ನಿಮ್ಮ ಅನಿಸಿಕೆಗಳು...!!!
- ಪ್ರಿಯ ಶತ್ರು By: muralihr (Mar 20 2006 - 10:32pm)
- ಉ: ಕೈಯ್ಯಲ್ಲಿನ ಜಗತ್ತು By: mahesh_b_s (Mar 20 2006 - 12:50pm)
- ನಿಮ್ಮ ಅನಿಸಿಕೆಗಳು...!!! By: svbhat (Mar 20 2006 - 10:25pm)
- ಉ: ನಿಮ್ಮ ಅನಿಸಿಕೆಗಳು...!!! By: Sunil Jayaprakash (Mar 20 2006 - 10:48pm)
- ಕೆಲ ಸೂಚನೆ By: shreekant.mishrikoti (Mar 20 2006 - 1:36pm)
- Re: ಕೆಲ ಸೂಚನೆ By: mahesh_b_s (Mar 20 2006 - 2:16pm)
- ನಿಮ್ಮ ಅನಿಸಿಕೆಗಳು...!!! By: svbhat (Mar 20 2006 - 10:25pm)


RSS:
ನಿಮ್ಮ ಅನಿಸಿಕೆಗಳು...!!!
ನಿಮ್ಮ ಅನಿಸಿಕೆಗಳು ಮತ್ತು ಕಾಳಜಿ ಸ್ವಾಗತಾರ್ಹವೆ..ಆದರೆ ಈ ಲೇಖನಕ್ಕಿಂತ ಉದ್ದವಾಗಿರುವ ನಿಮ್ಮ ಆಕ್ಷೇಪಣೆಯ..ತಿದ್ದುಪಡಿಯ ಪಟ್ಟಿ ನನಗೇಕೊ ಸರಿಯೆನಿಸುತ್ತಿಲ್ಲ..
ನೀವು ಲೇಖಕರಿಗೆ ಭಾಷೆಯ ಮೂಲಾಭ್ಯಾಸ ಮಾಡಿಸುತ್ತಿದ್ದೀರೇನೊ ಅನ್ನಿಸುತ್ತಿದೆ...ಇದು ಹೀಗೇ ಇನ್ನೆರಡು ಸಾರಿ ಮುಂದುವರಿದರೆ ಅವರು ಬರೆಯುವುದನ್ನೇ ನಿಲ್ಲಿಸಿದರೂ ಆಶ್ಚರ್ಯವಿಲ್ಲ(ಇಲ್ಲಿ ನನಗೆ ನೀವು ಆಶ್ಚರ್ಯ+ಇಲ್ಲ ಎಂದು ತಿದ್ದುವುದಿಲ್ಲವೆಂದುಕೊಳ್ಳುತ್ತೇನೆ).ಕೂಸಿಗೆ ಹೊಲಿಸಿದ ಕುಲಾವಿ ಒಂದು ಸ್ವಲ್ಪ ದೊಡ್ಡದಿದ್ದರೆ ಕೂಸು ಅದನ್ನು ಹಾಕಿಕೊಳ್ಳಬಹುದು.ಆದರೆ ಕೂಸೇ ಮುಳುಗಿಹೋಗುವಂತಹ ಕುಲಾವಿಯನ್ನು ಹೊಲಿಸಿ ಪ್ರಯೋಜನವೇನು...???? ನೋಡುವವರಿಗೂ ಆಗ ಕುಲಾವಿಯೇ ಕಾಣಿಸುತ್ತದೆ..ಕೂಸಿನ ಅಸ್ತಿತ್ವವನ್ನೇ ಮರೆ ಮಾಡುವ ಕುಲಾವಿ ಹೊಲಿಸುವುದು ನಿಮಗೆ ಸರಿಯೆನಿಸುತ್ತದೆಯೇ..???
ಒಂದು ಭಾಷೆ ಉಳಿಸಿ ಬೆಳೆಸಲು ನಮಗೆ ಅದನ್ನು ಪ್ರೀತಿಸುವ ಪೋಷಿಸುವ ಉಳಿಸಿ ಬೆಳೆಸುವ
ಸಾಹಿತ್ಯಾಸಕ್ತರ ಅವಶ್ಯಕತೆಯಿದೆ. ಸಾಹಿತ್ಯವೆಂದರೆ ಅತಿ ಶುದ್ಧವೆನಿಸುವ ಭಾಷೆಯಲ್ಲಿ ನಮ್ಮ ಭಾವನೆಗಳನ್ನು ತಿಳಿಸುವುದು ಮಾತ್ರವೇ..?? ಆಡು ಭಾಷೆಗೆ ಅಲ್ಲಿ ಸ್ಥಾನವಿಲ್ಲವೇ..?? ಜಗತ್ತಿನ ಜೊತೆ ಜೊತೆಗೆ ನಾವೂ ಸಾಹಿತ್ಯಕ್ಕೆ ತಕ್ಕದಾಗಿ ಭಾಷೆಯ ಸಮರ್ಪಕ ಪ್ರಯೋಗಗಳ ಕಡೆ ಹೆಚ್ಚು ಗಮನ ಹರಿಸಿದರೆ ಒಳ್ಳೆಯದಲ್ಲವೇ.. ಭಾಷೆಯೆನ್ನುವುದು ಸಮರ್ಪಕ ಸಂವಹನಕ್ಕಾಗಿ ನಾವೆ ಕಂಡುಕೊಂಡಿರುವ ಸಾಧನವಲ್ಲವೇ? ಅರ್ಥಾಭಾಸವಾಗದಂತೆ ಪದಗಳ ಸಮರ್ಪಕ ಬಳಕೆ ತಪ್ಪೇ..???ಹಳೆಗನ್ನಡಕ್ಕೂ ನಾವೀಗ ಬಳಸುತ್ತಿರುವ ಕನ್ನಡಕ್ಕೂ ಎಷ್ಟು ವ್ಯತ್ಯಾಸವಿದೆಯಲ್ಲವೇ..???ಆ ವ್ಯತ್ಯಾಸ ತಾನಾಗೇ ಹುಟ್ಟಿಕೊಂಡಿತೇ..? ಹೆಚ್ಚೆಚ್ಚು ಜನರಿಗೆ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುವಂತೆ ಆಕರ್ಷಕವಾಗಿ ವಿಷಯವನ್ನು ತಿಳಿಸುವುದು ೧೦೦% ಶುದ್ಧ ವ್ಯಾಕರಣಕ್ಕಿಂತಲೂ ಮುಖ್ಯವಲ್ಲವೇ..???
ನೀವು ತಿದ್ದುವ ಸ್ವರ ದೋಷಗಳು ಪ್ರಸ್ತುತವೆನಿಸಿದರೂ ಉಳಿದ ಸಂಧಿ ಸಮಾಸಗಳ ಪ್ರಸ್ತಾಪವೇಕೊ ಸರಿಯೆನಿಸಲಿಲ್ಲ.ಸಿಂಚನಾಅವರೂ ಹೆಚ್ಚು ಕಾಳಜಿಯಿಂದ ತಮ್ಮ ಟೈಪೊ ತಪ್ಪುಗಳನ್ನು ತಿದ್ದಿ ಲೇಖನಗಳನ್ನು ಸೇರಿಸಿದರೆ ಚನ್ನಾಗಿರುತ್ತದೆ.