಲ್ಲಿ , ನಿಮ್ಮ ಸಾಹೇಬರು ಇದ್ದಾರೆ ಅಂತ ಹೆದರಬೇಡಿ , ಬನ್ನಿ " , "ಪರವಾಗಿಲ್ಲ ಸರ್" , "ರೀ ಬನ್ರಿ ".

ರೇಂಜ್ ಆಫೀಸರ್ "ರೀ ಶಂಕರಪ್ಪ ಬನ್ನಿ , ರೀ ನಿಮ್ಮಗೆ ಗೇಣಿ ಕೊಪ್ಪಲಿನ ಮಂಜ ಗೊತ್ತೇನ್ರಿ " ಅಂತ ಶಂಕರಪ್ಪ ನ ನೋಡುತ್ತಾ ಕೇಳಿದರು ,"ಗೊತ್ತು ಸಾರ್ , ಯಾಕೆ , ಆವಾ ಆ ಕೊಂದಂಡ ರಾಮಯ್ಯನ ಮನೆ ಆಳು , ಹಿಂದೆ ಒಂದು ಸಾರಿ ಯಾವುದೊ ಮರದ ಕಡಿದ ಕೇಸ್ ನಲ್ಲಿ ಅರೆಸ್ಟ್ ಆಗಿದ್ನಲ್ಲ ಸರ್ ಅವನೇ ", "ಒಹ್ ಅವನ " , "ಯಾಕೆ ಸರ್ ಮತ್ತೆ ಅದೇ ಕೇಸ್ ಆ ?"

"ಇಲ್ಲ ಕಣ್ರೀ ರಾತ್ರಿ ಆ ಹಾಳು ಮಂಟಪದ ಹತ್ತಿರ ಹೋಗಿಬಿಟಿದ್ದಾನೆ, ಪೋಲಿಸ್ ರ ಪ್ರಕಾರ ಅವನು ಮೇಲೆ ಆನೆ ದಾಳಿ ಮಾಡಿದೆ ಅಂತ , ಇವಾಗ ಅಲ್ಲಿಂದ ನೆ ಬರ್ತಾ ಇದೀನಿ , ನಾನು ನೋಡಿದೆ , ಅಲ್ಲೇ ಹತ್ತಿರದಲ್ಲಿ ಆನೆ ಪಾಇಕನೆ ಇದೆ , ಈ ಆನೆ ಇಂದ ಆಗಿ ಇದು ಎರಡನೇ ಬಲಿ , ತಲೆ ಕೆಟ್ಟು ಹೋಗಿದೆ , ಮೇಲಿನ ಅಧಿಕಾರಿಗಳು ಒಂದೇ ಸಮನೆ ಕೇಳುತ್ತ ಇದ್ದಾರೆ , ನಾನು ಅಲಿಂದ ಇಲ್ಲಿಗೆ ಬರೋ ಅಷ್ಟ್ರಲ್ಲಿ ಅವರಿಗೆ ಯಾರೋ ವಿಷಯ ತಿಳಿಸಿದ್ದಾರೆ ಕಣ್ರೀ " ಅಂತ ತಮ್ಮ ಎರಡು ತೊಡೆಗಳ ಮೇಲೆ ಕೈ ಇಟ್ಟುಕೊಂಡು ತಲೆ ಆಡಿಸುತ್ತ ಹೇಳಿದರು.
"ಒಹ್ ಪಾಪ ಬಡವ , ಹೀಗೆ ಆಗಬರದಿತು , ಎಲ್ಲ ಅವರ ಅವರ ಹಣೆ ಬರಹ, ಬಿಡಿ ಸಾರ್, ದೊಡ್ಡ ಸಾಹೇಬರು ದು ಇದೇನು ನಿಮ್ಮಗೆ ನನ್ನಗೆ ಹೊಸದಲ್ಲ, ಇನ್ನೊಂದು ಬಲಿ ಆಗೋದಕ್ಕೆ ಮುಂಚ್ಚೆ ಆ ಆನೆ ನ ಹಿಡಿಸಿಬಿದಬೇಕು , ಶ್ರೀನಿವಾಸ್ ಸಾಹೇಬರೇ ದಯೆ ತೋರಿಸಿ "

"ನಾನು ಏನು ಮಾಡೋಕ್ಕೆ ಆಗುತ್ತೆ ಶಂಕರಪ್ಪ , ನಾವು ನಮ್ಮ ಕೈಲ್ಲಿ ಆದ ಪ್ರಯತ್ನ ಮಾಡಿದೀವಿ , ಆನೆ ಹಿಡಿಯೋದು ಅಂದರೆ ನಿಮ್ಮಗೂ ಗೊತ್ತು "

ರೇಂಜ್ ಆಫೀಸರ್ ಮೇಲೆ ಏಳುತ್ತಾ "ಅರ್ಥ ಆಗುತ್ತೆ ಶ್ರೀನಿವಾಸ್ , ಆದರೆ ಸರ್ಕಾರ ಕೇಳಬೇಕಲ್ಲ , ಆದಷ್ಟು ಬೇಗ ಆ ಆನೆ ನ ಹಿಡಿಬೇಕು , ಇಲ್ಲ ಅಂದರೆ ಇಬ್ಬರಿಗೂ ತೊಂದರೆ "

"ಸರಿ ಆಫೀಸರ್ , ನಡೀಗೆ ಬೇಡ ಲಾರಿ ನಲ್ಲಿ ಬನ್ನಿ ಬೇಗ ಅಂತ ಗಜೇಂದ್ರ ಪಡೆಗೆ ಮೆಸೇಜ್ ಕಳಿಸುತ್ತೀನಿ , ಮಧ್ಯನಕ್ಕೆ ಬಂದು ಬಿಡುತ್ತಾರೆ , ಬನ್ನಿ ತಿಂಡಿ ತಿನ್ನೋಣ " ಅಂತ ಹೇಳುತ್ತಾ ಮೇಲೆ ಎದ್ದರು. ರೇಂಜ್ ಆಫೀಸರ್ ಹೆಗಲ ಮೇಲೆ ಕೈ ಹಾಕಿ ತಮ್ಮ ಎಡ ಕೈ ಇಂದ ಬನ್ನಿ ಅಂತ ಸನ್ನೆ ಮಾಡಿದರು.

