ಉ: ಭಾಷೆ ಮತ್ತು ನದಿ
- ಉ: ಭಾಷೆ ಮತ್ತು ನದಿ By: girish.rajanal (Jul 16 2008 - 1:23pm)
- ಉ: ಭಾಷೆ ಮತ್ತು ನದಿ By: shreekant.mishrikoti (Jul 16 2008 - 5:08pm)
- ಉ: ಭಾಷೆ ಮತ್ತು ನದಿ By: madhava_hs (Jul 16 2008 - 1:46pm)
- ಉ: ಭಾಷೆ ಮತ್ತು ನದಿ By: Sunil Jayaprakash (Jul 16 2008 - 2:54pm)
- ಉ: ಭಾಷೆ ಮತ್ತು ನದಿ By: madhava_hs (Jul 16 2008 - 4:58pm)
- ಉ: ಭಾಷೆ ಮತ್ತು ನದಿ By: Sunil Jayaprakash (Jul 16 2008 - 11:45pm)
- ಉ: ಭಾಷೆ ಮತ್ತು ನದಿ By: madhava_hs (Jul 16 2008 - 4:58pm)
- ಉ: ಭಾಷೆ ಮತ್ತು ನದಿ By: Sunil Jayaprakash (Jul 16 2008 - 2:54pm)
- ಉ: ಭಾಷೆ ಮತ್ತು ನದಿ By: girish.rajanal (Jul 16 2008 - 1:24pm)
- ಉ: ಭಾಷೆ ಮತ್ತು ನದಿ By: girish.rajanal (Jul 16 2008 - 1:24pm)

RSS:
ಉ: ಭಾಷೆ ಮತ್ತು ನದಿ
ಅಯ್ಯಪ್ಪಾ, ಮಾಧವ, ನನಗೆ ಹೇಗೆ ಹೇಳಬೇಕೋ ಗೊತ್ತಿಲ್ಲ. ಪದಗಳು ಬೇರೆ ಬೇರೆ ಸನ್ನಿವೇಶದಲ್ಲಿ ಬೇರೆ ಬೇರೆ ಅರ್ಥ ಕೊಡತ್ತೆ, ಅನ್ನೋದು ನಿನಗೆ ಗೊತ್ತಿಲ್ವಾ, ನಾನು ಹೊಸದಾಗಿ ಹೇಳಬೇಕಾ.
ಪೈಕಿ => "ಕನ್ನಡಿಗ ಜನಾಂಗದ ಭಾಷೆ ಕನ್ನಡ" ಸರಿಯೋ "ಕನ್ನಡಿಗರ ಪೈಕಿ ಭಾಷೆ ಕನ್ನಡ ಸರಿಯೋ?"
ನೋಡು ಮಾಧವ, ನೀನು, ನಾವು ಬಳಸುವ "ಪೈಕಿ" ಪದವನ್ನು ವಿಮರ್ಶೆ ಮಾಡಬೇಕಿದ್ದರೆ, ಕನ್ನಡದ ನೆಲೆಗಟ್ಟಿನಲ್ಲೆ ಹೇಗೆ ಬಳಸುತ್ತಿದ್ದೇವೋ ಅದರ ಮೂಲಕವೇ ಮಾಡಬೇಕು. "ಕನ್ನಡಿಗ ಜನಾಂಗದ ಭಾಷೆ ಕನ್ನಡ" ಅಂತ ಯಾರೂ ಹೇಳೋದೇ ಇಲ್ಲ, ನಾವು ಹೇಳೋದು "ಕನ್ನಡಿಗರ ಭಾಷೆ ಕನ್ನಡ", ಇಲ್ಲಿ ಜನಾಂಗ ಎಂಬ ಪದವನ್ನು ನಾವು ಬಳಸೋದೇ ಇಲ್ಲ. ಹಾಗಾಗಿ, ಜನಾಂಗಕ್ಕೆ ಪೈಕಿ ಎನ್ನಬಹುದು ಅಂದಮಾತ್ರಕ್ಕೆ, ಮಕ್ಕಿಕಾಮಕ್ಕಿ "Find ಜನಾಂಗ and Replace ಪೈಕಿ" ಮಾಡಕ್ಕೆ ಬರಲ್ಲ. ಇನ್ನು, ಸರಿ ತಪ್ಪು ಪ್ರಶ್ನೆಯೇ ಇಲ್ಲ.
ಅಷ್ಟಾಗಿಯೂ, "ಮಹಾರಾಷ್ಟ್ರದವರು ಮರಾಠಿ ಪೈಕಿನವರು", "ಕನ್ನಡಿಗರು ಕರ್ನಾಟಕ ಪೈಕಿನವರು" ಎಂಬುದು ಸರಿಯಾದ ವಾಕ್ಯರಚನೆ.
