ಅ: ಮನಸ್ಸಿನ ಹೆಜ್ಜೆಹಿಡಿದು
- ನನ್ನ By: sinchanabhat (Mar 17 2006 - 5:07pm)
- ತುಂಬಾ ತಪ್ಪುಗಳನ್ನು ಮಾಡುತ್ತಿದ್ದೇನೆ.ಹೀಗೇಕೆ? ಅರ್ಥವಾಗುತ್ತಿಲ್ಲ. By: shreekant.mishrikoti (Mar 17 2006 - 5:43pm)
- ತಪ್ಪಾದರೂ ಪರವಾಗಿಲ್ಲ By: tvsrinivas41 (Mar 17 2006 - 5:20pm)
- ಅ: ಮನಸ್ಸಿನ ಹೆಜ್ಜೆಹಿಡಿದು By: mahesh_b_s (Mar 17 2006 - 12:27pm)
- Re: ಅ: ಮನಸ್ಸಿನ ಹೆಜ್ಜೆಹಿಡಿದು By: srivathsajoshi (Mar 17 2006 - 4:21pm)
- Re: 'ರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆ' By: aithalsandy (Apr 5 2006 - 10:28am)
- ಅ: ಮನಸ್ಸಿನ ಹೆಜ್ಜೆಹಿಡಿದು By: mahesh_b_s (Mar 18 2006 - 8:57pm)
- Re: ಅ: ಮನಸ್ಸಿನ ಹೆಜ್ಜೆಹಿಡಿದು By: srivathsajoshi (Mar 17 2006 - 4:21pm)
- ಮನಸು ಹೆಣ್ಣೇ? By: tvsrinivas41 (Mar 17 2006 - 9:41am)
- ಪ್ರಕೃತಿ ಪುರುಷ By: Sunil Jayaprakash (Mar 17 2006 - 10:50am)
- ಮನಸ್ಸು By: ಶ್ರೀನಿಧಿ (Mar 17 2006 - 11:57am)
- ಪ್ರಕೃತಿ ಪುರುಷ By: Sunil Jayaprakash (Mar 17 2006 - 10:50am)

RSS:
ಅ: ಮನಸ್ಸಿನ ಹೆಜ್ಜೆಹಿಡಿದು
TVSರವರ ಸಲಹೆಯಂತೆ,
ನನ್ನ ಹಲವು ಅನಿಸಿಕೆಗಳು. ಎಂದಿನಂತೆ ಅದು ವ್ಯಾಕರಣಕ್ಕೆ ಸಂಬಂಧಿಸಿರುವುವು.
ನನ್ನ ಅನಿಸಿಕೆಯಲ್ಲಿ ತಪ್ಪಿದ್ದರೆ, ಅದನ್ನು ಯಾವ ಶಿಷ್ಟಾಚಾರವಿಲ್ಲದೆ ತಿಳಿಸಿ, ನಾನು ಬೇಸರಪಟ್ಟುಕೊಳ್ಳುವುದಿಲ್ಲ.
ನಾವೆಲ್ಲ ಒಂದು ಎಂದು ತಿಳಿಯೋಣ. ಒಬ್ಬನ್ನೊಬ್ಬರು ತಿದ್ದಿಕೊಳ್ಳೋಣ.
ಇಲ್ಲಿ ಬರೆದಿರುವುದು ಅನಿಸಿಕೆಗಳು, ತಪ್ಪುಗಳ ಪಟ್ಟಿಯಂತು ಅಲ್ಲವೇ ಅಲ್ಲ. ಸರಿಯಾದ ಪದಗಳಿಗೆ ಹೆಚ್ಚಾಗಿ ಅನಿಸಿಕೆಗಳಿರುವುವು.
೧) ಮುಂಜಾವಿನಲಿ = ಇದು ಸಾಮಾನ್ಯವಾಗಿ ಕವನದಲ್ಲಿ ಬಳಕೆಯಾಗುವ ಸ್ವರೂಪ. ಗದ್ಯದಲ್ಲಿ "ಮುಂಜಾವಿನಲ್ಲಿ" ಎಂದರೆ ಪದ್ಯಭಾಷೆಗೆ ಮತ್ತು ಗದ್ಯಭಾಷೆಗೆ ನಮ್ಮ ಕನ್ನಡದಲ್ಲಿ ಪಾರಂಪರಿಕವಾಗಿ ಕಾಪಾಡಿಕೊಂಡು ಬಂದ ವ್ಯತ್ಯಾಸಗಳನ್ನು ಉಳಿಸಿಕೊಂಡು ಹೋಗುವಲ್ಲಿ ಒಂದು ಸಾರ್ಥಕ ಪಯತ್ನವಾಗುವುದು.
