ಉ: ಕನ್ನಡಕ್ಕೆ ದಿಕ್ಕಿಲ್ಲವೆ?!!
- ಉ: ಕನ್ನಡಕ್ಕೆ ದಿಕ್ಕಿಲ್ಲವೆ?!! By: kannadakanda (Jun 14 2008 - 11:41am)
- ಉ: ಕನ್ನಡಕ್ಕೆ ದಿಕ್ಕಿಲ್ಲವೆ?!! By: vikashegde (Sep 26 2007 - 2:15pm)
- ಉ: ಕನ್ನಡಕ್ಕೆ ದಿಕ್ಕಿಲ್ಲವೆ?!! By: mahesha (Sep 25 2007 - 10:54pm)
- ಉ: ಕನ್ನಡಕ್ಕೆ ದಿಕ್ಕಿಲ್ಲವೆ?!! By: Khavi (Sep 26 2007 - 2:07pm)
- ಉ: ಕನ್ನಡಕ್ಕೆ ದಿಕ್ಕಿಲ್ಲವೆ?!! By: mahesha (Sep 26 2007 - 3:51pm)
- ಉ: ಕನ್ನಡಕ್ಕೆ ದಿಕ್ಕಿಲ್ಲವೆ?!! By: kannadakanda (Jun 14 2008 - 4:08pm)
- ಉ: ಕನ್ನಡಕ್ಕೆ ದಿಕ್ಕಿಲ್ಲವೆ?!! By: kannadakanda (Jun 14 2008 - 4:27pm)
- ಉ: ಕನ್ನಡಕ್ಕೆ ದಿಕ್ಕಿಲ್ಲವೆ?!! By: kannadakanda (Jun 16 2008 - 4:49pm)
- ಉ: ಕನ್ನಡಕ್ಕೆ ದಿಕ್ಕಿಲ್ಲವೆ?!! By: kannadakanda (Jun 16 2008 - 4:58pm)
- ಉ: ಕನ್ನಡಕ್ಕೆ ದಿಕ್ಕಿಲ್ಲವೆ?!! By: vikashegde (Jun 16 2008 - 4:54pm)
- ಉ: ಕನ್ನಡಕ್ಕೆ ದಿಕ್ಕಿಲ್ಲವೆ?!! By: kannadakanda (Jun 16 2008 - 4:49pm)
- ಉ: ಕನ್ನಡಕ್ಕೆ ದಿಕ್ಕಿಲ್ಲವೆ?!! By: kannadakanda (Jun 14 2008 - 4:27pm)
- ಉ: ಕನ್ನಡಕ್ಕೆ ದಿಕ್ಕಿಲ್ಲವೆ?!! By: kannadakanda (Jun 14 2008 - 4:08pm)
- ಉ: ಕನ್ನಡಕ್ಕೆ ದಿಕ್ಕಿಲ್ಲವೆ?!! By: mahesha (Sep 26 2007 - 3:51pm)
- ಉ: ಕನ್ನಡಕ್ಕೆ ದಿಕ್ಕಿಲ್ಲವೆ?!! By: Khavi (Sep 26 2007 - 2:07pm)

RSS:
ಉ: ಕನ್ನಡಕ್ಕೆ ದಿಕ್ಕಿಲ್ಲವೆ?!!
ಇವೆಲ್ಲ ಸಂಸ್ಕೃತದ ಶಬ್ದಗಳು. ಅವರಲ್ಲೂ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ದಿಕ್ಕುಗಳಿಗೆ ಮಾತ್ರ ಹೆಸರಿಟ್ಟರು. ಸೂರ್ಯೋದಯದ ಕಾಲಕ್ಕೆ ಪೂರ್ವಕ್ಕೆದುರಾದಾಗ ಎದುರಿಗಿರುವುದು(ಮುಂದಿರುವುದು=ಪೂರ್ವ, ಪಶ್ಚಾತ್=ಹಿಂದಿರುವುದು ಪಶ್ಚಿಮ, ಬಲಕ್ಕಿರುವುದು ದಕ್ಷಿಣ ಹಾಗೆಯೇ ಎಡಕ್ಕಿರುವುದು ಉತ್ತರ. ಗಮನಿಸಿ ಬೆಳಗ್ಗೆ ಸೂರ್ಯೋದಯಕ್ಕೆ ಪೂರ್ವಕ್ಕಭಿಮುಖವಾಗಿ ನಿಂತಾಗ ಮಾತ್ರವಿದು). ಉೞಿದ ದಿಕ್ಕುಗಳಿಗೆ ಹೆಸರಿಸುವುದು ಹೇಗೆ. ಸಂಸ್ಕೃತದವರು ಇದ್ದ ಹೆಸರುಗಳಲ್ಲೇ ಹೊಸ ಹೆಸರುಗಳನ್ನು ಸೃಷ್ಟಿಸಿಕೊಳ್ಳುವುದಱಲ್ಲಿ ನಿಪುಣರು. ಉೞಿದ ನಾಲ್ಕು ವಿದಿಕ್ಕುಗಳಿಗೆ (ಮಧ್ಯದ ದಿಕ್ಕುಗಳಿಗೆ) ಹೆಸರಿಡಲು ಕಂಡುಕೊಂಡ ಮಾರ್ಗ ಆ ದಿಕ್ಕುಗಳ ದಿಕ್ಪಾಲಕರ ಹೆಸರನ್ನು ಬೞಸಿರುವುದು, ಆಗ್ನೇಯ (ಅಗ್ನಿಗೆ ಸಂಬಂಧಿಸಿದ್ದು, ಪೂರ್ವ ದಕ್ಷಿಣದಿಕ್ಕಿನ ನಡುವಣ ದಿಕ್ಕು) ನೈಋತ್ಯ(ನಿಋತಿಗೆ, ಪಶ್ಚಿಮ ದಕ್ಷಿಣ ದಿಕ್ಕುಗಳ ನಡುವೆ), ವಾಯವ್ಯ(ವಾಯು, ಪಶ್ಚಿಮ ಮತ್ತು ಉತ್ತರ) ಹಾಗೂ ಈಶಾನ್ಯ(ಈಶಾನ=ಈಶ್ವರ, ಪೂರ್ವ ಮತ್ತು ಉತ್ತರದ ನಡುವೆ). ನಮ್ಮವರಿಗೆ(ತೆನ್ನುಡಿಗರಿಗೆ) ಈ ಪುರಾಣಗಳು ಗೊತ್ತಿಲ್ಲವಲ್ಲ. ಹಾಗಾಗಿ ಅವರಿಗೆ ನೇಸಱು ಮೂಡುವ ದಿಕ್ಕು, ಪಡುವ (ಮಲಗುವ) ದಿಕ್ಕು ಬಲ(ತೆಂಕಣ=ದಕ್ಷಿಣ), ಬಡಗಣ(ಎಡ=ಉತ್ತರ) ಇಷ್ಟೇ ಗೊತ್ತಿರುವುದು.