~
ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ
- ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ By: ಕೇವೆಂ (Jun 17 2008 - 1:05am)
- ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ By: mahesha (Jun 17 2008 - 3:01pm)
- ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ By: ವೈಭವ (Jun 17 2008 - 4:18pm)
- ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ By: kannadakanda (Jun 17 2008 - 4:07pm)
- ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ By: mahesha (Jun 17 2008 - 3:01pm)

RSS:
ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ
ವೆಂಕಟೇಶರೇ ತುಳಿಲು,
ಬರೀ ಇಲ್ಲಿ ನಾನು ಮುಂದಿಟ್ಟಿರುವ ಸಂಗತಿಯ ಬಗ್ಗೆ ನಿಮ್ಮ ಕಮೆಂಟಿಗೆ ನನ್ನ ಕಮೆಂಟು. ಮಿಕ್ಕ ಸಂಗತಿ ಬೇರೆಡೆ ಚರಚೆಯಾಗಲಿ.
"ಆದರೆ ಇರುವ ಅಕ್ಕರಗಳನ್ನು ತೆಗೆಯಲು ಅಲ್ಲ.ನೀವು ಕನ್ನಡದಲ್ಲಿ "ಷ" ಉಲಿಕೆ ಇದೆ ಅಂತ ಒಪ್ಪಿಕೊಳ್ತೀರಿ. ಅದು "ಟ" ವರ್ಗದಿಂದಲೋ ಇಲ್ವೋ ಎಂಬ ಮಾತು ಬೇರೆ.ಅದ್ರಿಂದ ತೆಗೆಯೋದು ತಪ್ಪು ಅಂತ ನನ್ನ ವಾದ."
ಇಶ್ಟೇ ಈಗಿನ ಚರಚೆಯ ವಿಶಯಕ್ಕೆ ನಂಟಾದ ಮಾತು.
ಒಂದು ಗುಡಿಯಲ್ಲಿ ’ವಿಷೇಶ ಸೂಚನೆ’ ಅಂತ ಬರೆದಿದ್ದಾರೆ. ಅದರ ಪೋಟೊ ನಂನ ಬಳಿ ಇದೆ.
ಎಲ್ಲಿ ಶ ಮತ್ತು ಎಲ್ಲಿ ಷ ಬರಬೇಕು ಎಂದು ಹೆಲಗನ್ನಡಿಗರಿಗೆ ತಿಳಿಯುವುದೇ ಇಲ್ಲ, ಏಕೆಂದರೆ ಅವರ ಉಲಿಕೆಯಲ್ಲಿ ಇವರೆಡರ ನಡುವೆ ಬೇರೆತನವೇ ಇಲ್ಲ..
ನೀವೇ ಒಂದೆಡೆ ಒಪ್ಪಿರುವಂತೆ ಬರೀ ಟಕಾರದ ಮುಂಬರುವ ’ಶ’ಕಾರವೇ ’ಷ’ ಆಗಿರುವುದು ಕನ್ನಡದಲ್ಲಿ ಎಂದ ಮೇಲೆ...
ವಿಶಯ, ವಿಶೇಶ, ಶೇಶ, ಲಕ್ಶಿ, ಕ್ಶೇಮ, ಶಣ್ಮುಕ ಇವೆಲ್ಲ ಕನ್ನಡದ ಉಲಿಕೆಯಂತೆ ಸರಿಯೇ.. ಆದರೆ ಅವನ್ನು ತಪ್ಪೆಂದೇ ಹೇಳಿವಿರಿ ತಾನೆ?
ಹಲವರು ಬಹುಷಃ ಎಂದು, ಅಂಬರೀಶ್ ಎಂದೇ ಬರೆಯುವುದು.. ಕಂನಡದಲ್ಲಿ ಇದು ಬೇಡವಾದ ಗೊಂದಲ. ಈ ಗೊಂದಲವನ್ನು ತೆಗೆದು ಹಾಕಲೆಂದೇ ಶಂಕರಬಟ್ಟರು ಶ/ಷಕಾರಗಳಿಗೆ ಒಂದೇ ಗುರುತಾಗಿ ’ಶ’ಬಳಕೆಯನ್ನು ಸೋಚಿಸಿದ್ದು. ಈ ಚರಚೆಯ ಮಾತು ಅಶ್ಟೆಕ್ಕೇ ಇದೆ.
