ಅ: ಲೇಸು ಶುನಕದ ಜನ್ಮ
- ಅ: ಲೇಸು ಶುನಕದ ಜನ್ಮ By: mahesh_b_s (Mar 22 2006 - 9:47am)
- ಟೀಕೆಗಳನ್ನೆದುರಿಸಬೇಕಲ್ಲವೇ By: ಶ್ರೀಶಕಾರಂತ (Mar 22 2006 - 10:35am)
- ಧ: ಟೀಕೆಗಳನ್ನೆದುರಿಸಬೇಕಲ್ಲವೇ By: mahesh_b_s (Mar 22 2006 - 10:46am)
- ಟೀಕೆಗಳನ್ನೆದುರಿಸಬೇಕಲ್ಲವೇ By: ಶ್ರೀಶಕಾರಂತ (Mar 22 2006 - 10:35am)
- ಉತ್ತಮ ಚಿಂತನೆ By: tvsrinivas41 (Mar 22 2006 - 9:42am)
- ಸ್ವಾಮೀ ದಯವಿಟ್ಟು ಕ್ಷಮಿಸಿ By: (Mar 22 2006 - 10:18am)
- ಹೊಟ್ಟೆಉರಿ By: tvsrinivas41 (Mar 22 2006 - 10:56am)
- ಸ್ವಾಮೀ ದಯವಿಟ್ಟು ಕ್ಷಮಿಸಿ By: (Mar 22 2006 - 10:18am)


RSS:
ಅ: ಲೇಸು ಶುನಕದ ಜನ್ಮ
ಎನು ಸ್ವಾಮಿ ಯೋಚಿಸುವುದೆ ಬೇಡವೆ? ಯೋಚಿಸುವುದಕ್ಕಿಂತ ನಾಯಿಜನುಮವು ಲೇಸೆನ್ನುವಿರಲ್ಲ.
ಮನುಷ್ಯನು ತನ್ನ ಯೋಚನಾಸಮರ್ಥ್ಯದಿಂದಲೆ ವಿಭಿನ್ನನು, ಉತ್ತಮನು ಆದದ್ದಲ್ಲವೆ?
ಮತ್ತು ಮೊದಲೆರಡು ಸಾಲುಗಳಲ್ಲಿ "ದೇವರು ಬಾಳನ್ನು ತಿಳಿಯಬೇಕೆಂದು, ಬುದ್ಧಿಶಕ್ತಿಯನ್ನು ಕೊಟ್ಟು ನಮ್ಮನ್ನು ಇಲ್ಲಿಗೆ ಕಳುಹಿಸಿರುವನು" ಎಂದು ಹೇಳಿರುವಿರಿ. ಚಿಂತನೆಮಾಡದೆ, ಯೋಚಿಸದೆ ಹೋದರೆ, ಆ ದೇವದತ್ತ-ಧೀಶಕ್ತಿಯು ವ್ಯರ್ಥವಾಗುವುದಿಲ್ಲವೆ?
ನನಗೆ ಮೊದಲೆರಡು ಸಾಲುಗಳರ್ಥಕ್ಕು, ಕೊನೆಯೆರಡು ಸಾಲುಗಳರ್ಥಕ್ಕು ಅರ್ಥವಿರೋಧವಿರುವಂತೆ ತೋರುತ್ತಿದೆ.
ಹಿಂದೆ ನಾನು ಎರಡನೆ ಪಪೂತ(ಪದವಿ ಪೂರ್ವ ತರಗತಿ)ದಲ್ಲಿ, ಸಂಸ್ಕೃತದಲ್ಲಿ, "ಭೂ ಕೈಲಾಸ"ವೆಂಬ ನಾಟಕದಲ್ಲಿ, ನಾರದನು ರಾವಣನಿಗೆ ಹೇಳಿದ "ದೋಷೈಕದೃಷ್ಟಿಃ ಖಳರಾವಣಃ ತ್ವಂ" ಎಂದು ಓದಿದ ನೆನಪು. ಹಾಗೆಂದರೆ, ರಾವಣನಿಗೆ ಬರಿ ದೋಷಗಳೆ ಕಾಣುವುದೆಂದು ಅರ್ಥ. ನಾನು ಹೇಗೆಂದು ಭಾವಿಸದಿರಿ.
--
ಇನ್ನೊಂದು ರೀತಿ ನೀವು ಹೇಳಿರುವುದು ಸರಿ. ಸುಮ್ಮನೆ ಇಲ್ಲದ ವಿಚಾರಗಳನ್ನು ಯೋಚಿಸಿ ನಾವೇಕೆ ತೆಲೆಕೆಡಿಸಿಕೊಳ್ಳಬೇಕೆಂದು.
ಸ್ವಾಮಿ....
ಕೊನೆಸಾಲಿನಲ್ಲಿ "ಬಾಳ" ಅನ್ನುವ ಬದಲು "ಬಾಳು" ಎನ್ನಿರಿ ಚೆನ್ನಾಗಿರುತ್ತದೆ.
ಲೇಖನ ಚಿಹ್ನೆಗಳನ್ನು ಪದ್ಯದಲ್ಲಿ ಬಳಸಬಹುದಲ್ಲವೆ. ಇವನ್ನು ಹೆಚ್ಚು ಬಳಸಿದರೆ ಓದುವುದು ಸುಲಭವಾಗುವುದು. ಇದು ಕೇವಲ ಅಭಿಪ್ರಾಯ, ಆಕ್ಷೇಪಣೆಯಲ್ಲ.
ಉದಾ:
ಧೀಶಕ್ತಿಯನು ನೀಡಿ, ತಳ್ಳಿಹನು ದೇವ,
ಬಾಳಮಹಿಮೆಯನರಿವ ಕೂಪದಲಿ .
ಲೇಸು ಶುನಕದ ಜನ್ಮ , ಮತಿಯಿರದು ಚಿಂತಿಸಲು.
ಸುಖದಿ ಜೀವಿಪುದು ಬಾಳು, ಪಂಡಿತಪುತ್ರ.
| ಮತ್ತು || ಸಂಸ್ಕೃತದ ಲೇಖನಚಿಹ್ನೆಗಳು. ಆದರೆ ಕನ್ನಡದಲ್ಲಿಯು ಬಳಕೆಗೆ ಬಂದುಬಿಟ್ಟಿದೆ.