ಉ: ಪುಣ್ಯಕೋಟಿ ಎಂಬ ಹುಲಿಯು.....
- ಉ: ಪುಣ್ಯಕೋಟಿ ಎಂಬ ಹುಲಿಯು..... By: roopablrao (Jun 21 2008 - 8:38am)
- ಉ: ಪುಣ್ಯಕೋಟಿ ಎಂಬ ಹುಲಿಯು..... By: smurthygr (Jan 15 2008 - 8:53pm)
- ಉ: ಪುಣ್ಯಕೋಟಿ ಎಂಬ ಹುಲಿಯು..... By: ಗಣೇಶ (Jan 15 2008 - 11:20pm)
- ಉ: ಪುಣ್ಯಕೋಟಿ ಎಂಬ ಹುಲಿಯು..... By: veena (Jun 20 2008 - 5:49pm)
- ಉ: ಪುಣ್ಯಕೋಟಿ ಎಂಬ ಹುಲಿಯು..... By: ಗಣೇಶ (Jun 20 2008 - 11:48pm)
- ಉ: ಪುಣ್ಯಕೋಟಿ ಎಂಬ ಹುಲಿಯು..... By: Sunil Jayaprakash (Jun 20 2008 - 10:23pm)
- ಉ: ಪುಣ್ಯಕೋಟಿ ಎಂಬ ಹುಲಿಯು..... By: veena (Jun 20 2008 - 5:49pm)
- ಉ: ಪುಣ್ಯಕೋಟಿ ಎಂಬ ಹುಲಿಯು..... By: ಗಣೇಶ (Jan 15 2008 - 11:20pm)
- ಉ: ಪುಣ್ಯಕೋಟಿ ಎಂಬ ಹುಲಿಯು..... By: sindhu (Nov 2 2007 - 9:24am)
- ಉ: ಪುಣ್ಯಕೋಟಿ ಎಂಬ ಹುಲಿಯು..... By: ಗಣೇಶ (Nov 2 2007 - 11:43pm)


RSS:
ಉ: ಪುಣ್ಯಕೋಟಿ ಎಂಬ ಹುಲಿಯು.....
ವೀಣಾ ಅವರೇ, ಈ ರೀತಿಯ ವೃತ್ತಾಂತಗಳನ್ನು ಕೇಳಕ್ಕೆ ಸಖತ್ತಾಗಿರತ್ತೆ. ಚಿಕ್ಕಮಕ್ಕಳು (ಚಿಕ್ಕವರೇನು, ನಮಗೂ ಕೂಡ) ಅವರಿಗೆ ಯಾವ ರೀತಿ ಕತೆ ಹೋಗಬೇಕು ಅಂತ ಇಷ್ಟವಿರುತ್ತೋ, ಆ ರೀತಿಯೇ ಮುಂದುವರಿಸಿಕೊಂಡು ಹೋಗಿಸಿಸಿಬಿಡುತ್ತಾರೆ.
ನನ್ನ ಕತೆ ಕೇಳಿ. ಈ ದಿನ ಒಂದು ಮದುವೆಗೆ ಹೋಗಿದ್ದೆ. ಸರಿ ತಿಂಡಿಯಾದಾಗಿನಿಂದ ಊಟದ ತನಕ ಏನು ಮಾಡೋದು. ಅಲ್ಲಿ ಈಗಷ್ಟೇ ೨ನೇ ಕ್ಲಾಸಿಗೆ ಸೇರಿರುವ ನನ್ನ ಕಸಿನ್ ಮಗನನ್ನು ನನ್ನ ಮನೆಗೆ ಕರೆದುಕೊಂಡು ಬಂದೆ. ಅವನಿಗೋ ಬಾಯಿ ಬಿಟ್ರೆ, ಬರೀ ಕನ್ನಡ ಹಾಡುಗಳೇ ಬರೋದು. ಅರಮನೆ ಹಾಡುಗಳ ವೀಡಿಯೋ ತೋರಿಸ್ತೀನಿ ಅಂತ ಯೂಟ್ಯೂಬ್ ಹಾಕ್ದೆ. ಅದಾದ ಮೇಲೆ ಸುಮ್ನೆ, "ನಮ್ಮ ಮನೆ ಹತ್ರ ೬ ಅಳಿಲುಗಳು ಯಾವಾಗ್ಲೂ ಆಟ ಆಡ್ತಾ ಇರತ್ತೆ" ಅಂದ್ನಪ್ಪ. ಯಪ್ಪಾ, ಇದನ್ನು ಹೇಳಿದ್ದೇ ತಡ, ತಿಂದ, ತಿಂದ, ಅದೇನ್ ತಲೆ ತಿಂದ ಅಂತೀರಿ. ಅಳಿಲುಗಳು ಏನು ತಿನ್ನತ್ತೆ, ಏನೇನು ಆಟ ಆಡತ್ತೆ. ಎಲ್ಲೆಲ್ಲಿ ಹೋಗತ್ತೆ. ರಿಸ್ಕ್ ಮ್ಯಾನೇಜಮೆಂಟ್ ಹೇಗೆ ಮಾಡತ್ತೆ ಎಲ್ಲ ವಿಚಾರಗಳ ವಿನಿಮಯವೂ ಆಯಿತು. ಒಳ್ಳೆ ಟೈಂಪಾಸ್. ನಾನು ಅವನಿಗೆ ಅಳಿಲುಗಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಪ್ರತಿಯಾಗಿ, ನನಗೆ ಅವನು ಇಂಗ್ಲೀಷ್ ಹೇಳಿಕೊಡ್ತಾನಂತೆ
ಬರೋ ಭಾನುವಾರದಿಂದ ಟ್ಯೂಶನ್ ಶುರು.