Re: ಸಮಸ್ಯೆಗೆ ಉತ್ತರ
- ಸಮಸ್ಯೆಗೆ ಉತ್ತರ By: pavanaja (Mar 22 2006 - 5:56pm)
- ಉ: ಸಮಸ್ಯೆಗೆ ಉತ್ತರ By: mahesh_b_s (Mar 22 2006 - 6:11pm)
- Re: ಸಮಸ್ಯೆಗೆ ಉತ್ತರ By: pavanaja (Mar 22 2006 - 8:14pm)
- Re: ಸಮಸ್ಯೆಗೆ ಉತ್ತರ By: srivathsajoshi (Mar 23 2006 - 1:14am)
- ಅರ್ಥಚಮತ್ಕಾರದ ಸಮಸ್ಯೆಗಳು... By: mahesh_b_s (Mar 22 2006 - 8:50pm)
- Re: ಸಮಸ್ಯೆಗೆ ಉತ್ತರ By: pavanaja (Mar 22 2006 - 8:14pm)
- ಉ: ಸಮಸ್ಯೆಗೆ ಉತ್ತರ By: mahesh_b_s (Mar 22 2006 - 6:11pm)

RSS:
Re: ಸಮಸ್ಯೆಗೆ ಉತ್ತರ
ಉದ್ಧರಿಸಿದ್ದು. ನಾನು 1995-96ರಲ್ಲಿ ತೈವಾನಿನಲ್ಲಿ ಇದ್ದಾಗ, ಇಡೀ ತೈವಾನಿನಲ್ಲಿ ಕನ್ನಡ ಮಾತನಾಡುವವ ನಾನೊಬ್ಬನೇ ಇದ್ದದ್ದು. ಆ ಸಮಯದಲ್ಲಿ soc.culture.inddian.karnataka (SCIK) ಮೂಲಕ ಹಲವು ಕನ್ನಡಿಗರ ಪರಿಚಯ ಮಾಡಿಕೊಂಡಿದ್ದೆ. ಈ SCIKನಲ್ಲಿ ಈಗ ಸಂಪದದಲ್ಲಿ ನಡೆಯುವ ರೀತಿಯಲ್ಲೇ ಚರ್ಚೆಗಳು ನಡೆಯುತ್ತಿದ್ದವು. ಆದರೆ ಲಿಪಿ ಇಂಗ್ಲೀಷ್. ದಿನೇಶ್ ನೆಟ್ಟಾರ್ ಎಂಬವರು ಇದೇ ಸಮಸ್ಯೆಯನ್ನು ಅಲ್ಲಿ ಪೋಸ್ಟಿಸಿದಾಗ ನಾನು ಅದನ್ನು ಪರಿಹರಿಸಿದ್ದೆ (ಸ್ವಲ್ಪ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುತ್ತಿದ್ದೇನೆ
). ಈಗಲೂ ಗೂಗ್ಲ್‌ನ ಸಂಚಯದಲ್ಲಿ ಈ ಸಮಸ್ಯೆ-ಉತ್ತರದ ಸರಪಳಿ ಓದಬಹುದು. ನನಗೆ ಆಗ ಹೊಳ್ಳ ಎಂಬವರು ಪಂಡಿತ ಎಂಬ ಬಿರುದಿತ್ತಿದ್ದರು. ಈಗ ಹೊಳ್ಳ, ದಿನೇಶ್ ಎಲ್ಲಿದ್ದಾರೊ ಗೊತ್ತಿಲ್ಲ.
ದಿನೇಶ್ ನೆಟ್ಟಾರ್ ಬಗ್ಗೆ ಇನ್ನಷ್ಟು: ಗೂಗ್ಲ್‌ನಲ್ಲಿ dinesh nettar ಎಂದು ಹುಡುಕಿ ನೋಡಿ. ತುಂಬ ಸ್ವಾರಸ್ಯಕರವಾದ ಒಂದು ಹಾಸ್ಯ ಲೇಖನ ಸಿಗುತ್ತದೆ. ಅದನ್ನು ಓದಿ ಹೊಟ್ಟೆ ಹುಣ್ಣಾಗುವಂತೆ ನಕ್ಕರೆ ನಾನು ಹೊಣೆಯಲ್ಲ.
ಸಿಗೋಣ,
ಪವನಜ