~
ಉ: ಅರಳೀಮರ,ಆಲದಮರ,ಅತ್ತಿಮರ.
- ಉ: ಅರಳೀಮರ,ಆಲದಮರ,ಅತ್ತಿಮರ. By: benaka (Jun 20 2008 - 2:17pm)
- ಉ: ಅರಳೀಮರ,ಆಲದಮರ,ಅತ್ತಿಮರ. By: mahesha (Dec 18 2008 - 9:02am)
- ಉ: ಅರಳೀಮರ,ಆಲದಮರ,ಅತ್ತಿಮರ. By: ಗಣೇಶ (Jun 20 2008 - 11:41pm)
- ಉ: ಅರಳೀಮರ,ಆಲದಮರ,ಅತ್ತಿಮರ. By: Aravind M.S (Jun 20 2008 - 10:56am)

RSS:
ಉ: ಅರಳೀಮರ,ಆಲದಮರ,ಅತ್ತಿಮರ.
ಗಣೇಶ್ ರವರಿಗೆ ನಮಸ್ಕಾರ,
ಲೇಖನಕ್ಕೆ ಧನ್ಯವಾದಗಳು. ಆಲದ ಮರಕ್ಕೆ ಕೆಳಗೆ ಸೂಚಿಸಿದ ಗುಣಗಳಿರುವುದರಿಂದ ಅದು ಪುರುಷಪ್ರಾಯವಾದುದೆಂದು, ತ್ರಿಮೂರ್ತಿಸ್ವರೂಪಿಯೆಂದು ಪರಿಗಣಿಸಲ್ಪಟ್ಟಿದೆ :
೧. ಇದರ ಬೇರುಗಳಿಂದ ಕಷಾಯ ಮಾಡಿ ಕುಡಿದರೆ ಗರ್ಭ ನಿಲ್ಲುತ್ತದೆ. ಆದ್ದರಿಂದ - ಬೇರುಗಳು ಬ್ರಹ್ಮ / ಸೃಷ್ಟಿಶಕ್ತಿಯ ಪ್ರತೀಕ
೨. ಇದರ ಕಾಂಡ, ಕೊಂಬೆಗಳು ಔಷದೀಯ ಗುಣಗಳು ಹೊಂದಿದೆ. ಇದರಿಂದ ಮಾಡುವ ಹೋಮದ ಧೂಪ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ -ಕೊಂಬೆ, ಕಾಂಡ ವಿಷ್ಣು / ಸ್ಥಿತಿಶಕ್ತಿಯ ಪ್ರತೀಕ
೩. ಎಲೆ, ಚಿಗುರಿನ ಕಷಾಯ ಗರ್ಭ ಪಾತಕ್ಕೆ ಉಪಯೋಗಿಸಲಾಗುತ್ತದೆ. ಆದ್ದರಿಂದ - ಎಲೆಗಳು ರುದ್ರ / ಲಯಶಕ್ತಿಯ ಪ್ರತೀಕ
ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ "ನಾನು ವೃಕ್ಷಗಳಲ್ಲಿ ಅಶ್ವತ್ಥ, ಋಷಿಗಳಲ್ಲಿ ಕಶ್ಯಪ, ಮುಂತಾಗಿ ತನ್ನ ವಿಶ್ವರೂಪದರ್ಶನದಲ್ಲಿ ಹೇಳುತ್ತಾನೆ"
ಹೀಗೆ ಅರಳೀ ಮರ ಪುರುಷ ಸಂಕೇತವಾಗಿದೆ. ಅದೇ ರೀತಿ ಆಲದ ಮರ ಸ್ತ್ರೀ ಸಂಕೇತವಾಗಿದೆ (ಪ್ರಾಯಶಃ ಅದರ ಅಗಾಧ ಬೇರುಗಳ ಕಾರಣದಿಂದ). ಈ ಕಾರಣಗಳಿಂದ ಅರಳೀ ಮರ - ಆಲದ ಮರದ ವಿವಾಹದ ಆಚಾರವು ನಡೆಯುತ್ತವೆ
(ಸಂಗ್ರಹ - ವಿದುರಾಷ್ವತ್ಥ ಸ್ಥಳ ಪುರಾಣ)