ಉ: ಮಾತು ಎಂಬ ಹೊಳೆಯ ನೀರು ಬರೀ ತೀರ್ತಕ್ಕೆ ಸಾಕೇ?
- ಉ: ಮಾತು ಎಂಬ ಹೊಳೆಯ ನೀರು ಬರೀ ತೀರ್ತಕ್ಕೆ ಸಾಕೇ? By: shashikannada (Jul 16 2008 - 6:16pm)
- ಉ: ಮಾತು ಎಂಬ ಹೊಳೆಯ ನೀರು ಬರೀ ತೀರ್ತಕ್ಕೆ ಸಾಕೇ? By: mahesha (Jul 17 2008 - 12:20pm)
- ಉ: ಮಾತು ಎಂಬ ಹೊಳೆಯ ನೀರು ಬರೀ ತೀರ್ತಕ್ಕೆ ಸಾಕೇ? By: shashikannada (Jul 17 2008 - 12:44pm)
- ಉ: ಮಾತು ಎಂಬ ಹೊಳೆಯ ನೀರು ಬರೀ ತೀರ್ತಕ್ಕೆ ಸಾಕೇ? By: mahesha (Jul 17 2008 - 12:54pm)
- ಉ: ಮಾತು ಎಂಬ ಹೊಳೆಯ ನೀರು ಬರೀ ತೀರ್ತಕ್ಕೆ ಸಾಕೇ? By: shashikannada (Jul 17 2008 - 12:44pm)
- ಉ: ಮಾತು ಎಂಬ ಹೊಳೆಯ ನೀರು ಬರೀ ತೀರ್ತಕ್ಕೆ ಸಾಕೇ? By: mahesha (Jul 17 2008 - 12:20pm)

RSS:
ಉ: ಮಾತು ಎಂಬ ಹೊಳೆಯ ನೀರು ಬರೀ ತೀರ್ತಕ್ಕೆ ಸಾಕೇ?
ನಮಸ್ಕಾರ ಮಯೇಸಣ್ಣೋರ್ಗೆ. ಏನು ಬೆಳಗ್ನಿಂದ ಏನೇನೋ ಬರೀತಾನೇ ಇದಾರಲ್ಯ ಏನ್ ಸಮಾಚಾರ ಅಂತೀನಿ?
ಸುಮ್ಕೆ ಬರೀತಾನೇ ಇದ್ರೂ ಒಂದ್ ರೀತಿನಾಗೇ ನೀವು ಏಳೋದೆಲ್ಲ ದಿಟವಾಗೇ ಅದೆ ಕಣ್ ಬುಡಿ.
ಆದ್ರೆ ಆಗ್ಲೆ ಒಂದ್ಕಡೆ ಬರ್ದಿದ್ದರಲ್ಯಾ ದೊಡ್ಡ್ ದೊಡ್ಡ್ ದಾಗೆ ಬರುದ್ರೆ ಓದಕೆ ಸ್ಯಾನೆ ಕಶ್ಟ ಆಯ್ತದೆ ಅದ್ಕೆ ಕಾರಂತ್ರ್, ತೇಜಸ್ವಿಯವರಂಗೆ ಚಿಕ್ ಚಿಕ್ದಾಗೆ ಬರೀಬೇಕು ಅಂತ. ಆದ್ರೆ, ಒಬ್ಬೊಬ್ರುದು ಒಂದೊಂದ್ ಸ್ಟೇಲ್ ಇರ್ತದಲ್ವ? ಕುವೆಂಪು ಅವ್ರು ದೊಡ್ಡ್ದಾಗೆ ಬರೇಯೋದ್ರಲ್ಲಿ ಎತ್ತಿದ್ ಕೈ ಅಂಗಂತ ಅವ್ರ್ಗೆ ಸರಿಯಾಗೆ ಬರೀಯಾಕೆ ಬರಾಕಿಲ್ಲ ಅಂದ್ರೆ ಆಯ್ತದ? ಅಂಗೆ ದ್ಯಾವನೂರ ಮಹಾದೇವ್ರುದು ಸಣ್ಣ್ದಾಗೆ ಬರೆಯೋದ್ರಲ್ಲಿ ನಿಸ್ಸೀಮ್ರು. ಇಲ್ಲೀವರ್ಕೆ ಬರೆ ಸುಮಾರ್ 182 ಪುಟ ಬರ್ದು ಅಶ್ಟೋಂದು ಎಸ್ರು ಮಾಡವ್ರೆ. ಆದ್ರು ಈಗಿನ್ ಕಾಲಕ್ಕೆ ಚಿಕ್ಕ್ದಾಗೆ ಬರುದ್ರೆ ಓದೋರ್ಗೆ ಸುಲ್ಬ ಆಯ್ತದೆ ಅನ್ನಾದ್ರಲ್ಲಿ ಎಲ್ಡ್ ಮಾತಿಲ್ಲ ಕಣ್ರಪ್ಪೋ ಆದ್ರೆ, ಚಿಕ್ಕ್ದಾಗೆ ಬರುದ್ಬುಟ್ಟು ಅರ್ತವಾಗ್ದಂಗೆ ಬರುದ್ರೆ ಮಾತ್ರ ಸ್ಯಾನೆ ಕಷ್ಟ್ವಾಯ್ತದೆ. ಚೆಂದಾಕಿದ್ರೆ ಎಂಗಿದ್ರೂ ಚೆಂದಾಕೆ ಇರ್ತದೆ ಕನ ಯಾಳಿ. "ಟೈಟಾನಿಕ್" ಆಪಾಟಿ ದೊಡ್ ಸಿನ್ಮಾ ಆದ್ರೂನೂವೆ ಪರ್ಪಂಚದಾಗೇ ಬೋಲ್ ಜನ ನಾ ಮುಂದು ತಾ ಮುಂದು ಅಂತ ನೋಡ್ನಿಲ್ವೆ? ದೊಡ್ದಾಗ್ಲಿ, ಚಿಕ್ಕ್ದಾಗ್ಲಿ ಚೆಂದಾಕಿರ್ಬೇಕಷ್ಟೇಯಾ ಅನ್ನಾದು ನನ್ ಅಬಿಪ್ರಾಯ ಕನ್ರಪ್ಪೋ!
ದ್ಯಾವ್ರು ನಿಮ್ನ ಚಂದಾಗ್ ಮಡುಗ್ಲಿ
ವಿಸ್ವಾಸ್ದಾಗೆ,
ಸಸಿ