~
ಉ: ಹಾವೇರಿಯಲ್ಲಿ ನಡೆದಿದ್ದು ಏನು?
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: shashikannada (Jun 23 2008 - 2:49pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: shivannakc (Jun 14 2008 - 4:31pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 29 2008 - 5:00pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 2:37pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Rajeshwari (Jun 13 2008 - 10:37pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 29 2008 - 5:04pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: muralihr (Jun 15 2008 - 3:01pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 5:36pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 2:44pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: yuvapremi (Jun 13 2008 - 4:55pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 29 2008 - 4:56pm)
- ಉ: ಹಾವೇರಿಯಲ್ಲಿ ನಡೆದಿದ್ದು ಏನು? By: Chamaraj (Jun 15 2008 - 2:45pm)

RSS:
ಉ: ಹಾವೇರಿಯಲ್ಲಿ ನಡೆದಿದ್ದು ಏನು?
ಗುಜರಾತ್ ಹಾಗೂ ಮೋದಿಯವರ ಬಗ್ಗೆ ಇರುವ ತಪ್ಪು ಅಭಿಪ್ರಾಯದಲ್ಲಿ ಮಾಧ್ಯಮಗಳ ಪಾತ್ರವೂ ದೊಡ್ಡದು. ಎಲ್ಲ ಕಡೆ ಇರುವಂತೆ ಮಾಧ್ಯಮದಲ್ಲೂ ದಡ್ಡರಿದ್ದಾರೆ, ಸಣ್ಣತನದ ಜನರಿದ್ದಾರೆ, ದುಷ್ಟರಿದ್ದಾರೆ, ಪಕ್ಷಪಾತಿಗಳಿದ್ದಾರೆ. ಅಧ್ಯಯನಶೀಲತೆ ಹಾಗೂ ವಾಸ್ತವ ಪ್ರಜ್ಞೆಯನ್ನು ಕಳೆದುಕೊಂಡ ಜನ ತಪ್ಪು ಸಂಗತಿಗಳನ್ನು ಬಿತ್ತರಿಸುತ್ತ ಹೋಗುತ್ತಾರೆ. ಅದಕ್ಕೆ ತಕ್ಕಂತೆ, ಎಡಪಂಥೀಯರ ಕುಮ್ಮಕ್ಕು. ಇದೆಲ್ಲ ಸೇರಿಕೊಂಡು ಮೋದಿ ಹಾಗೂ ಗುಜರಾತ್ ಬಗ್ಗೆ ನಮ್ಮಲ್ಲಿ ತಪ್ಪು ಅಭಿಪ್ರಾಯಗಳು ತುಂಬಿಕೊಂಡಿವೆ.
ಗುಜರಾತ್ ಹಿಂಸಾಚಾರದಲ್ಲಿ ಮೋದಿಯ ನೇರ ಪಾತ್ರ ಇದೆ. ಅದರಲ್ಲಿ ಅನುಮಾನವೇ ಇಲ್ಲ. ಅದನ್ನು ಸಮರ್ಥಿಸುವುದು ಸಾಧ್ಯವೂ ಇಲ್ಲ. ಆದರೆ, ಅದೊಂದೇ ಎಲ್ಲ ಅಭಿಪ್ರಾಯ ಹಾಗೂ ಬೆಳವಣಿಗೆಗೆ ಮಾನದಂಡವಾದರೆ ಹೇಗೆ? ಖಂಡಿಸುವಂಥದು ಇದ್ದಾಗ ಖಂಡಿಸೋಣ. ಆದರೆ, ಪ್ರಗತಿಪರ ಅಂಶಗಳನ್ನು ಬೆಂಬಲಿಸೋಣ. ಈ ವ್ಯತ್ಯಾಸ ಇಲ್ಲದಿದ್ದರೆ, ನಮಗೂ ಅತಿರೇಕಿಗಳಿಗೂ ಏನೂ ವ್ಯತ್ಯಾಸ ಇರುವುದಿಲ್ಲ. ಅಲ್ಲವೆ?
- ಚಾಮರಾಜ ಸವಡಿ