ಶಂಕರಪ್ಪ "ಶ್ರೀನಿವಾಸ್ ಸಾಹೇಬರೇ ಒಂದು ಪ್ರಶ್ನೆ , ಕೇಳಲ್ಲ " , "ಕೇಳಿ ಶಂಕರಪ್ಪ , ಸೊಂಕೊಚ ಬೇಡ "
"ಏನಿಲ್ಲ , ಈ ಲಾರಿ ಗೆ ಬಿಲ್ , ಆಮೇಲೆ ಈ ಆನೆ ಕ್ಯಾಂಪ್ ಗೆ ಆಗೋ ಖರ್ಚು , ಇವೆಲ್ಲ ಹೆಂಗೆ , ಇದೆಲ್ಲ ಎಲ್ಲಿಂದ ಬರುತ್ತೆ "
ಶ್ರೀನಿವಾಸ್ ಹಿಂದೆ ತಿರುಗಿ "ರೀ ಶಂಕರಪ್ಪ ಎಷ್ಟು ದಿನ ಆಯಿತು ನಿಮ್ಮಗೆ ಸರ್ವಿಸ್ , ಇವೆಲ್ಲ ಮುಖ್ಯ ಮಂತ್ರಿ ಅವರ ಪರಿಹಾರ ನಿಧಿ ಇಂದ ಬರುತ್ತೆ , ಅದಕ್ಕೆ ನಾವು ಬೇಕಾದ ರಸಿದಿ ಗಳನ ಸಬ್ಮಿಟ್ ಮಾಡಬೇಕು "
"ಒಹ್ , ಕೃಷ್ಣ ನ ಬಿಲ್ಲೋ '
"ರೀ ಏನು ನಮ್ಮನ ಚೀನಾ ದೇಶದ ಪ್ಯಾಪಿಲಿಒ ತರಹ ಅಂದು ಕೊಂಡಿದಿರ ಹೆಂಗೆ " ಅಂತ ಮುಂದೆ ಹೆಜ್ಜೆ ಹಾಕುತ್ತ ಹೇಳಿದರು
"ಹಾಗೆ ಅಂದರೆ ಏನು ಸಾರ್ "
ರೇಂಜ್  ಆಫೀಸರ್ "ರೀ ಶಂಕರಪ್ಪ ಚೀನಾ ದೇಶದಲ್ಲಿ ಸರಕಾರದ ಅಧಿಕಾರಿಗಳ ಸಹಿ ಇರೋ ಪತ್ರ ಗಳು , ಇಲ್ಲ ಯಾವುದೇ ರೀತಿಯ ಪತ್ರ ಬೇಕು ಅಂದರು ಕಳೆ ಕೈ ವ್ಯಾಪರದಂಗೆ ಮಾರ್ಕೆಟ್ ಅಲ್ಲಿ ಸಿಗುತ್ತೆ , ಅದಕ್ಕೆ ಪ್ಯಾಪಿಲಿಒ ಅಂತ್ತಾರೆ, ತಿಳಿಯಿತ್ತ" ಅಂತ ಹೇಳುತ್ತಾ ಅಡುಗೆ ಆಗುತ್ತಾ ಇದ್ದ ಜಾಗಕ್ಕೆ ಬಂದರು "
"ರೀ ಬಾಬು ಆಫೀಸರ್ ಗೆ ತಿಂಡಿ ಕೊಡಿ , ಅಂತ ಕೇಳುತ್ತ ಅಲ್ಲೇ ಇದ್ದ ಒಂದು ಬಾಳೇ ಎಲೆ ತೆಗೆದುಕೊಂಡರು "

ಆಫೀಸರ್ ಗೆ ಬಾಬು ತಿಂಡಿ ಕೊಟ್ಟರು. ಅಷ್ಟರಲ್ಲಿ ಪ್ರತಾಪ್ ಕೂಡ ಅಲ್ಲಿಗೆ ಬಂದರು. ಅದನ ನೋಡಿ ಆಫೀಸರ್ "ರೀ ಬಾಬು , ಇನ್ಸ್ಪೆಕ್ಟರ್ ಸಾಹೇಬರು ಬಂದರು ಅವರಿಗೂ ತಿಂಡಿ ತನ್ನಿ ". ಇನ್ಸ್ಪೆಕ್ಟರ್ ಗು ತಿಂಡಿ ತಂದು ಕೊಟ್ಟರು. ಪ್ರತಾಪ್ ಶ್ರೀನಿವಾಸ್ ಕಡೆ ಕೈ ಸನ್ನೆ ಮಾಡುತ್ತಾ ಹಾಯ್ ಅಂದರು. ಶ್ರೀನಿವಾಸ್ ಹಾಯ್ ಅನುತ್ತ ಮುಗುಳು ನಕ್ಕರು. ರೇಂಜ್ ಆಫೀಸರ್ "ಪ್ರತಾಪ್ ಏನು ಈ ಕಡೆ " , "ಹೀಗೆ ಶ್ರೀನಿವಾಸ್ ನ ಮಾತಾಡಿಸಿಕೊಂಡು , ಆನೆ ಸಿಕ್ಕಿತ್ತ ಅಂತ ಕೇಳೋಣ ಅಂತ ಬಂದೆ" , "ನೀವು ಬಂದಿದು ಒಳ್ಳೆಯದೇ ಆಯಿತು , ಸ್ವಲ್ಪ ಆ ಕಡೆ ಬನ್ನಿ , ನಿಮ್ಮ ಹತ್ತಿರ ಒಂದು ವಿಷಯ ಕೇಳಬೇಕು" ಅಂತ ಸ್ವಲ್ಪ ದೂರದಲ್ಲೇ ಇದ್ದ ಒಂದು ಕಲ್ಲು ಬಂದೆ ತೋರಿಸಿದರು. ಇಬ್ಬರು ತಿಂಡಿ ಕೈ ಅಲ್ಲಿ ಹಿಡಿದುಕೊಂಡು ಸ್ವಲ್ಪ ದೂರ ಹೋದರು.

"ಹೇಳಿ ಆಫೀಸರ್ ಏನು ವಿಷಯ , ಆ ಮಂಜನ ವಿಷಯ ನ "

"ಅಲ್ಲ , ಮೊನ್ನೆ ಆ ಹುಡುಗನ ದೇಹ ಸಿಕ್ಕಿತಲ್ಲ , ಅವನು ಯಾರು , ಇಲ್ಲಿ ಹೇಗೆ ಬಂದ , ಅದರ ಜೊತೆ "

"ಏನು ಅದರ ಜೊತೆ ,  ಹೇಳಿ "

"ಮೊದಲು ಅವನು ಯಾರು ಅಂತ ಹೇಳಿ , ಅದೇನು ಹೇಗೆ ಸತ್ತ ಅವನು ಅಂತ"

