ಟ್ರಾಫಿಕ್ ಹೆಚ್ಚಳದಿಂದಾಗಿ ಸಂಪದ ಇಂದು ಸಂಜೆ ಕೆಲಸಮಯ ಲಭ್ಯವಿರಲಿಲ್ಲ. ಪುಟಗಳು ಸರಿಯಾಗಿ ಲೋಡ್ ಆಗದಿದ್ದಲ್ಲಿ ದಯವಿಟ್ಟು ಗಮನಕ್ಕೆ ತನ್ನಿ.
ಉ: ಒ೦ದು ಬೆಚ್ಚನೆಯ ನೆನಪು..
- ಉ: ಒ೦ದು ಬೆಚ್ಚನೆಯ ನೆನಪು.. By: ರೇಖಾ (Jul 20 2008 - 9:45am)
- ಉ: ಒ೦ದು ಬೆಚ್ಚನೆಯ ನೆನಪು.. By: Jayalaxmi.Patil (Jul 15 2008 - 11:43pm)
- ಉ: ಒ೦ದು ಬೆಚ್ಚನೆಯ ನೆನಪು.. By: shylaswamy (Jul 14 2008 - 1:01pm)
- ಉ: ಒ೦ದು ಬೆಚ್ಚನೆಯ ನೆನಪು.. By: rameshbalaganchi (Jul 15 2008 - 6:46pm)
- ಉ: ಒ೦ದು ಬೆಚ್ಚನೆಯ ನೆನಪು.. By: shylaswamy (Jul 15 2008 - 11:13pm)
- ಉ: ಒ೦ದು ಬೆಚ್ಚನೆಯ ನೆನಪು.. By: rameshbalaganchi (Jul 15 2008 - 6:46pm)
- ಉ: ಒ೦ದು ಬೆಚ್ಚನೆಯ ನೆನಪು.. By: ASHOKKUMAR (Jul 14 2008 - 12:18pm)

RSS:
ಉ: ಒ೦ದು ಬೆಚ್ಚನೆಯ ನೆನಪು..
ದೀಪಾ ರವಿಶಂಕರ್ ಅವರೆ,
ನೀವು ನೆಟ್ಟ ಒಂದು ಮರಕ್ಕೆ ಇಷ್ಟು ಸಂಕಟ ಅನುಭವಿಸುವುದಾದರೆ, ನಮ್ಮ ಸಂಕಟಕ್ಕೇನೆನ್ನುತ್ತೀರೋ? ನಮ್ಮ ಕಾಲೇಜಿನ ವಾಹನಗಳ ಸ್ಟ್ಯಾಂಡ್ ಬಳಿ ಇದ್ದ ಒಂದು ಕಕ್ಕೆ ಮರವನ್ನು ಕಡಿದದ್ದಲ್ಲದೆ ಲೈಬ್ರರಿ ಬಳಿಯಲ್ಲಿದ್ದ ಎಷ್ಟೋ ಮರಗಳ ಹರೆಯನ್ನೇ ಕಡಿದುಹಾಕಿಸಿದ್ದಾರೆ. ಕಕ್ಕೆ ಮರವಂತೂ ಬೇಸಿಗೆಯಲ್ಲಿ ಚಿನ್ನದ ಸುರಿಮಳೆ ಅನ್ನುವಂಥ ಹೂಗಳ ರಾಶಿರಾಶಿಯನ್ನೇ ಚೆಲ್ಲುತ್ತಿತ್ತು. ಶಿವಮೊಗ್ಗಾದಲ್ಲಿ ನಮಗೆ ಚಿರಪರಿಚಿತವಾದ ಡಿವಿಎಸ್ ವೃತ್ತದಿಂದ ಹಿಡಿದು ಶಿವಮೂರ್ತಿ ಸರ್ಕಲ್ ಮತ್ತು ಅಲ್ಲಿಂದ ಪಾರ್ವತಿ ನರ್ಸಿಂಗ್ ಹೋಂ ವರೆಗಿದ್ದ ಎಷ್ಟೋ ಮರಗಳು ಈಗೆಲ್ಲಿವೆ? ರಾಜೇಂದ್ರ ನಗರಕ್ಕೆ ನಮ್ಮ ಮನೆಯಿಂದ ನಡೆದುಕೊಂಡು ಹೋಗೋದಕ್ಕೆ ಸ್ಫೂರ್ತಿ, ಪ್ರೇರಣೆ ಕೊಡುತ್ತಿದ್ದ ಆ ಮರಗಳಿಲ್ಲದೆ ಆ ರಸ್ತೆ ಎಲ್ಲ ಸುಡುಬಿಸಿಲಲ್ಲಿ ಬಿಕೋ ಅನ್ನುತ್ತದೆ. ಒಂದರ್ಥದಲ್ಲಿ ನಮ್ಮ ಬಾಲ್ಯದ ಒಂದು ಭಾಗವನ್ನೇ ಕಿತ್ತು ಬಿಸಾಡಿದಂತಾಗಿದೆ. ಸ್ವಲ್ಪ ಸಹಿಸಿಕೊಳ್ಳಿ. ಮುಂದೆ ಇನ್ನೂ ಎಂಥೆಂಥ ಆಘಾತಗಳನ್ನು ಸಹಿಸಲಿಕ್ಕಿದೆಯೋ!!
"ಏರಿದವನು ಚಿಕ್ಕವನಿರಬೇಕು"