ಎಲೆಲೆಲೆ ಎಲೆ - ಹಗಲಲಿ (ದ್ಯುತಿ ಸಂಶ್ಲೇಷಣ ಕ್ರಿಯೆ)

ಎಲೆಲೆಲೆ ಎಲೆ - ಹಗಲಲಿ (ದ್ಯುತಿ ಸಂಶ್ಲೇಷಣ ಕ್ರಿಯೆ)

(ಮಕ್ಕಳಿಗಾಗಿ ಒಂದು ವಿಜ್ಞಾನ ಕವನ)

ಎಲೆಲೆಲೆ ಎಲೆ
ಸಸಿ ಬದುಕಿನ ಜೀವ ಸೆಲೆ
ಮಾಡಿಡುವೆ ಅಡುಗೆ ಹಚ್ಚದೆ ಒಲೆ
ಸೆಳೆದ್ಹಗಲೆಲ್ಲ ಸೂರ್ಯನ ಮೈ ಕಿಚ್ಚಲೆ ||

ನೀ ಮಾಡದೆ ಆಹಾರ
ಸಸಿಗೆಲ್ಲಿದೆ ದಿನ ವ್ಯವಹಾರ
ದ್ಯುತಿ ಸಂಶ್ಲೇಷಣ ಕ್ರಿಯೆಗೆ ಸಪೂರ
ಮೈ ತುಂಬಿ ಸ್ಟಮೋಟ ದ್ವಾರದ ಪೂರ ||

ಬೇರಿಂದ ನೀರ
ಹೀರುತ ಖನಿಜದ ಸಾರ
ಕುಡಿದು ಗಾಳಿ ಇಂಗಾಲದ ಸಾರ
ರವಿ ಬಿಚ್ಚೆ ಕಿರಣ ಸಿದ್ದ ಪಾಕಶಾಲೆ ವ್ಯಾಪಾರ ||

ಹಚ್ಚೇ ಮೂಡಣದೊಲೆ
ಶುರು ಹಚ್ಚುವಳಡಿಗೆಗೆ ಎಲೆ
ಸಿಓಟು ಜತೆಗೆ ನೀರಿಟ್ಟು ಬಿಸಿಗೆ
ಸ್ಟವ್ವಚ್ಚಿದಳೆನ್ನೇ ಬಿಸಿಬಿಸಿ ಸಕ್ಕರೆ ಎಲೆಗೆ ||

ಸಿಹಿ ಸಕ್ಕರೆ ಬಾಲೆ
ಎಲೆ ಬಿಡಿಸುತ ನೀರ್ಹಾಳೆ
ಕಕ್ಕುವಳು ಆಮ್ಲಜನಕದ ಪಾಲೆ
ಪ್ರಾಣಿ ಜಗಕುಣಿಸಿ ಉಸಿರಿನ ಜೀವ ಸೆಲೆ ||

- ನಾಗೇಶ ಮೈಸೂರು

 

Comments

Submitted by nageshamysore Sun, 11/22/2015 - 23:39

In reply to by santhosha shastry

ಶಾಸ್ತ್ರಿಗಳೆ ನಮಸ್ಕಾರ ಮತ್ತು ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ನಾಗೇಶ್ ಹೆಗಡೆಯವರ ಮಟ್ಟದ ವೈಜ್ಞಾನಿಕ ಜ್ಞಾನ ಎಲ್ಲಿ ಬರಬೇಕು ಬಿಡಿ - ಹೀಗೆ ಸಣ್ಣ ಪುಟ್ಟದ್ದೊಂದೆರಡು ಗೀಚಿದ್ದು ಬಿಟ್ರೆ. ಈಗ ಬರೆಯೋದಿರಲಿ ಅದನ್ನ ಕನ್ನಡದಲ್ಲಿ ಓದೊ ವಿದ್ಯಾರ್ಥಿ ಮಕ್ಕಳೆ ಕಮ್ಮಿ ಅಲ್ವಾ ? ಅಪ್ಪಿ ತಪ್ಪಿ ಓದಿದ್ರೆ 'ಸಿದ್ದಾಂತ' ಸ್ವಲ್ಪ ಸಿಂಪಲ್ ಆಗಿ ಅರ್ಥಾ ಆಗ್ಲಿ ಅಂತ ಬರೆದೆ - ಒಂತರ ನಮ್ಮ ಅಡಿಗೆ ಮಾಡಿದ ತರಾನೆ ಅನ್ನೊ ಹಾಗೆ.. ಬೇಕಂತ್ಲೆ ಕೆಲವು ಇಂಗ್ಲೀಷ್ ಪದ ಹಾಗೆ ಉಳಿಸಿಕೊಂಡೆ.

ಇದರ ಪಾರ್ಟ್ 2 ಎಲೆಲೆಲೆ ಎಲೆ - ಇರುಳಲಿ ಅಂತ - ಗಿಡದ ಉಸಿರಾಟದ ಬಗ್ಗೆ ಹೇಳೋದು :-)