"ಪೋಸ್ಟ್ ಮಾರ್ಟಂ ರಿಪೋರ್ಟ್ ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ ಇದೆ , ಯಾವುದೊ ಬಲವಾದ ವಸ್ತು ಇಂದ ಅವನ ಎದ್ದೆ ಇಂದ ಹೊಟ್ಟೆ ಭಾಗದ ವರೆಗೂ ಪ್ರೆಸ್ ಮಾಡಿ ಸಾಯಿಸಿದ್ದಾರೆ  ಅಂತ ಹೇಳುತ್ತೆ , ಅವನ ಸಾಯಿವುದಕಿಂತ ಮೊದಲು ಹೃದಯ ಬಡೀತ್ತ ಜಾಸ್ತಿ ಇತ್ತು , ಆಮೇಲೆ , ಅವನು ಸತ್ತ ಮೇಲೆ ನರಿ ನೋ ಇಲ್ಲ ಕತ್ತೆ ಕಿರುಬ್ಬ ನೋ ಆ ಪೊದೆ ಒಳ್ಳಗೆ ಹಾಕಿದೆ ಅಂತ ಹೇಳಿದರೆ , ಅವನ ಒಂದು ಕೈ ಬುಜ ಪೂರ್ತಿ ಆಗಿ ತಿಂದು ಹಾಕಿದೆ , ಇನ್ನು ನೀವು ನೋಡುವಷ್ಟರಲ್ಲಿ ಹದ್ದುಗಳು ಅವನ ಅರ್ಧ ದೇಹ ತಿಂದು ಮುಗಿಸಿದವು , ಮುಖ ಕೂಡ ತಿಂದು ಹಾಕಿದವು , ಮುಖ ಗುರುತು ಸಿಕ್ಕಿಲ್ಲ , ಪೇಪರ್ ನಲ್ಲಿ ಹಾಕಿಸಿದೀನಿ , ಈ ವಯಸಿಗೆ ಈ ರೀತಿ "
"ಏನು ಮಾಡೋಕ್ಕೆ ಆಗೋದಿಲ್ಲ "
"ಅದರ ಜೊತೆ ಅಂದ್ರಿ ಏನು ಅದು "
"ಏನು ಇಲ್ಲ ಅವತು ನಾವು ಆ ದೇಹ ನ ನೋಡಿದ ದಿನ ಕಾಡಿಗೆ ಯಾವುದೊ ಒಂದು ಹುಡುಗರ ಗುಂಪು ಹೇಳದೆ ಕೇಳದೆ ಬಂದಿತು , ಅವರನ ಅರೆಸ್ಟ್ ಮಾಡಿಸಿದೆ , ಮೋಸ್ಟ್ಲಿ ಇಷ್ಟು ಹೊತ್ತಿಗೆ ಅವರನ ಬಿಟ್ಟು ಬಿಟ್ಟಿರುತ್ತಾರೆ , ನಿಮ್ಮಗೆ ಬೇಕ್ಕಾದರೆ ಸ್ಟೇಷನ್ ಗೆ ಡೀಟೇಲ್ ತಗೋಳಿ "
"ಒಹ್ "
"ಏನು ನಿಮ್ಮಗೆ ಅವನು ಆನೆ ತುಳಿದು ಸತ್ತಿದಾನೆ ಅನಿಸುತ್ತಾ "
"ಹೇಳೋಕ್ಕೆ ಆಗೋದಿಲ್ಲ , ಸರಿ ಆಫೀಸರ್ , ಹೊರಡುತ್ತೀನಿ , ಇನ್ನು ಈ ಮಂಜನ ಕೇಸ್ ಯಾವ ದಾರಿ ಹಿಡಿಯುತ್ತೋ ನೋಡೋಣ "
"ಸರಿ , ಆಗೋ ಆ ಅಭಿಮನ್ಯು ಆನೆ ಕ್ಯಾಂಪ್ ಕೂಡ ಬಂತು ಅನಿಸುತ್ತೆ , ಯಾವುದೊ ದೊಡ್ಡ ಲಾರಿಗಲು ಈ ಕಡೆ ನೆ ಬರುತ್ತಾ ಇದೆ "
"ರೀ ಶ್ರೀನಿವಾಸ್ , ಏನ್ರಿ ಇಷ್ಟು ಬೇಗ ಅಭಿಮನ್ಯು ಪಡೆ ಬಂದು ಬಿಟ್ಟಿದೆ "
"ಸರ್ , ಅವರು ಮೈಸೂರ್ ನಲ್ಲೆ ಇದ್ದರು , ಇನ್ನು ದಸರಾ ಮುಗಿದು ಎರಡು ದಿನ ಆಗಿದೆ ಅಷ್ಟೇ , ನನ್ನಗೆ ಇವತು ತಿಳಿಯಿತು , ಅದಕ್ಕೆ ಲಾರಿ ನಲ್ಲಿ ಬನ್ನಿ ಅಂದೇ , ಅಂತು ಬಂದ್ರಲ್ಲ , ಅಷ್ಟು ಸಾಕು ಬಿಡಿ , ಇನ್ನು ಆ ಆನೆ ಹುಡುಕೋದು ನೋಡೋಣ , ಮೋಸ್ಟ್ಲಿ ಆ ಮಂಟಪದ ಹತ್ತಿರ ಕಾಣಿಸಿರೋದ್ ಅದೇ ಆನೆ ಇರಬೇಕು ಅನಿಸುತ್ತೆ , ಬನ್ನಿ ಆ ಕಡೆ ನೆ ಹೆಜ್ಜೆ ಹಾಕೋಣ , ಏನು ಅಂತಿರಿ "
"ಸರಿ"
ಅಂತು ಇಂತೂ ಆನೆ ಪತ್ತೆ ಮಾಡಿ ಸಾಯಂಕಾಲದ ಒಳ್ಳಗೆ ಸೆರೆ ಹಿಡಿದರು. ಹಿಡಿದ ಆನೆ ನ ದುಬಾರೆ ಆನೆ ಕ್ಯಾಂಪ್ ಗೆ ಕಳಿಸೋದು ಅಂತ ತೀರ್ಮಾನಿಸಿದರು. ಅವತ್ತು ಸಂಜೆ ಎಲ್ಲ ಇದೆ ಸುದ್ದಿ ನ್ಯೂಸ್ ಚಾನೆಲ್ ಗಳ್ಳಲ್ಲಿ. ಶ್ರೀನಿವಾಸ್ , ರೇಂಜ್ ಆಫೀಸರ್ ಒಬ್ಬರಿಗೆ ಒಬ್ಬರು ವಂದನೆಗಳನ ಹೇಳಿ ಕೊಂಡು ಅವರ ಅವರ ದಾರಿ ಹಿಡಿದರು.