ಮತ್ತೊಂದು ವಿಷಯ, "ಬೆಳಗಿನ ಜಾವದಲ್ಲಿ ಹಕ್ಕಿಗಳು ಚಿಲಿಪಿಲಿ ನಾದವನ್ನು ಮಾಡುವುವು", ಇಲ್ಲಿ ಜಾವದಲ್ಲಿ ಎಂದು ಇರುವ ಹಾಗೆ, ಮುಂಜಾವದಲ್ಲಿ ಎಂದು ಇರಬೇಕೆ? ಅಥವಾ ಮುಂಜಾನೆಯಲ್ಲಿ ಇರಬೇಕೆ?
೨)ಅಸ್ಪಷ್ಟತೆ = ಇದರ ಬಗ್ಗೆ ತಿಳಿಯಲು "ಅಪ ಪ್ರಯೋಗಗಳ" ಬಗ್ಗೆ ಚರ್ಚಯನ್ನು ನೋಡಿ.
೩)ವಿಭಿನ್ನತೆ = ೨ರ ಹಾಗೆ
೪)ನೀನೇನಾ? = ಇದು ಆಡುಭಾಷೆಯ ರೂಪ, ಗ್ರಾಂಥಿಕವಾಗಿ "ನೀನೇನು", "ನೀನೆ", "ನೀನೆ ಎನು" ಎಂದು ನನ್ನ ತಿಳಿವಳಿಕೆ.
೫)ನೀನಾಗಿರಲಿಕ್ಕಿಲ್ಲ = ಇದು ಕೂಡ (ಮಂಗಳೂರಿನ)ಆಡುಭಾಷೆಯ ರೂಪ. ಬರವಣಿಗೆಯಲ್ಲಿ "ನೀನಾಗಿರಲು ಸಾಧ್ಯವಿಲ್ಲ", "ನೀನಾಗಿರಲಾರೆ". ನೀನಾಗಿರಲು + ಇಕ್ಕಿಲ್ಲ, ಇಲ್ಲಿ ಇಕ್ಕಿಲ್ಲ ಎಂದರೆ?
೬)ಮಾತುಗಳಲಿ = ೧ರ ಹಾಗೆ
೭)ಅರ್ಥ ಹುಡುಕುವವರು = ಅರ್ಥವನ್ನು ಹುಡುಕುವವರು, ಇದು ಬಹಳ ಸಾಮಾನ್ಯವಾಗಿ ಎಲ್ಲರು (ನಾನು ಕೂಡ ) ಮಾಡುವ ಸಂಗಿತಿ. ದ್ವಿತೀಯ ವಿಭಕ್ತಿಯನ್ನು ಬಿಡುವುದು ಸಮಾನ್ಯ. ಬಿಡದಿದ್ದರೆ ಒಳ್ಳೆಯದು ಎಂದು ನನ್ನ ಅಭಿಪ್ರಾಯ.
೮) ಹೆಣ್ತನ ವಲ್ಲವೆ? = ಹೆಣ್ತನವಲ್ಲವೆ. ವಲ್ಲವೆ ಬೇರೆ ಪದದಂತೆ ತೋರುವುದು.
೯) ಜೀವಂತ ವಾಗಿರುವುದೂ = ೮ರ ಹಾಗೆ
೧೦)ಇದೇ = ಇದೇ ಇದು ಆಡುಭಾಷೆಯ ರೂಪ. ಬರವಣಿಗೆಯ ರೂಪ "ಇದುವೆ".
೧೧) ಬುಜ = ಭುಜ
೧೨) ಬಾವ = ಭಾವ
೧೩) ಚೆಲುವಲಿ = ೧ರ ಹಾಗೆ
೧೪) ತನ್ನುಸಿರ = ತನ್ನುಸಿರಿನ, "ತನ್ನುಸಿರ" ಈ ರೀತಿಯ ಪ್ರಯೋಗಳು "ಚಿನ್ನಾರಿ ಮುತ್ತ" ಚಿತ್ರದ ಗೀತೆಗಳಲ್ಲಿ ಕೇಳಿದ ನೆನಪು
೧೫)ಹಸಿರ = ಹಸಿರಿನ, "ಹಸಿರಿನ ಗಿರಿಗಳ ಸಾಲೆ" ನೆನಪು.
೧೬)ಮನಸು = ಮನಸ್ಸು
೨೦)ಬಾವನೆಗಳು = ಭಾವನೆಗಳು
೨೨)ಮೈಒಡ್ದಿದ = ಮೈಯೊಡ್ಡಿದ
೨೩)ಬುದ್ದಿ = ಬುದ್ಧಿ, ಇಲ್ಲಿ "ಧ"ಒತ್ತು. ಸರಿಯಾಗಿ ಕಾಣುತ್ತಿಲ್ಲ, ತಂತ್ರಾಂಶದ ದೋಷವಿರಬೇಕು.
೨೪)ಬಾವ = ಭಾವ
ಧನ್ಯವಾದ...ಒಂದು ಅಪರೂಪದ ಭಾವನಾಭರಿತ ಲೇಖನಕ್ಕಾಗಿ!!!