ನಗೆಹನಿಗಳು ( ಹೊಸವು ?) - ಎಂಟನೇ ಕಂತು

ನಗೆಹನಿಗಳು ( ಹೊಸವು ?) - ಎಂಟನೇ ಕಂತು

-29-
ಪೊಲೀಸ - ಏನ್ರೀ , ನಿಂ ಹೆಸರು ?
ವ್ಯಕ್ತಿ - ರಮೇಶ್ ಕುಲಕರ್ಣಿ
ಪೊಲೀಸ - ರೀ , ನಿಮ್ಮ ನಿಜವಾದ ಹೆಸರು ಹೇಳಿ.
ವ್ಯಕ್ತಿ - ಸರಿ, ಹಾಗಾದರೆ ಶಿವರಾಮ ಕಾರಂತ ಅಂತಲೇ ಬರಕೊಳ್ಳಿ.
ಪೊಲೀಸ - ಹೀಗೆ ಬನ್ನಿ ದಾರಿಗೆ .ಸುರೇಶ, ರಮೇಶ ಅಂತೆಲ್ಲಾ ಹೇಳಿ ತಪ್ಪಿಸಿಕೊಳ್ಳೋಕೆ ನೋಡ್ತೀರಾ ?
-30-
-ಈ ನಮ್ಮ ಡ್ರೈವರ್ ಅನ್ನು ಕೆಲಸದಿಂದ ತೆಗೆದುಹಾಕಬೇಕು. ಇವತ್ತು ನಾನು ಸಾಯೋದ್ರಿಂದ ಸ್ವಲ್ಪದರಲ್ಲಿ ಪಾರಾದೆ.
-ಅವನಿಗೆ ಇನ್ನೊಂದು ಅವಕಾಶ ಕೊಟ್ಟು ನೋಡಿ.
-31-
-ನಾನು ಜೋಗೇಶ್ವರಿ ಸ್ಟೇಷನ್ ನಲ್ಲಿ ಇಳಿಯಬೇಕು . ಯಾವಾಗ ಇಳಿಯಬೇಕು ಅಂತ ದಯವಿಟ್ಟು ಹೇಳ್ತೀರಾ ?
-ಓಹೋ, ನನ್ನನ್ನು ಗಮನಿಸ್ತಾ ಇರಿ. ನಾನು ಇಳಿಯುವ ಸ್ಟೇಷನ್ ಗಿಂತ ಮುಂಚಿನ ಸ್ಟೇಷನ್ ನಲ್ಲಿ ಇಳಿದುಬಿಡಿ.
-32-
(ರೈಲ್ವೇ ನಿಲ್ದಾಣದಲ್ಲಿ ವಿಚಾರಣೆ )
-ದಾವಣಗೆರೆಗೆ ಮುಂದಿನ ರೈಲು ಯಾವಾಗ?
-12 ಗಂಟೆಗೆ
-ಅದಕ್ಕಿಂತ ಮುಂಚೆ ಯಾವ ರೈಲೂ ಇಲ್ಲವೆ?
-ನಾವು ಮುಂದಿನ ರೈಲಿಗಿಂತ ಮುಂಚಿತವಾಗಿ ಇನ್ನೊಂದು ರೈಲನ್ನು ಎಂದಿಗೂ ಓಡಿಸುವದಿಲ್ಲ.

Rating
No votes yet

Comments

Submitted by shreekant.mishrikoti Mon, 10/03/2016 - 17:50

In reply to by partha1059

ಪಾರ್ಥರೇ , ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನನ್ನ ಕೈಲಾದಷ್ಟು ದಿನ ನನಗೆ ಹೊಸದೆನಿಸಿದ ನಗೆಹನಿಗಳನ್ನು ಅನುವಾದಿಸುತ್ತ ಹೋಗುವೆ.