ಮೂರನೆಯ ದಿನ ರೇಂಜ್ ಆಫೀಸರ್ ಸ್ಟೇಷನ್ ನಲ್ಲಿ ಒಂದು ಸಾ ಮಿಲ್ ಎಕ್ಸಟೆನ್ಶನ್ ಗೆ ಬಂದ ಅರ್ಜಿ ನ ನೋಡುತ್ತಾ ಇದ್ದರು. ಸ್ಟೇಷನ್ ಗೆ ಒಂದು ಕರೆ ಬಂತು ಆಫೀಸರ್ ನ ಕೇಳುತ್ತ. ಆಫೀಸರ್ ಆ ಕರೆನ ರೆಸಿವ್ ಮಾಡುತ್ತಾ "ಯಾರೋ , ಒಹ್ ಛೇರ್ಮನ್ ಸಾಹೇಬರು , ಏನು , ಒಹ್ ನಿಮ್ಮ ಸಾ ಮಿಲ್ ಫೈಲ್ ನೆ ನೋಡುತ್ತಾ ಇದೆ , ಇವತು ಸಾಯಂಕಾಲ ಅದೇ ವಿಚಾರವಾಗಿ ಮಾತು ಆಡೋದು ಇದೆ , ನಿಮ್ಮ ಮನೆ ಹತ್ತಿರ ಬರುತ್ತೀನಿ , ಎಲ್ಲ ವ್ಯವಸ್ಥೆ ಆಗಲಿ " ಅಂತ ಹೇಳುತ್ತಾ ಫೋನ್ ಇಟ್ಟರು. ಸ್ಟೇಷನ್ ಇಂದ ಆಚ್ಚೆ ಜೀಪ್ ವರೆಸುತ್ತ ಇದ್ದ ಶಂಕರಪ್ಪ ನ ನೋಡುತ್ತಾ ಆಫೀಸರ್ "ರೀ ಶಂಕರಪ್ಪ ಸ್ವಲ್ಪ ಬನ್ನಿ ಇಲ್ಲಿ " ಅಂತ ಜೋರಾಗಿ ಕೂಗಿದರು.
ಶಂಕರಪ್ಪ ಜೀಪ್ ವರೆಸುವದನ ಬಿಟ್ಟು , ಸ್ಟೇಷನ್ ಒಳ್ಳಗೆ ಮುಖ ವರೆಸಿಕೊಳುತ್ತ ಬಂದರು, ಆಫೀಸರ್ ಮುಂದೆ ನಿಂತು "ಏನ್ ಸಾರ್" ಅಂತ ಕೇಳಿದರು.
ಫೈಲ್ ನೋಡುತ್ತಾ ಆಫೀಸರ್ "ರೀ ಶಂಕರಪ್ಪ ನಿಮ್ಮಗೆ ಆ ಗೇಣಿ ಕೊಪಲ್ಲಿನ ಛೇರ್ಮನ್ ಗೊತ್ತಲ್ಲ , ಅವರಿಗೆ ಆಲ್ರೆಡಿ ಒಂದು ಸಾ ಮಿಲ್ ಇದೆ ಅಲ್ಲವ , ಅದರ ಎಕ್ಸಟೆನ್ಶನ್ ಗೆ ಅರ್ಜಿ ಹಾಕಿದ್ದರೆ , ಸೈನ್ ಹಾಕಬಹುದು ಅನಿಸುತ್ತಾ "
"ತಪ್ಪು ತಿಳಿಯೋಲ್ಲ ಅಂದರೆ ಒಂದು ಮಾತು ಸಾರು , ನಿಮ್ಮಗಿಂತ ವಯಸಲ್ಲಿ ನಾನು ದೊಡ್ಡವ ಅದಕ್ಕೆ "
"ಅದಕ್ಕೆ ನಿಮ್ಮನ ಕೇಳುತ್ತ ಇರೋದು , ಏನು ಹೇಳಿ"
"ಏನು ಇಲ್ಲ ಸಾಹೇಬರೇ , ಆ ಸಾ ಮಿಲ್ನಲ್ಲಿ ಅಕ್ರಮವಾಗಿ ಮರಗಳ ಸಾಗಣೆ ಮಾಡುತ್ತಾ ಇದ್ದಾರೆ ಅಂತ ಕಂಪ್ಲೇಂಟ್ ಬಂದಿವೆ , ಅದಕ್ಕೆ ಸೆಂಟ್ರಲ್ ಗವರ್ನಮೆಂಟ್ ಸ್ಟೇಟ್ ಗವರ್ನಮೆಂಟ್ ಗೆ ಮಾಹಿತಿ ಕೇಳಿದೆ , ಅದು ನಿಮ್ಮಗೂ ಗೊತ್ತು , ಈ ಟೈಮ್ ಅಲ್ಲಿ ,  ಸೈನ್ ಮಾಡೋದು ಕ್ಷೇಮ ಅಲ್ಲ "
"ಅದು ಸರಿ , ಆಯಿತು ಹಾಕೋದಿಲ್ಲ , ಇದನ ಶನಿವಾರ ರೆಕಾರ್ಡ್ಸ್ ಡಿಪಾರ್ಟ್ಮೆಂಟ್ ಗೆ ಕಳಿಸೋ ಅರೇಂಜ್ಮೆಂಟ್ ಮಾಡಿ, ಸಾಯಂಕಾಲ ಆ ಛೇರ್ಮನ್ ಮನೆಗೆ ಹೋಗಬೇಕು ಜೀಪ್ ರೆಡಿ ಮಾಡಿಕೊಂಡು ಇರಿ , ನಾನು ಆ ಪ್ರತಾಪ್ ನ ಮೀಟ್ ಮಾಡಿ ಬರುತೀನಿ " ಅಂತ ಎದ್ದು ಆಚೆ ಹೊರಟ್ಟರು.
ರೇಂಜ್ ಆಫೀಸರ್ ಪ್ರತಾಪ್ ಸ್ಟೇಷನ್ ಒಳ್ಳಗೆ ಜೀಪ್ ನಿಲ್ಲಿಸಿ ಹೋದರು. ಪ್ರತಾಪ್ ಯಾವುದೊ ಫೈಲ್ ನೋಡುತ್ತಾ ಚೇರ್ ಮೇಲೆ ಕೂತ್ತಿದರು. ರೇಂಜ್ ಆಫೀಸರ್ ಕೂಲಿಂಗ್ ಗ್ಲಾಸ್ ಇಳಿಸುತ್ತಾ ನಗು ಮುಖದೊಂದಿಗೆ  "ಏನ್ ಪ್ರತಾಪ್ ಫುಲ್ ಬ್ಯುಸಿ ಅನ್ನಿಸುತ್ತೆ , ಹೇಗಿದ್ರ " ಅಂತ ಹೇಳುತ್ತಾ ಪ್ರತಾಪ್ ಮುಂದೆ ಚೇರ್ ಮೇಲೆ ಕೂತ್ತಿಕೊಂಡರು. ಇವರ ಧ್ವನಿ ಕೇಳಿ ಪ್ರತಾಪ್ ತಲೆ ಎತ್ತಿ ರೇಂಜ್ ಆಫೀಸರ್ ನ ನೋಡುತ್ತಾ "ನಮಸ್ತೆ ಆಫೀಸರ್ , ನಾನು ಆರಂ , ನೀವು ಹೇಗಿದಿರಿ , ಏನು ನಿಮ್ಮ ಪಯಣ ಈ ಕಡೆ ಬಂದು ಬಿಟ್ಟಿದೆ , ಕಾಲ್ ಮಾಡಿದರೆ ನಾನೇ ಬರುತ್ತಾ ಇದೆ " . "ಪರವಾಗಿಲ್ಲ , ನಿಮ್ಮಿಂದ ನನಗೆ ಒಂದು ಇನ್ಫೋ ಬೇಕಿತ್ತು , ಯಾಕೆ ಏನು ಅಂತ ನಿಮ್ಮಗೆ ನಾಳೆ ಸಾಯಂಕಾಲ ನಮ್ಮ ಮಾಮುಲ್ಲಿ ಜಾಗ ಅದೇ ಕ್ಲಬ್ ನಲ್ಲಿ ಹೇಳುತ್ತೀನಿ" ಅಂತ ಪೇಪರ್ ವೆಯಿಟ್ ಕೈ ಅಲ್ಲಿ ಹಿಡಿಕೊಂಡು ಹೇಳಿದರು.