ಇನ್ನು ಎರಡನೆಯದು,
>> "ನಿಮ್ಮ ಪೈಕಿ ಯಾರು ಮೊದಲು ಬಂದದ್ದು" ಎನ್ನ ಬಹುದು. ಹಾಗಾದರೆ "ನಿಮ್ಮ ಜನಾಂಗದಲ್ಲಿ ಯಾರು ಮೊದಲು ಬಂದದ್ದು"
ನೋಡು, ಮತ್ತೆ ನೀನು, ತಪ್ಪಲ್ಲದಿದ್ದರೂ, ಈ ಚರ್ಚೆಗೆ ಅನ್ವಯಿಸದ ಉದಾಹರಣೆ ಕೊಡ್ತಾ ಇದ್ದೀಯಾ!! ಎಲ್ಲಿ ಕನ್ನಡಿಗರು "ಪೈಕಿ" ಬಳಸುತ್ತಾರೋ ಅಲ್ಲೆಲ್ಲ ಸುಮ್ಸುಮ್ನೆ ಸಂಸ್ಕೃತದ "ಜನಾಂಗ" ಬಳಸಕ್ಕೆ ಆಗಲ್ಲ. ಮಕ್ಕಿಕಾಮಕ್ಕಿ ಟ್ರಾನ್ಸಲೇಟ್ ಮಾಡೋದು ತರವಲ್ಲ. ವಾಕ್ಯದ ಪೂರ್ಣ ರಚನೆ ನೋಡಿ, ಪೈಕಿ = ಜನಾಂಗವೋ, ಕಂಪಾರಿಸನ್ನಿಗೆ ಬಳಸ್ತಾ ಇರೋ ಸೀಮಿತ ಸೆಟ್ಟೋ, ಹೇಳಬಹುದು.
ಎಲ್ಲಿ ಸಂಸ್ಕೃತದ ಜನಾಂಗ ಬಳಸುತ್ತೀವೆಯೋ, ಅಲ್ಲಿ
೧. ಬಹುತೇಕ ವೇಳೆ ಪೈಕಿ ಬಳಸಿ ಸರಿಯಾದ, ಕ್ರಮಬದ್ಧವಾದ ಕನ್ನಡ ವಾಕ್ಯ ರಚನೆ ಮಾಡಬಹುದು. ಇಲ್ಲಾ,
೨. ಜನಾಂಗ ಪದವನ್ನೇ ಬಳಸದೆ ಇದ್ದರೂ ಅರ್ಥಲೋಪವಾಗುವುದಿಲ್ಲ.
ಆದರೆ ಎಲ್ಲಿ "ಪೈಕಿ" ಬಳಸುತ್ತೇವೆಯೋ ಅಲ್ಲೆಲ್ಲೆ ಮಕ್ಕಿಕಾಮಕ್ಕಿ ಸಂಸ್ಕೃತದ "ಜನಾಂಗ" ಬಳಸಕ್ಕೆ ಆಗಲ್ಲ. ಹಾಗಾಗಿ ಕನ್ನಡದ "ಪೈಕಿ" ಪದಕ್ಕೆ ಸಂಸ್ಕೃತದ ಜನಾಂಗಕ್ಕಿಂತ ಹೆಚ್ಚಿನ ವ್ಯಾಪ್ತಿ ಇದೆ ಎನ್ನಬಹುದು. ನಿನ್ನ ಪರಿಭಾಷೆಯಲ್ಲಿ ಹೇಳುವುದಾದರೆ, ಜನಾಂಗ subset, ಪೈಕಿ superset.
ಉದಾ:
೧. ಅವರು ಕನ್ನಡ ಜನಾಂಗದವರು = ಅವರು ಕನ್ನಡ ಪೈಕಿಯವರು / ಅವರದು ಕನ್ನಡದ ಪೈಕಿ. ಸರಿ.
೨.೧ ನಮ್ಮ ಪೈಕಿ ಒಬ್ರು ಡಾಕ್ಟರ್ ಆದ್ರು != ನಮ್ಮ ಜನಾಂಗದಲ್ಲಿ ಒಬ್ರು ಡಾಕ್ಟರ್ ಆದ್ರು. ತಪ್ಪು.
೨.೨ ನಮ್ಮ ಪೈಕಿ ಒಬ್ರು ಡಾಕ್ಟರ್ ಆದ್ರು = ನಮ್ಮ ಕುಟುಂಬದಲ್ಲಿ(ಅಥ್ವಾ, relatives, ಜಾತಿಯಲ್ಲಿ, ನಾಡಿನಲ್ಲಿ, ದೇಶದಲ್ಲಿ) ಒಬ್ರು ಡಾಕ್ಟರ್ ಆದ್ರು. ಸರಿ. ನಮ್ಮ ಪೈಕಿ ಒಬ್ರು ದೇಶದ ಪ್ರಧಾನಮಂತ್ರಿ ಆದ್ರು = ನಮ್ಮ ರಾಜ್ಯದ ಒಬ್ಬರು ಪ್ರಧಾನ ಮಂತ್ರಿ ಆದ್ರು.
೩ ನಿಮ್ಮದು ಯಾವ ಪೈಕಿ = This could mean, "ನಿಮ್ಮದು ಯಾವ ಜಾತಿ", "ಯಾವ ಒಳಪಂಗಡ", "ಯಾವ ರಾಜ್ಯ", "ನಿಮ್ಮ ಮಾತೃಭಾಷೆ ಯಾವುದು" ? ಇದು ಹೆಚ್ಚಾಗಿ ವಧು-ವರಾನ್ವೇಷಣಾ ಕೇಂದ್ರದಲ್ಲಿ ಬಳಕೆಯಾಗತ್ತೆ.
ಸಂಸ್ಕೃತದಲ್ಲಿಯೂ ಈ ರೀತಿಯ ಪದಗಳಿವೆ. "ನಡುವೆ ಅಂತರವಿರಲಿ", "ಅಲ್ಲಿ ಹರಿಯುವುದು ಅಂತರಗಂಗೆ".