ಇನ್ನು ಮಹಾಪ್ರಾಣ/ಅಲ್ಪಪ್ರಾಣಗಳ ಬಗ್ಗೆ.. ಇವೂ ಕೂಡ ಹಲಗನ್ನಡಿಗರಿಗೆ ಗೊಂದಲ, ವಿಧ್ಯಾರಣ್ಯಪುರ, ಹಾರ್ಧಿಕ ಶುಭಾಷಯ, ಗರ್ಬಗುಡಿ, ಬೇಧ ಇವೆಲ್ಲ ಹೆಚ್ಚೆಚ್ಚು ಮಂದಿ ಮಾಡುತ್ತಿರುವ ತಪ್ಪುಗಳು. ಕನ್ನಡದ ಉಲಿಕೆಯಲ್ಲಿ ಮಹಾಪ್ರಾಣಗಳೇ ಇಲ್ಲ ಎಂದು ಎಲ್ಲ ನುಡಿಬಲ್ಲರು ಒಪ್ಪುವರು.
ನಿಮ್ಮದೇ ಮಾತಿನಲ್ಲಿ ’ತದ್ವವೀಕರಣ’ವಾದರೆ ಎಲ್ಲ ಮಾಪ್ರಾಣಗಳು ಅಲ್ಪಪ್ರಾಣಗಳಾಗುವುದು ನಿಕ್ಕುವ... ಹೀಗಿರುವಾಗ ’ಕ’ಗುರುತನ್ನು, ಕ/ಖ ಎರಡು ಉಲಿಕೆಗಳಿಗೂ ಬಳಸರಿದೆ ತಪ್ಪಿಲ್ಲ ಎಂಬುದೇ ಇಲ್ಲಿನ ಮಾತು.
ಇನ್ನು
ಹೇರಳ ಸಕ್ಕದವಿದ್ದರೆ ಶಿಶ್ಟವೋ.. ಹೆಚ್ಚೆಚ್ಚು ಕನ್ನಡದ್ದೇ ಆದ ಒರೆಗಳ ಬಳಕೆ ಮಾಡಿ, ಆಗ ತನ್ತಾನೇ ಷ, ಶ, ಮಹಾಪ್ರಾಣಗಳು ಕಣ್ಮರೆಯಾಗುವುವು.....
ನಮ್ಮ ಕನ್ನಡದಲ್ಲಿ ಇರುವ ಎಲ್ಲು ಉಲಿಕೆ+ಬರವಣಿಗೆ ಗೊಂದಲಕ್ಕೂ ಈ ’ಶಿಶ್ಟ’ವೆಂಬ ಹೇರಳ ತದ್ಬವ ಮಾಡದೇ ಸಂಸ್ಕೃತಬೆರೆಸುವಿಕೆಯೇ ಕಾರಣ. ಇದನ್ನು ನೀವು ಒಪ್ಪಿರುವಿರಿ.
ಕೊನೆಯ ಮಾತು
ಶಂಕರಬಟ್ಟರಾಗಲಿ, ನಾನಾಗಲಿ ನಿಮ್ಮೊಬ್ಬರಿಗೋಸುಗ ಬರೆದುದಲ್ಲ.. ನೀವು ಬರಹ ಕಲಿತ, ಸಂಸ್ಕೃತ ಕಲಿತ, ಹಲನುಡಿಬಲ್ಲರು/ಬಹುಬಾಶಾಜ್ನಾನಿ. ನಿಮಗೆ ಹೊಂದಿಕೆ ಆಗದಿದ್ದರೂ ನಡೆಯುವುದು..
ಮಿಕ್ಕ ಕಮೆಂಟಂಶಗಳಿಗೆ....
ಶಂಕರಬಟ್ಟರು ತಮ್ಮ ಮುನ್ನುಡಿಗಳಲ್ಲೇ ತಿಳಿಯಾಗಿ ಹೇಳಿರುವಂತೆ ಬರೀ ಕನ್ನಡವೊಂದೇ ತಿಳಿದಿರುವ ಏನು ಕೆಳಮಟ್ಟದವರೆಂದು ಕರೆಸಿಕೊಳ್ಳುವ ಬಹುಸಂಕ್ಯಾತ ಕನ್ನಡಿಗರಿಗೆ ಇರುವ ತೊಂದರೆಯನ್ನು ಮತ್ತು ಅದಕ್ಕೆ ಪರಿಹಾರವನ್ನು ಬರೆದಿದ್ದಾರೆ. ಅವರ ನಿಲುವನ್ನು ಜಾರಿಗೆ ತಂದರೆ ಕೆಲವರು ’ಕೇವೆಂ’ಗಳಿಗೆ ತೊಂದರೆಯಾದರೂ ಹಲವು ಮಾಯ್ಸರಿಗೆ ನೆರವಾಗುವುದು.
ನಂನಿ
=====================================
ಮಾಯ್ಸ!