ಪ್ರತಾಪ್ "ರೀ , ಒಂದು ಕಾಪಿ ತರಿಸಿ , ಹೇಳಿ ಆಫೀಸರ್ ಏನು ಇನ್ಫೋ ಬೇಕಿತ್ತು ಅಂತ"
"ಅದೇ ಆ ಕಾಡಿನಲ್ಲಿ ಸಿಕ್ಕಿತಲ್ಲ ಆ ಹುಡುಗನ ದೇಹ ಅದರ ಬಗೆ ಏನಾದರು ಮಾಹಿತಿ ಸಿಕಿತ್ತ ಅಂತ"
"ಹಾ ಆಫೀಸರ್ ಒಂದು ಸುಳಿವು ಸಿಕ್ಕಿದೆ , ನೀವು ಅವತು ಯಾರೋ ಹುಡುಗರು ಸಿಕ್ಕಿದರು ಅಂತ ಹೇಳಿದರಲ್ಲ ಅವರಲ್ಲಿ ಒಬ್ಬ ಹುಡುಗನ ಸ್ಟೇಷನ್ ಗೆ ಕರೆದು ಕೊಂಡು ಬಂದು ವಿಚಾರಿಸಿದೆ , ಅವನು ಆ ಮೃತ ಪಟ್ಟ ಹುಡುಗ ತಮ್ಮ ಫ್ರೆಂಡ್ ಅಂತ ಹೇಳಿದ , ಅವರು ನಿಮ್ಮಗೆ ಸಿಕ್ಕಿದ ಮೂರದಿಂದ ಮುಂಚ್ಚೆ ನೆ ಕಾಡಿಗೆ ಬಂದಿದ್ದಾರೆ , ದಾರಿ ತಪ್ಪಿ ಎಲ್ಲೋ ಹೋಗಿದ್ದಾರೆ , ಅವರು ದಾರಿ ಹುಡುಕುತ್ತ ಬರಬೇಕಾದರೆ ಆನೆ ಕಾಣಿಸಿಕೊಂಡು ಇದೆ , ಅದು ಇವರನ ಅಟ್ಟಿಸಿಕೊಂಡು ಬಂತಂತೆ , ಅಷ್ಟರಲ್ಲಿ ಒಬ್ಬ ಒಬ್ಬನು ಒಂದು ದಿಕ್ಕು ಆದರಂತೆ , ಆ ಗೇಣಿ ಕೊಪ್ಪಲ್ಲಿನ ಛೇರ್ಮನ್ ಮಗ ಮತ್ತೆ ಮೃತ ಪಟ್ಟ ಹುಡುಗ ಒಂದು ಕಡೆ ಆದರಂತೆ , ಆಮೇಲೆ ಹಾಗು ಹೀಗು ಒಬ್ಬರು ಒಬ್ಬರು ಒಂದು ಕಡೆ ಸೇರಿದರಂತೆ, ಅಷ್ಟರಲ್ಲಿ ಈ ಹುಡುಗ ಮೃತ ಪಟ್ಟಿದನಂತೆ , ಇಷ್ಟೇ ಈ ಹುಡುಗನಿಗೆ ಗೊತ್ತು ಇರೋದು , ಇನ್ನು ನಾವು ಆ ಗೇಣಿ ಕೊಪ್ಪಲಿನ ಛೇರ್ಮನ್ ಮಗನ ಕರೆದುಕೊಂಡು ಬಂದಿದಿವಿ , ಸ್ವಲ್ಪ ಅಹಂಕಾರಿ , ವರ್ಕ್ ಔಟ್ ಮಾಡಬೇಕು , ನನ್ನಗೆ ಇದು ಮರ್ಡರ್ ಅನ್ನಿಸುತ್ತೆ "
"ಒಹ್ ಥ್ಯಾಂಕ್ಸ್ , ಆ ಹುಡುಗ ಏನಾದರು ಬಾಯಿ  ಬಿಟ್ಟರೆ ನನ್ನಗೆ ತಿಳಿಸಿ , ತುಂಬಾ ಉಪಕಾರ ಆಗುತ್ತೆ"
"ಯಾವುದೊ ಟೆನ್ಶನ್ ಅಲ್ಲಿ ಇದ್ದೀರಾ ಏನು ಆಯಿತು "
"ಆ ಛೇರ್ಮನ್ ಸಾ ಮಿಲ್ ಎಕ್ಸಟೆನ್ಶನ್ ಗೆ ಪರ್ಮಿಷನ್ ಕೇಳಿದ್ದರೆ , ಕ್ಯಾನ್ಸಲ್ ಮಾಡೋದು ಹೇಗೆ ಅಂತ ಯೋಚಿಸುತ್ತ ಇದೆ , ಅದಕ್ಕೆ ಈ ವಿಷಯನ ಇಟ್ಟುಕೊಂಡು "
'ಒಹ್ , ಆದರೆ "
"ಮಣ್ಣು ತಿನ್ದಿದಿನಿ , ತಿದಿಕೊಳಬೇಕು , ಸಹಾಯ ಮಾಡಿ "
"ಸರಿ , ಬ್ಲಾಕ್ ಮೇಲ್ ಮಾಡಿ , ಕೈ ಅಲ್ಲಿ ಅದ ಸಹಾಯ ಮಾಡೋಣ , ತಗೊಳ್ಳಿ ಕಾಪಿ "
"ಥ್ಯಾಂಕ್ಸ್ , ಇನ್ನು ಬರುತೀನಿ , ಹಾ ಆ ಮಂಜನ ಕೇಸ್ "
"ಪೋಸ್ಟ್ ಮಾರ್ಟಂ ರಿಪೋರ್ಟ್ ಪ್ರಕಾರ ಅವನು ಅಲ್ಸರ್ ಹೊಡೆದು , ಹಾರ್ಟ್ ಅಟ್ಯಾಕ್ ಆಗಿ ಸತ್ತಿದ್ದಾನೆ , ಆನೆ ಇಂದ ಅಲ್ಲ "
"ಒಹ್" ಅಂತ ಕಾಪಿ ಕುಡಿದು ರೇಂಜ್ ಆಫೀಸರ್ ಮೇಲೆ ಎದ್ದು ಬೈ ಹೇಳಿ ಸ್ಟೇಷನ್ ಇಂದ ಹೊರ ಬಿದ್ದರು. ಛೇರ್ಮನ್ ಮನೆ ಕಡೆ ಹೊರಟ್ಟರು

ರೇಂಜ್ ಆಫೀಸರ್ ಜೀಪ್ ಛೇರ್ಮನ್ ಮನೆ ಮುಂದೆ ಬಂದು ನಿಂತ್ತಿತು. ಅವಾಗ ಸಂಜೆ ೫ ಆಗಿತು. ಛೇರ್ಮನ್ ಕಾಲು ಹಿಸುಕುತ್ತ ಕುಳಿತ್ತು ಇದ್ದ ಚೆನ್ನ ಮೇಲೆ ಎದ್ದು ಮಂಡಿ ಅರ್ಧ ಮಡಚ್ಚಿ ಬುದ್ದಿ ಅಂದ , ಆಫೀಸರ್ ಬಲಗೈ ಹಿಂದ ಕುಳಿತ್ತುಕೊ ಅಂತ ಸನ್ನೆ ಮಾಡುತ್ತಾ ಛೇರ್ಮನ್ ಮುಂದೆ ಇದ್ದ ಜಗಲಿ ಮೇಲೆ ಬಂದು ಕುಳಿತ್ತರು. ಛೇರ್ಮನ್ ಕಾಲು ಮಡಚ್ಚದೆ ಹಾಗೆ ಕೂತ್ತರು. ಆಫೀಸರ್  ಅದನ ನೋಡಿ ಒಳ್ಳ ಒಳ್ಳಗೆ ನಗುತ್ತ "ಏನ್ ಛೇರ್ಮನ್ ಸಾಹೇಬರು ಆರಾಮಾಗಿ ಇದ್ದೀರಾ " ಅಂತ ಕೇಳಿದರು
ಛೇರ್ಮನ್ ನಗೆ ಮುಖದೊಂದಿಗೆ "ಬರಬೇಕು ಸಾಹೇಬರು , ಟೀ ತರಿಸಲ್ಲ "
"ಏನು ಬೇಡ , ಏನೋ ವಿಷಯ ಮಾತಾಡ ಬೇಕಿತು ಅಂದರಲ್ಲ ಏನು ವಿಷಯ " ಅಂತ ಎರಡು ಕೈ ನು ಹಿಂದಕ್ಕೆ  ಊರಿಕೊಂಡು  ಕೇಳಿದರು.
"ಏನು ಇಲ್ಲ ಸಾಹೇಬರೇ ನಾನು ಸಾ ಮಿಲ್ ಎಕ್ಸಟೆನ್ಶನ್ ಗೆ ಅಪ್ಲೈ ಮಾಡಿದೆ , ಮತ್ತೆ ಆ ಮಂಜ ಆನೆ ಕೈ ಆಗೇ ಸಿಕ್ಕಿ ಸತ್ತ ಪಾಪ , ಆಮೇಲೆ ಅ ಶೇಷಪ್ಪ ನಿಗೆ ಪರಿಹಾರ ಕೊಡಿಸಿದಕ್ಕೆ ಧನ್ಯವಾದಗಳು. "
"ನಿಮ್ಮ ಸಾ ಮಿಲ್ ಪೇಪರ್ ನೋಡಿದೆ , ಅದನ ಪುರಸ್ಕರಿಸೋಕ್ಕೆ ಆಗೋದಿಲ್ಲ , ಮತ್ತೆ ಆ ಮಂಜ ಆನೆ ಕೈ ಅಲ್ಲಿ ಸಿಕ್ಕಿ ಸತ್ತಿಲ , ಅವನು ಎದೆ ಒಡೆದು ಸತ್ತಿದ್ದಾನೆ ಅಂತ ರಿಪೋರ್ಟ್ ಹೇಳುತ್ತಾ ಇದೆ , ಇನ್ನು ಪರಿಹಾರ ನಿಮ್ಮಗೂ "
"ನನಗು ಸಿಕ್ಕಿತು , ಥ್ಯಾಂಕ್ಸ್ , ಸಾ ಮಿಲ್ ಪೇಪರ್ ಆಗೋದಿಲ್ಲ ಅಂದರಿ ಯಾಕೆ"
"ಹಾ ನಿಮ್ಮ  ಸಾ ಮಿಲ್ ಮೇಲೆ ತುಂಭಾ ಕಂಪ್ಲೇಂಟ್ ಕೇಳಿ ಬಂದಿವೆ , ಅದರ ಬಗೆ ಸರ್ಕಾರ ವರದಿ ಕೇಳಿದೆ , ಅದಕ್ಕೆ ಆಗೋದಿಲ್ಲ "

"ಎಲ್ಲ ನಿಮ್ಮ ಕೈ ಆಗೇ ಅದೇ , ನೋಡಿ ಹೊಸಿ"

"ಆಗೋದಿಲ್ಲ ಛೇರ್ಮನ್ ಸಾಹೇಬರೇ , ಇನ್ನು ಮಂಜನ ಕೇಸ್ ಅದು ಆಗೋದಿಲ್ಲ "
"ಇದೆ ಕೊನೆ ನ'
"ಹ , ಇನ್ನು ಮುಂದು ವರೆಸಿದ್ದರೆ ನಿಮ್ಮ ಮಗನ ಹಣೆ ಬರಹ ನಾನು ಬರೆಸಬೇಕಗುತ್ತೆ, ಹುಷಾರು" ಅಂತ ಹೇಳುತ್ತಾ ಆಫೀಸರ್ ಕೂಲಿಂಗ್ ಗ್ಲಾಸ್ ಹಾಕಿಕೊಳುತ್ತ ಆಚ್ಚೆ ನಡೆದರೂ. ಛೇರ್ಮನ್ ಮೇಲೆ ಎದ್ದು ಆಫೀಸರ್ ಹೋಗೋದನ ನೋಡುತ್ತಾ ಸುಮ್ಮನೆ ಇದ್ದರು. ಆಫೀಸರ್ ಹೋದ ಮೇಲೆ "ಲೇ ಚೆನ್ನ , ಎಷ್ಟಲ್ಲ ಈ ನನ್ನ ಮಗನಿಗೆ , ಇವನಿಗೆ ಬುದ್ದಿ ಕಲಿಸಬೇಕು , ಮಗನ ಹಣೆ ಬರಹ ಬರಿತನಂತ್ತೆ , ನೋಡಿಕೊಳುತ್ತಿನಿ" ಅಂತ ಗುಟರಿಕ್ಕೆ ಹಾಕಿದರು.
ಎರಡು ಹೆಜ್ಜೆ ಮುಂದೆ ಹಿಡುತ್ತಾ "ಲೇ ಚೆನ್ನ , ಆ ಕೆಳಗಿನ ಕೇರಿ ಲೀಡರ್ ಬಸಯ್ಯ ನ ಕರ್ಕೊಂಡು ಬಾರೋ ತೊಟ್ಟದ ಮನೆಗೆ , ಇವಾಗ ಹೋಗಿ ಮೊದಲು ಆ ಇಜರ ಸಾಬಿ ನ ಕರ್ಕೊಂಡು ಬಾರೋ, ಹಾಗೆ ಆ ಆಫೀಸರ್ ಆಫೀಸ್ ಗೆ ಫೋನ್ ಮಾಡಿ ನಿಂಗಪ್ಪ ನಿಗೆ ಕೊಡಿ ಅನ್ನೋ ". ಛೇರ್ಮನ್ ನಿಂಗಪ್ಪನಿಂದ  ಯಾವತು ಡಾಕ್ಯುಮೆಂಟ್ಸ್ ರೆಕಾರ್ಡ್ ಸೆಕ್ಷನ್ ಗೆ ಹೋಗುತ್ತೆ ಅಂತ ತಿಳಿದುಕೊಂಡರು.
ಅವತು ಸಂಜೆ ಇಜಾರದ ಸಾಬಿ ಬಂದು ಛೇರ್ಮನ್ ಹತ್ತಿರ ಮಾತಾಡಿಕೊಂಡು ಹೋದ. ರಾತ್ರಿ ಆ ಕೆಳಗಿನ ಕೇರಿ ಲೀಡರ್ ಬಸಯ್ಯ ಬಂದು ಹೋದ. ಇವರ ಇಬ್ಬರ ಜೊತೆ ಮಾತಾಡಿದ ಮೇಲೆ ಛೇರ್ಮನ್ ಮುಖದಲ್ಲಿ ಹರ್ಷ ಉದ್ಭವಿಸಿತ್ತು.
ಮಾರನೆಯ ದಿನ ಗುರುವಾರ ರೇಂಜ್ ಆಫೀಸರ್ ಆಫೀಸ್ ಮುಂದೆ ನೂರಾರು ಜನ "ಅಧಿಕಾರಿಗೆ ಧೀಕ್ಕಾರ , ಹರಿ ಜನ ವಿರೋಧಿ ಆಫೀಸರ್ ಗೆ ಧಿಕ್ಕಾರ " ಅಂತ ಬಸಯ್ಯ ನ ಮುಂದಳತವದಲ್ಲಿ  ಧಿಕ್ಕಾರ ಕೂಗುತ್ತ ಬಂದು ಸೇರಿದರು. ಅವರ ಮಧ್ಯೆ ಇಜಾರ ಸಾಬಿ ಮತ್ತೆ ಅವನ ಕಡೆಯವರು ಬಂದು ಸೇರಿದರು. ಗುಂಪು ಬಂದಿದನ ನೋಡಿದ ಆಫೀಸರ್ ಆಚ್ಚೆ ಬಂದರು. ಆಮೇಲೆ ಜೋರಾಗಿ "ರೀ ಶಂಕರಪ್ಪ ಆ ಪ್ರತಾಪ್ ಗೆ ಫೋನ್ ಮಾಡಿ ಬೇಗ ಪೋಲಿಸ್ ಟೀಂ ಕಳಿಸೋದಕ್ಕೆ ಹೇಳಿ. ಪ್ರತಾಪ್ ಆಫೀಸ್ ಇಂದ ರೇಂಜ್ ಆಫೀಸರ್ ಆಫೀಸ್ ಗೆ ೩೦ ನಿಮಿಷದ ಜರ್ನಿ. ಕನಿಷ್ಠ ಅಂದರು ೨೦ ನಿಮಿಷ ಅಂತು ಬೇಕು. ಶಂಕರಪ್ಪ ಪ್ರತಾಪ್ ಗೆ ಫೋನ್ ವಿಷಯ ತಿಳಿಸಿದರು. ಪ್ರತಾಪ್ ಟೀಂ ಕಲಿಸಿಕೊಡುತ್ತಿನಿ , ತಾನು ಬರುತ್ತೀನಿ ಅಂತ ಹೇಳಿದರು.
ಆಫೀಸರ್ ಬಸಯ್ಯ ನ ಕರೆದು "ಏನ್ರಿ ಇದೆಲ್ಲ , ಯಾಕೆ ಈ ಗಲಾಟೆ " ಅಂತ ಕೇಳಿದರು.
ಬಸಯ್ಯ "ನಿಮ್ಮ ಹರಿ ಜನರ ವಿರೋಧದ ವಿರುಧ ಹೋರಾಟ , ನಮ್ಮ ಕಡೆ ಆದ ಮಂಜನ ಅನ್ಯಾಯದ ಪರ ಹೋರಾಟ '
"ಏನು ಮಂಜನ ನಿಗೆ ಅನ್ಯಾಯ , ನನ್ನಿಂದ , ಹೇಗೆ ರೀ , ಡಾಕ್ಟರ ರಿಪೋರ್ಟ್ ಕೊಟ್ಟಿದಾರೆ , ಪೋಲಿಸ್ ನವರು ಇನ್ವೆಸ್ಟಿಗೇಷನ್ ಮಾಡಿದ್ದಾರೆ, ನಾನು ಏನು ಮಾಡಲ್ಲಿ , ಅಲ್ಲಿ ಹೋಗಿ ಗಲಾಟೆ ಮಾಡಿ , ಇದಕು ನನಗು ಸಂಬಂದವು  ಇಲ್ಲ " ಅಂತ ಹೇಳುತ್ತಾ ಇರುವಾಗಲೇ ಇಜಾರ ದ ಸಾಬಿ ಮತು ಅವನ ಕಡೆ ಅವರು ಆಫೀಸರ್ ಕಡೆಗೆ ಕಲ್ಲು ಬಿಸಿದರು. ಆಫೀಸರ್ ಇದನ ನೋಡಿ " ಶಾಂತಿ ಶಾಂತಿ " ಅಂತ ಜೋರಾಗಿ ಹೇಳಿದರು , ಅಷ್ಟರಲ್ಲಿ ಕಲ್ಲು ಗಳ ತೂರಾಟ್ಟ ಜಾಸ್ತಿ ಆಯಿತು. ಆಫೀಸರ್ ಕೋಪ ದಿಂದ ಬಸಯ್ಯ ನ ತಳುತ್ತ ರೈಫಲ್ ಹೊರಗೆ ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿದರು.
ಜನ ರೋಸಿ ಕಲ್ಲು ತೂರಾಟ ಜಾಸ್ತಿ ಮಾಡಿದರು. ಇಜಾರ ಸಾಬಿ ಮತು ಅವನ ಕಡೆಯವರು ಮುಂದೆ ನುಗಿ ಸ್ಟೇಷನ್ ಒಳ್ಳಗೆ ಹೋಗಲು ಪ್ರಯತ್ನ ಮಾಡಿದರು. ಶಂಕರಪ್ಪ ಬಿಡಲ್ಲಿಲ್ಲ. ಜನ ಸಂದಣಿ ಜಾಸ್ತಿ ಆಗಿ ಇಜಾರ ಸಾಬಿ ಮತು ಅವನ ಕಡೆಯವರು ಸ್ಟೇಷನ್ ಒಳ್ಳಗೆ ನುಗಿ ಬಿಟ್ಟರು, ಒಳ್ಳಗೆ ನುಗಿ ಎಲ್ಲ ಕಡೆನು ಬೆಂಕಿ ಹಚ್ಚಿದರು.
ಸ್ಟೇಷನ್ ದಗ ದಗ ನೆ ಉರಿಯಿತ್ತು. ಇಜಾರದ ಸಾಬಿ ಅವನ ಕಡೆ ಅವರು ಅಲ್ಲಿಂದ ಕಾಲು ಕಿತ್ತರು. ಬಸಯ್ಯ ಹೆದ್ದರಿ ಅಲ್ಲಿಂದ ಓಡಿ ಹೋದ. ಅಷ್ಟರಲ್ಲಿ ಪೋಲಿಸ್ ನವರು ಅಲ್ಲಿಗೆ ಬಂದು ಪರಿಸ್ಥಿತಿನ ಕಂಟ್ರೋಲ್ ಮಾಡಿದರು. ಫೈರ್ ಎಕ್ಸಟೆನ್ಶನ್ ನವರು ಬರುವದಕಿಂತ ಮುಂಚೆ ಸ್ಟೇಷನ್ ಉರಿದು ಹೋಗಿತು. ಆಮೇಲೆ ಹಾರಿಸಿದರು.

ಮಾರನೆಯ ದಿನ ಪ್ರತಾಪ್ ಗೆ ಇನ್ವೆಸ್ಟಿಗೇಷನ್ ಮಾಡಿ ಅಂತ ಮೇಲಿನ ಅಧಿಕಾರಿಗಳಿಂದ ಆರ್ಡರ್ ಬಂತು. ಪ್ರತಾಪ್ ಇನ್ವೆಸ್ಟಿಗೇಷನ್ ಮಾಡಿ ಇಜಾರದ ಸಾಬಿ ನ ಅರೆಸ್ಟ್ ಮಾಡಿದರು. ಬಸಯ್ಯ ನ ಎನ್ಕ್ವೈರಿ ಮಾಡಿದರು. ಪ್ರಕರಣದ ಹಿಂದೆ ಛೇರ್ಮನ್ ರ ಕೈವಾಡ ಇರುವುದು ತಿಳಿಯಿತು. ಛೇರ್ಮನ್ ನ ಅರೆಸ್ಟ್ ಮಾಡಿದರು.

ಛೇರ್ಮನ್ ಮೇಲಿನ ಆರೋಪ ಸಾಬೀತು ಆಯಿತು , ಛೇರ್ಮನ್ ಸಾಹೇಬರಿಗೆ ಮೂರು ವರ್ಷ ಶಿಕ್ಷೆ ಆಯಿತು. ಇದರ ಮಧ್ಯ ಆನೆ ಇಂದ ಸಿಕ್ಕಿ ಸತ್ತ ಹುಡುಗನ ಸಾವಿನ ವಿಚಾರಣೆ ಪ್ರತಾಪ್ ನಡಿಸಿದರು. ಆ ಹುಡುಗನ ಸಾವು ಒಂದು ಕೊಲೆ ಅಂತ ಅವರ ತನಿಖೆ ಇಂದ ತಿಳಿಯಿತು.

ಆ ಹುಡುಗನಿಗೆ ಮತ್ತೆ ಛೇರ್ಮನ್ ಮಗಳಿಗೆ ಪರಸ್ಪರ ಪ್ರೇಮ ಇತ್ತು , ಇದರಿಂದ ಕುಪಿತಗೊಂಡು ಇದ್ದ ಛೇರ್ಮನ್ ರ ಮಗ ಸಾಯಿಸಿದ. ಅವನ ಮೇಲೆ ದಪ್ಪ ಕಲ್ಲನು ತೆಗೆದು ಕೊಂಡು ಎದೆ ಬಾಗಕ್ಕೆ ಅದುಮಿ ಕೊಲೆ ಮಾಡಿದ , ಆದರಿಂದ ನೆ ಗಟ್ಟಿ ವಸ್ತು ಇಂದ ಸಾಯಿಸಲಾಗಿದೆ ಅಂತ ರಿಪೋರ್ಟ್ ಹೇಳಿದು. ಆ ವೇಳೆಗೆ ಅಲ್ಲಿ ಅವರಿಗೆ ಆನೆ ಕೂಡ ಕಾಣಿಸಿಕೊಂಡು ಇದಿದ್ದು ಈ ರೀತಿ ಕೊಲೆ ಮಾಡೋದಕ್ಕೆ ಪ್ರೇರಣೆ ಅಂತ ಛೇರ್ಮನ್ ಮಗ ಒಪ್ಪಿಕೊಂಡ. ಛೇರ್ಮನ್ ಮಗ ಮತ್ತೆ ಅವನ ಜೊತೆ ಇದ್ದ ಇಬ್ಬರು ಸೇರಿ ಆ ಹುಡುಗನ ಕತೆ ಮುಗಿಸಿದರು. ಛೇರ್ಮನ್ ಮಗನ ಅರೆಸ್ಟ್ ಮಾಡಲೈತು.

ಕೊಲೆ ಮಾಡಿದು ಛೇರ್ಮನ್ ಮಗ , ಮಂಜ ಸತ್ತಿದು ಕುಡಿತ ದಿಂದ , ಆದರೆ ಕೆಟ್ಟ ಹೆಸರು ಬಂದಿದು ಮಾತ್ರ ಆನೆ ಮೇಲೆ , ಆನೆ ಬಂದಿದೆ ತಪ್ಪ ?

                                                        ಬರೆದ ಬಡಪಾಯಿ
                                                              ಹರೀಶ್ ಎಸ್ ಕೆ

Comments

Submitted by kavinagaraj Thu, 10/15/2015 - 13:00

ಮೂರು ಕಂತುಗಳನ್ನೂ ಓದಿದೆ. ಕುತೂಹಲಕರವಾಗಿದೆ. ಇಲಾಖೆಗಳ ಕೆಲಸ ಕಾರ್ಯಗಳ ಪರಿಚಯವಿದ್ದಿದ್ದರೆ ನೈಜತೆಗೆ ಇನ್ನೂ ಹತ್ತಿರವಾಗುತ್ತಿತ್ತು. ಅದರೂ ಕಥೆಯ ಓಟಕ್ಕೆ ಧಕ್ಕೆ ಬರಲಿಲ್ಲ. ಕೊನೆಯಲ್ಲಿ ಮಾತ್ರ ಶರವೇಗದಲ್ಲಿ ಮುಂದುವರೆದು ಮುಕ್ತಾಯ ಕಂಡಿದೆ. ಆನೆಯ ಹೆಸರಿನಲ್ಲಿ ನಡೆಯುವ ಕುಕಾರ್ಯಗಳ ವಿವರ ಅನಾವರಣಗೊಳಿಸಿರುವಿರಿ. ಚೆನ್ನಾಗಿದೆ.